ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆನಿಸ್‌: ಫ್ರೆಂಚ್‌ ಓಪನ್‌ನಿಂದ ಶರಪೋವಾ ಹಿಂದೆ ಸರಿದಿದ್ದೇಕೆ?

Sharapova pulls out of French Open with shoulder injury

ಲಂಡನ್‌, ಮೇ 16: ರಷ್ಯಾದ ಟೆನಿಸ್‌ ತಾರೆ ಹಾಗೂ ಮಾಜಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಮರಿಯಾ ಶರಪೋವಾ ಮುಂಬರುವ ಕ್ಲೇ ಕೋರ್ಟ್‌ ಗ್ರ್ಯಾನ್‌ ಸ್ಲ್ಯಾಮ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

 ಟೆನಿಸ್‌: ವಿಂಬಲ್ಡನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತರೂ 40 ಲಕ್ಷ ರೂ. ಬಹುಮಾನ! ಟೆನಿಸ್‌: ವಿಂಬಲ್ಡನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತರೂ 40 ಲಕ್ಷ ರೂ. ಬಹುಮಾನ!

32 ವರ್ಷದ ಅನುಭವಿ ಆಟಗಾರ್ತಿ ದೀರ್ಘ ಕಾಲದಿಂದ ಭುಜದ ನೋವಿನ ಸಮಸ್ಯೆ ಎದುರಿಸುತ್ತಿದ್ದು, ಅದರಿಂದ ಸಂಪೂರ್ಣವಾಗಿ ಚೇತರಿಸಲಾಗದ ಕಾರಣ ವರ್ಷದ ಎರಡನೇ ಗ್ರ್ಯಾನ್‌ ಸ್ಲ್ಯಾಮ್‌ ಟೂರ್ನಿ ಫ್ರೆಂಚ್‌ ಓಪನ್‌ನಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ. ಗಾಯದ ಸಮಸ್ಯೆ ಸಲುವಾಗಿ ಕಳೆದ ಜನವರಿಯಲ್ಲಿ ಶರಪೋವಾ ಶಸ್ತ್ರಚಿಕಿತ್ಸೆಗೂ ಒಳಪಟ್ಟಿದ್ದರು.

ಭಾರತ ವಿಶ್ವಕಪ್‌ ತಂಡದಲ್ಲಿ ಇದೊಂದು ಕೊರತೆ ಇದೆ: ಗೌತಮ್‌ ಗಂಭೀರ್‌ಭಾರತ ವಿಶ್ವಕಪ್‌ ತಂಡದಲ್ಲಿ ಇದೊಂದು ಕೊರತೆ ಇದೆ: ಗೌತಮ್‌ ಗಂಭೀರ್‌

ಫ್ರೆಂಚ್‌ ಓಪನ್‌ ಅಂಗಣದಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಮರಿಯಾ, ಮೇ 26ರಂದು ಆರಂಭವಾಗಲಿರುವ ಟೂರ್ನಿಯಲ್ಲಿ ಈ ಬಾರಿ ಪಾಲ್ಗೊಳ್ಳುತ್ತಿಲ್ಲ ಎಂಬ ವಿಚಾರವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

"ಫ್ರೆಂಚ್‌ ಓಪನ್‌ನಿಂದ ಇಂದು ಹಿಂದೆ ಸರಿದಿದ್ದೇನೆ. ಕೆಲವೊಮ್ಮೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಷ್ಟು ಸುಲಭವಾಗಿರುವುದಿಲ್ಲ. ಶುಭ ಸುದ್ದಿಯೇನೆಂದರೆ ಅಭ್ಯಾಸಕ್ಕೆ ಮರಳಿದ್ದೇನೆ. ನನ್ನ ಭುಜಬಲವನ್ನು ನಿಧನವಾಗಿ ಹೆಚ್ಚಿಸಿಕೊಳ್ಳುತ್ತಿದ್ದೇನೆ. ಪ್ಯಾರಿಸ್‌ನಲ್ಲಿ ಈಬಾರಿ ಆಡದೇ ಇರುವುದು ನನ್ನನ್ನು ಕಾಡಲಿದೆ. ಮುಂದಿನ ವರ್ಷ ಆಡುವುದನ್ನು ಖಂಡಿತಾ ಎದುರು ನೋಡುತ್ತಿದ್ದೇನೆ,'' ಎಂದು ಶರಪೋವಾ ಬರೆದುಕೊಂಡಿದ್ದಾರೆ.

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬಗ್ಗೆ ಸೆಹ್ವಾಗ್‌ ಏನಂತ್ತಾರೆ?!ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬಗ್ಗೆ ಸೆಹ್ವಾಗ್‌ ಏನಂತ್ತಾರೆ?!

2012 ಮತ್ತು 2014ರಲ್ಲಿ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದಿರುವ ಶರಪೋವಾ, ತಮ್ಮ ರಕ್ತದ ಮಾದರಿಯಲ್ಲಿ ನಿಷೇಧಿತ ಮೆಲ್ಡೋನಿಯಂ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ 15 ತಿಂಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಬಳಿಕ ನಿಷೇಧದ ನಂತರ 2017ರ ಏಪ್ರಿಲ್‌ನಲ್ಲಿ ವೃತ್ತಿ ಬದುಕಿಗೆ ಪುನರಾಗಮನ ಮಾಡಿದ್ದರು.

ಕಳೆದ ವರ್ಷ ಫ್ರೆಂಚ್‌ ಓಪನ್‌ನಲ್ಲಿ ಆಡಿದ್ದ ಅವರು ಕ್ವಾರ್ಟರ್‌ಫೈನಲ್ಸ್‌ ವರೆಗೂ ಮುನ್ನಡೆದಿದ್ದರಾದರೂ, ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ 2-6, 1-6 ಅಂತರದಲ್ಲಿ ಸ್ಪೇನ್‌ನ ಆಟಗಾರ್ತಿ ಗಾರ್ಬಿನಿಯಾ ಮುಗುರುಝಾ ವಿರುದ್ಧ ಸೋಲಿಗೆ ಶರಣಾಗಿದ್ದರು.

ಧೋನಿ, ರೋಹಿತ್‌ ಜೊತೆಗೂಡಿ ವಿಶ್ವಕಪ್‌ಗೆ ರಣತಂತ್ರ ರಚಿಸಲಿರುವ ಕೊಹ್ಲಿಧೋನಿ, ರೋಹಿತ್‌ ಜೊತೆಗೂಡಿ ವಿಶ್ವಕಪ್‌ಗೆ ರಣತಂತ್ರ ರಚಿಸಲಿರುವ ಕೊಹ್ಲಿ

ಇದೇ ವರ್ಷ ಜನವರಿಯಲ್ಲಿ ನಡೆದ ಸೇಂಟ್‌ ಪೀಟರ್ಸ್‌ಬರ್ಗ್‌ ಓಪನ್‌ ಟೂರ್ನಿಯಲ್ಲಿ ಮೊದಲ ಸುತ್ತಿನ ಗೆಲುವಿನ ಬಳಿಕ ಸ್ಪರ್ಧೆಯಿಂದ ನಿವೃತ್ತಿ ಹೊಂದಿದ್ದ 32 ವರ್ಷದ ಆಟಗಾರ್ತಿ ಮರಿಯಾ, ಬಳಿಕ ಈವರೆಗೆ ಯಾವುದೇ ಟೂರ್ನಿಗಳಲ್ಲಿ ಆಡಿಲ್ಲ.

Story first published: Thursday, May 16, 2019, 13:34 [IST]
Other articles published on May 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X