ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆನಿಸ್‌: ಸ್ಟಟ್‌ಗಾರ್ಟ್‌ ಓಪನ್‌ನಿಂದ ಹಿಂದೆ ಸರಿದ ಸಿಮೋನಾ

Simona Halep pulls out of Stuttgart Open

ಸ್ಟಟ್‌ಗಾರ್ಟ್‌, ಏಪ್ರಿಲ್‌ 23: ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ರೊಮೇನಿಯಾದ ತಾರೆ ಸಿಮೋನಾ ಹ್ಯಾಲೆಪ್‌, ಫೆಡ್‌ ಕಪ್‌ ಟೂರ್ನಿ ವೇಳೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿರುವ ಕಾರಣ ಮುಂಬರುವ ಡಬ್ಲ್ಯುಟಿಎ ಸ್ಟಟ್‌ಗಾರ್ಟ್‌ ಓಪನ್‌ ಟೆನಿಸ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

 ಕ್ಲೇ ಕಿಂಗ್‌ ನಡಾಲ್‌ಗೆ ಶಾಕ್‌ ನೀಡಿದ ಫಾಬಿಯೊ ಕ್ಲೇ ಕಿಂಗ್‌ ನಡಾಲ್‌ಗೆ ಶಾಕ್‌ ನೀಡಿದ ಫಾಬಿಯೊ

ಕಳೆದ ವಾರ ನಡೆದ ಫ್ರಾನ್ಸ್‌ ವಿರುದ್ಧದ ಫೆಡ್‌ ಕಪ್‌ ಪಂದ್ಯದ ವೇಳೆ ರೊಮೇನಿಯಾದ ಆಟಗಾರ್ತಿ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಕಳೆದ ವರ್ಷದ ಅಂತ್ಯದ ಹೊತ್ತಿಗೂ ಇದೇ ರೀತಿಯ ಸಮಸ್ಯೆ ಎದುರಿಸಿದ್ದ ಸಿಮೋನಾ, ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಟಕ್ಕೆ ಮರಳಿ ಅಂತಿಮ 16ರ ಘಟ್ಟ ತಲುಪಿದ್ದರು. ಬಳಿಕ ದೋಹಾದಲ್ಲಿ ಫೈನಲ್‌ ಮತ್ತು ಮಿಯಾಮಿ ಓಪನ್‌ನಲ್ಲಿ ಸೆಮಿಫೈನಲ್‌ ತಲುಪಿದ ಸಾಧನೆ ಮಾಡಿದ್ದರು.

ಮುಂಬರುವ ಕ್ಲೇ ಕೋರ್ಟ್‌ ಟೂರ್ನಿಗಳಿಗೆ ಸಿದ್ಧತೆ ಕೈಗೊಳ್ಳಲು ಸಿಮೋನಾ ಅಗತ್ಯದ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ. "ಫೆಡ್‌ ಕಪ್‌ ವೇಳೆ ಫ್ರಾನ್ಸ್‌ನ ಕ್ಯಾರೊಲಿನಾ ಗಾರ್ಸಿಯಾ ವಿರುದ್ಧದ ಪಂದ್ಯದಲ್ಲಿ ಮೊದಲ ಸೆಟ್‌ನಲ್ಲಿ ಆಯತಪ್ಪಿ ಕೆಳಗೆ ಬಿದ್ದಾಗ ಬೆನ್ನಿನ ಕೆಳ ಭಾಗದಲ್ಲಿ ನೋವು ಕಾಣಿಸಿಕೊಂಡಿತು. ಹೀಗಾಗಿ ಶೇ. 100 ರಷ್ಟು ಫಿಟ್ನೆಸ್‌ ಇಲ್ಲದೆ ಅಂಗಣಕ್ಕೆ ಇಳಿಯುವುದಿಲ್ಲ,'' ಎಂದು ಸಿಮೋನಾ ಹೇಳಿದ್ದಾರೆ.

ಫಾಬಿಯೊ ಫಾಗ್ನಿನಿ ಮುಡಿಗೆ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಗರಿಫಾಬಿಯೊ ಫಾಗ್ನಿನಿ ಮುಡಿಗೆ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಗರಿ

ಇದೇ ವೇಳೆ ಮೇನಲ್ಲಿ ನಡೆಯಲಿರುವ ಮ್ಯಾಡ್ರಿಡ್‌ ಓಪನ್‌ ಮತ್ತು ರೋಮ್‌ ಮಾಸ್ಟರ್ಸ್‌ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಆಶಯದಲ್ಲಿದ್ದಾರೆ.

"ಇನ್ನು ಎರಡು ವಾರಗಳ ಕಾಲ ಸಮಯವಿದ್ದು. ತಯ್ನಾಡಿಗೆ ಹಿಂದಿರುಗಿ ವಿಶ್ರಾಂತಿ ತೆಗೆದುಕೊಳ್ಳಲಿದ್ದೇನೆ,'' ಎಂದು ಹ್ಯಾಲೆಪ್‌ ಹೇಳಿದ್ದಾರೆ.

2016ರ ಫ್ರೆಂಚ್‌ ಓಪನ್‌ ಚಾಂಪಿಯನ್‌ ಗಾರ್ಬಿನಿಯಾ ಮುಗುರುಝಾ ಕೂಡ ಈಗಾಗಲೇ ಸ್ಟಟ್‌ಗಾರ್ಟ್‌ ಓಪನ್‌ನಿಂದ ಹಿಂದೆ ಸರಿದಿದ್ದಾರೆ.

Story first published: Tuesday, April 23, 2019, 23:19 [IST]
Other articles published on Apr 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X