ಟೆನಿಸ್ ಲೋಕದಲ್ಲಿ ಬದಲಾವಣೆಯ ಪರ್ವ: ಅಂತ್ಯವಾಯಿತಾ 2 ದಶಕಗಳ ಫೆಡರರ್, ನಡಾಲ್, ಜೊಕೊವಿಕ್ ಅಧಿಪತ್ಯ?

ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಟೆನಿಸ್ ಕೂಡ ಅಗ್ರಸ್ಥಾನದಲ್ಲಿರುವ ಕ್ರೀಡೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಈ ಟೆನಿಸ್ ಪುರುಷರ ವಿಭಾಗದಲ್ಲಿ ಕಳೆದ ಎರಡು ದಶಕಗಳಲ್ಲಿ ಅಧಿಪತ್ಯವನ್ನು ಸಾಧಿಸಿದವರು ಕೇವಲ ಮೂವರು ಆಟಗಾರರು ಮಾತ್ರ. ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ಈ ಅವಧಿಯಲ್ಲಿ ಟೆನಿಸ್‌ನ ಬಹುತೇಕ ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಆದರೆ ಇದೀಗ ಟೆನಿಸ್ ಲೋಕದಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭವಾಗಿದ್ದು ಈ ದಿಗ್ಗಜ ತ್ರಯರ ಅಧಿಪತ್ಯ ಅಂತ್ಯವಾಗುವ ಸಮಯ ಸನ್ನಿಹಿತವಾಗಿದೆಯಾ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಟೆನಿಸ್‌ನಲ್ಲಿ ಕೆಲ ಯುವ ಪ್ರತಿಭಾವಂತ ಆಟಗಾರರು ಅಮೋಘ ಪ್ರದರ್ಶನಗಳನ್ನು ನೀಡುತ್ತಿದ್ದು ದಿಗ್ಗಜ ಆಟಗಾರರಿಗೆ ಸೋಲಿನ ರುಚಿ ತೋಡಿಸುತ್ತಿದ್ದಾರೆ.

ಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆಸಾಧನೆಯ ಸಂಕಲ್ಪ: 9 ವರ್ಷಗಳ ನಂತರ ತವರಿಗೆ ಮರಳುತ್ತಿರುವ MI ಆಟಗಾರನ ರೋಚಕ ಕಥೆ

ಮಿಂಚುತ್ತಿದ್ದಾರೆ ಯುವ ಆಟಗಾರರು: ಕಾರ್ಲೋಸ್ ಅಲ್ಕರೇಜ್, ಡೇನಿಯಲ್ ಮೆಡ್ವೆಡೆವ್, ಅಲೆಕ್ಸಾಂಡರ್ ಜ್ವೆರೆವ್ ಮತ್ತು ಸ್ಟೆಫಾನೋಸ್ ಸಿಟ್ಸಿಪಾಸ್ ಕಳೆದ ಒಂದೆರಡು ವರ್ಷಗಳಲ್ಲಿ ಟೆನಿಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ದಿಗ್ಗಜ ಆಟಗಾರರ ಗೆಲುವಿನ ಓಟಕ್ಕೆ ಅಡ್ಡಿಯಾಗುತ್ತಿದ್ದಾರೆ. ಪ್ರಮುಖ ಗ್ರ್ಯಾಂಡ್‌ಸ್ಲ್ಯಾಮ್‌ಗಳಲ್ಲಿ ಫೆಡರರ್, ನಡಾಲ್ ಜೊಕೊವಿಕ್‌ರಂತಾ ಶ್ರೇಷ್ಠ ಆಟಗಾರರು ಆರಂಭಿಕ ಸುತ್ತಿನಲ್ಲಿಯೇ ಟೂರ್ನಿಯಿಂದ ಹೊರಬೀಳಲು ಈ ಆಟಗಾರರು ಕಾರಣವಾಗುತ್ತಿದ್ದಾರೆ.

ಅಂತ್ಯವಾಯಿತಾ ದಿಗ್ಗಜರ ಅಧಿಪತ್ಯ: ಕಳೆದ ವರ್ಷದ ವಿಂಬಲ್ಡನ್‌ನ ನಂತರ ಸ್ವಿಜರ್ಲ್ಯಾಂಡ್‌ನ ದಿಗ್ಗಜ ರೋಜರ್ ಫಡರರ್ ಯಾವ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿಯೂ ಫೆಡರರ್ ಭಾಗಿಯಾಗಿಲ್ಲ. ಇನ್ನು 2021 ರ ಯುಎಸ್ ಓಪನ್ ಫೈನಲ್‌ನಲ್ಲಿ ಮೆಡ್ವೆಡೆವ್ ವಿರುದ್ಧ ಸೀರಸ ಸೋಲು ಅನುಭವಿಸಿದ ಬಳಿಕ ವಿಶ್ವದ ನಂ.1 ಜೊಕೊವಿಕ್ ಕೇವಲ ಒಂದು ಪ್ರಮುಖ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2021 ಪ್ಯಾರಿಸ್ ಮಾಸ್ಟರ್ಸ್ ಮಾತ್ರವೇ ಗೆದ್ದುಕೊಂಡಿದ್ದಾರೆ. ಇನ್ನು ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ರಾಫೆಲ್ ನಡಾಲ್ ವಿಶ್ವದಾಖಲೆಯ 21 ನೇ ಗ್ರ್ಯಾಂಡ್ ಸ್ಲಾಮ್ ಮುಡಿಗೇರಿಸಿಕೊಂಡಿದ್ದರೂ ನಂತರ ಇಂಡಿಯನ್ ವೆಲ್ಸ್ ಫೈನಲ್‌ನಲ್ಲಿ ಸ್ಪೈನ್‌ನ ದಿಗ್ಗಜ ಆಟಗಾರ ತನ್ನ ಎದುರಾಳಿ ಟೇಲರ್ ಫ್ರಿಟ್ಜ್‌ಗೆ ಶರಣಾದರು.

