31ನೇ ಬಾರಿಗೆ ಮುಖಾಮುಖಿಯಾಗಲಿದ್ದಾರೆ ಅಕ್ಕ-ತಂಗಿ ಸೆರೆನಾ-ವೀನಸ್

ಬೆಂಗಳೂರು, ಆಗಸ್ಟ್ 13: ಟೆನಿಸ್ ಟೂರ್ನಿಯೊಂದರಲ್ಲಿ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಮುಖಾಮುಖಿಯಾಗುವುದೆಂದರೆ ಆ ಪಂದ್ಯ ತುಂಬಾ ಕುತೂಹಲಕಾರಿ ಎನಿಸುತ್ತದೆ. ಯಾಕೆಂದರೆ ಅದೊಂದು ಬರೀ ಟೆನಿಸ್ ಕದನವಾಗಿರದೆ ಅಕ್ಕ-ತಂಗಿಯರ ನಡುವಿನ ಜಿದ್ದಾಜಿದ್ದಿಯಾಗಿರುತ್ತದೆ.

ಎಡಚರ ದಿನ: ಕ್ರಿಕೆಟ್ ಇತಿಹಾಸದ ಟಾಪ್ 10 ಎಡಗೈ ಬ್ಯಾಟ್ಸ್‌ಮನ್‌ಗಳಿವರು

ಟೆನಿಸ್ ಲೋಕದ ಬಲಿಷ್ಠ ಸಹೋದರಿಯರಾದ ಅಮೆರಿಕಾದ ಸೆರೆನಾ ವಿಲಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಮತ್ತೆ ಮುಖಾಮುಖಿಯಾಗುವುದರಲ್ಲಿದ್ದಾರೆ. ಕೊರೊನಾವೈರಸ್ ಬಳಿಕ ಟೆನಿಸ್ ರಂಗದಲ್ಲೊಂದು ರೋಚಕ ಪಂದ್ಯ ಕಾಣ ಸಿಗಲಿದೆ. ಗೂಗಲ್‌ನಲ್ಲೇ ಪಂದ್ಯದ ಲೈವ್ ಸ್ಕೋರ್ ಲಭಿಸಲಿದೆ.

ಮುಂಬೈ ಇಂಡಿಯನ್ಸ್ ಪರ ಹೆಚ್ಚು ರನ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳು

ಕೆಂಟುಕಿಯಲ್ಲಿ ಗುರುವಾರ (ಆಗಸ್ಟ್ 13) ನಡೆಯಲಿರುವ ವಿಮೆನ್ಸ್ ಟೆನಿಸ್ ಅಸೋಸಿಯೇಶನ್ (ವಿಟಿಎ) ಪಂದ್ಯದಲ್ಲಿ ಸೆರೆನಾ ಮತ್ತು ವೀನಸ್ 31ನೇ ಬಾರಿಗೆ ಸೆಣಸಾಡಲಿದ್ದಾರೆ. ಮಾಜಿ ವಿಶ್ವ ನಂ.1 ಆಟಗಾರ್ತಿಯರ ಕದನ ಕುತೂಹಲ ಮೂಡಿಸಿದೆ. ರಾತ್ರಿ 10 pmಗೆ ಪಂದ್ಯ ನಡೆಯಲಿದೆ.

ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿ

ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಜೋಡಿ ಒಟ್ಟಿಗೆ 30 ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದಿದೆ. ಇದರಲ್ಲಿ ತಂಗಿ, 38ರ ಹರೆಯದ ಸೆರೆನಾ 23 ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಗೆದ್ದಿದ್ದರೆ, ಅಕ್ಕ, 40ರ ಹರೆಯದ ವೀನಸ್ 7 ಬಾರಿ ಪ್ರತಿಷ್ಠಿತ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, August 13, 2020, 16:54 [IST]
Other articles published on Aug 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X