ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದೇಣಿಗೆ ಸಂಗ್ರಹಕ್ಕೆ ಮುಂದಾದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ

Sania Mirza steps forward to raise funds for daily wage workers

ನವದೆಹಲಿ, ಮಾರ್ಚ್ 25: ಕೊರೊನಾವೈರಸ್‌ನಿಂದ ಸಂಕಷ್ಟಕ್ಕೆ ಒಳಗಾಗಲಿರುವ ದಿನಗೂಲಿ ನೌಕರರಿಗೆ ಸಹಾಯ ನೀಡಲು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಮುಂದಾಗಿದ್ದಾರೆ. ಮಾರಕ ಸೋಂಕು ಹಬ್ಬುವುದನ್ನು ತಡೆಗಟ್ಟಲು ಭಾರತದಲ್ಲಿ ಸುಮಾರು ತಿಂಗಳ ಕಾಲ ಲಾಕ್‌ ಡೌನ್‌ ವಿಧಿಸಲಾಗಿದೆ. ಹೀಗಾಗಿ ತೊಂದರೆಗೆ ಈಡಾಗುವ ಮಂದಿಗೆ ಸಹಾಯ ಹಸ್ತ ಚಾಚಲು ಸಾನಿಯಾ ನಿರ್ಧರಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಇನ್ನು ಬಲು ದೂರದ ಮಾತು!ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಇನ್ನು ಬಲು ದೂರದ ಮಾತು!

ಆತಂಕಕಾರಿಯಾಗಿ ಹರಡುತ್ತಿರುವ ಕೋವಿಡ್-19 ಸೋಂಕಿಗೆ ವಿಶ್ವದಾದ್ಯಂತ ಸುಮಾರು 16,000 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿಯೇ ಭಾರತದಲ್ಲಿ ಸುಮಾರು 21 ದಿನಕ್ಕೂ ಹೆಚ್ಚು ಕಾಲ ನಿಷೇಧ ಜಾರಿಗೊಳಿಸಲಾಗಿದೆ. ಈ ಲಾಕ್‌ಡೌನ್ ವೇಳೆ ದಿನ ಸಂಬಳಕ್ಕಾಗಿ ದುಡಿಯುವ ಜನರಿಗೆ ಸಹಜವಾಗೇ ಸಮಸ್ಯೆಯಾಗಲಿದೆ.

ಧೋನಿ ಕ್ಯಾಪ್ಟನ್ಸಿಯಲ್ಲಿ ಹೀರೋ, ಕೊಹ್ಲಿ ನಾಯಕತ್ವದಲ್ಲಿ ಝೀರೋ ಆದ 3 ಸೂಪರ್‌ಸ್ಟಾರ್‌ಗಳುಧೋನಿ ಕ್ಯಾಪ್ಟನ್ಸಿಯಲ್ಲಿ ಹೀರೋ, ಕೊಹ್ಲಿ ನಾಯಕತ್ವದಲ್ಲಿ ಝೀರೋ ಆದ 3 ಸೂಪರ್‌ಸ್ಟಾರ್‌ಗಳು

ಭಾರತದಲ್ಲೂ ಸುಮಾರು 500ಕ್ಕೂ ಹೆಚ್ಚು ಮಂದಿ ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಇದರಲ್ಲಿ ಸುಮಾರು 10 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಇದಕ್ಕಾಗಿಯೇ ಲಾಕ್‌ಡೌನ್ ಜಾರಿಗೊಂಡಿದೆ. ಆದರೆ ಈ ವೇಳೆ ತೊಂದರೆ ಅನುಭವಿಸುವ ಬಡ ಕುಟುಂಬಗಳಿಗೆ ಕುಟುಂಬ ನಿರ್ವಹಿಸಲು ಸಹಾಯ ನೀಡಲು ಸಾನಿಯಾ ಯೋಚಿಸಿದ್ದಾರೆ.

ದಕ್ಷಿಣ ಆಫ್ರಿಕಾದ 2020-21ರ ಗುತ್ತಿಗೆ ಪಟ್ಟಿಯಲ್ಲಿ ಡೇಲ್ ಸ್ಟೇನ್‌ ಹೆಸರಿಲ್ಲ!ದಕ್ಷಿಣ ಆಫ್ರಿಕಾದ 2020-21ರ ಗುತ್ತಿಗೆ ಪಟ್ಟಿಯಲ್ಲಿ ಡೇಲ್ ಸ್ಟೇನ್‌ ಹೆಸರಿಲ್ಲ!

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಶೇರ್ ಮಾಡಿಕೊಂಡಿರುವ ಸಾನಿಯಾ, ಸಫಾ ಸಂಸ್ಥೆಗೆ ಬೆಂಬಲ ನೀಡಿ, ದೇಣಿಗೆ ನೀಡಿ ಎಂದು ಕೋರಿಕೊಂಡಿದ್ದಾರೆ. 'ಇಂಥ ಕಷ್ಟದ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಇರಬೇಕಾಗಿದೆ. ನಾವೇನೋ ಅದೃಷ್ಟವಂತರು. ಆದರೆ ಬಡತನದಲ್ಲಿರುವ ಸಾವಿರಾರು ಮಂದಿ ದೇಶದಲ್ಲಿದ್ದಾರೆ. ನಮ್ಮಿಂದ ಕೈಲಾದಷ್ಟು ಅವರಿಗೆ ಸಹಾಯ ನೀಡೋಣ,' ಎಂದು ಸಾನಿಯಾ ಹೇಳಿದ್ದಾರೆ.

Story first published: Wednesday, March 25, 2020, 12:30 [IST]
Other articles published on Mar 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X