ಚಿಗುರು ಮೀಸೆ ಯುವಕನಿಗೆ ಶರಣಾದ ಟೆನಿಸ್ ಶ್ರೇಷ್ಠರು: ಟೆನಿಸ್ ದಿಗ್ಗಜರ ಅಧಿಪತ್ಯ ಅಂತ್ಯವಾಯಿತಾ ಎಂಬ ಚರ್ಚೆ ಮುನ್ನೆಲೆಗೆ ಬರಲು ಕಾರಣವಾದ ಮತ್ತೊಂದು ಅಂಶವೆಂದರೆ ಕಳೆದ ವಾರದ ಬೆಳವಣಿಗೆ. ಮ್ಯಾಡ್ರೀಡ್ ಓಪನ್‌ನಲ್ಲಿ ಹದಿಹರೆಯದ ಆಟಗಾರ ಕಾರ್ಲೋಸ್ ಅಲ್ಕರೇಜ್, ನಡಾಲ್ ಹಾಗೂ ಜೊಕೊವಿಕ್ ಇಬ್ಬರಿಗೂ ಸೋಲಿನ ರುಚಿ ತೋರಿಸಿ ಟೂರ್ನಿಯಿಂದ ಹೊರದಬ್ಬಿದರು. ನಡಾಲ್ ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿದ್ದ ಆಲ್ಕರೇಜ್ ಜೊಕೊವಿಕ್‌ಗೆ ಸೆಮಿಫೈನಲ್‌ನಲ್ಲಿ ಸೋಲುಣಿಸಿದ್ದರು. ನಂತರ ಕಾರ್ಲೋಸ್ ಆಲ್ಕರೇಜ್ ಮ್ಯಾಡ್ರೀಡ್ ಓಪನ್‌ನ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಟೆನಿಸ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ.

IPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿIPL ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯೇ ಇಲ್ಲ: ಒಂದರ ಹಿಂದೆ ಮತ್ತೊಂದು ಸರಣಿ

ಇದು ಸಾಮಾನ್ಯ ಎಂದ ನಡಾಲ್: ಟೆನಿಸ್ ಲೋಕದಲ್ಲಿ ನಡೆಯುತ್ತಿರುವ ಈ ಬದಲಾವಣೆಯ ಪರ್ವದ ಬಗ್ಗೆ ಅತಿ ಹೆಚ್ಚು ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ದಾಖಲೆ ಹೊಂದಿರುವ ರಾಫೆಲ್ ನಡಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬದಲಾವಣೆಗಳು ಸಾಮಾನ್ಯ ಎಂದು ಬದಲಾವಣೆಯನ್ನು ಒಪ್ಪಿಕೊಂಡಿದ್ದಾರೆ ದಿಗ್ಗಜ ಆಟಗಾರ. "ನಾನು 36ನೇ ವಸಯಸ್ಸಿನ ಸನಿಹದಲ್ಲಿದ್ದೇನೆ. ನೊವಾಕ್‌ಗೆ 35, ರೋಜರ್ 40. ಕಳೆದ 20 ವರ್ಷಗಳಲ್ಲಿ ಬಹುತೇಕ ಎಲ್ಲಾ ಟೈಟಲ್‌ಗಳನ್ನು ನಾವು ಗೆದ್ದ ಬಳಿಕ ಹೊಸ ಆಟಗಾರರು ಗೆಲುವು ಸಾಧಿಸುವುದು ಸಾಮಾನ್ಯ. ಈ ಬೆಳವಣಿಗೆ ನನ್ನ ಪ್ರಕಾರ ಜೀವನ ಚಕ್ರದಲ್ಲಿ ಸಾಮಾನ್ಯ ಬೆಳವಣಿಗೆ" ಎಂದಿದ್ದಾರೆ ರಾಫೆಲ್ ನಡಾಲ್.

For Quick Alerts
ALLOW NOTIFICATIONS
For Daily Alerts
Story first published: Wednesday, May 11, 2022, 12:04 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X