ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮೀಟೂ ವಿವಾದಕ್ಕೆ ತಿರುವು ನೀಡಿದ ಟೆನಿಸ್‌ ಆಟಗಾರ್ತಿ ಫೆಂಗ್ ಶುಯಿ ಹೇಳಿಕೆ

Tennis star Peng Shuai denies she made accusation of sexual assault against Zhang Gaoli

ಸಿನಿಮಾ ಕ್ಷೇತ್ರದಲ್ಲಿ ಭಾರೀ ದೊಡ್ಡ ಮಟ್ಟದ ವಿವಾದಗಳನ್ನು ಹುಟ್ಟುಹಾಕಿದ್ದ ಮೀಟೂ ಅಭಿಯಾನ ಕ್ರೀಡಾ ಜಗತ್ತಿಗೆ ಕಾಲಿಡುವ ಮೂಲಕ ಭಾರೀ ದೊಡ್ಡ ಮಟ್ಟದ ವಿವಾದವೊಂದಕ್ಕೆ ಕಾರಣವಾಗಿತ್ತು. ಹೌದು, ಚೀನಾದ ಖ್ಯಾತ ಟೆನಿಸ್ ಆಟಗಾರ್ತಿ ಫೆಂಗ್ ಶೂಯಿ ಇದ್ದಕ್ಕಿದ್ದಂತೆ ನವೆಂಬರ್‌ 2ರಂದು ಕಮ್ಯುನಿಸ್ಟ್ ಪಕ್ಷದ ಪ್ರಭಾವಿ ನಾಯಕನಾದ ಝಾಂಗ್ ಗೌಲಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಯಲ್ಲಿ ಮೀಟೂ ಆರೋಪ ಮಾಡಿ ಫೆಂಗ್ ಶುಯಿ ಪೋಸ್ಟ್ ಮಾಡಿದ್ದರು. ಆದರೆ ಕೆಲವೇ ಗಂಟೆಗಳ ನಂತರ ಸಾಮಾಜಿಕ ಜಾಲತಾಣದಿಂದ ಆ ಪೋಸ್ಟ್ ಕಣ್ಮರೆಯಾಯಿತು ಮತ್ತು ಫೆಂಗ್ ಶುಯಿ ಕೂಡ 3 ವಾರಗಳ ಕಾಲ ಹೊರಜಗತ್ತಿನಲ್ಲಿ ಕಾಣಿಸಿಕೊಳ್ಳದೇ ಕಣ್ಮರೆಯಾದರು.

ಹೀಗೆ ಫೆಂಗ್ ಶೂಯಿ ಕಣ್ಮರೆಯಾಗುತ್ತಿದ್ದಂತೆ ಆಕೆಯ ಸಾಮಾಜಿಕ ಜಾಲತಾಣಗಳು ನಿಷ್ಕ್ರಿಯವಾದವು ಮತ್ತು ಫೆಂಗ್ ಶೂಯಿ ಕುರಿತು ಅಂತರ್ಜಾಲದಲ್ಲಿ ಏನೇ ಹುಡುಕಿದರೂ ಸಹ ಯಾವುದೇ ಫಲಿತಾಂಶವೂ ಕೂಡ ಬರುತ್ತಿರಲಿಲ್ಲ. ಹೀಗಾಗಿ ದೊಡ್ಡ ನಾಯಕನ ವಿರುದ್ಧ ಮೀಟೂ ಆರೋಪ ಮಾಡಿದ ಫೆಂಗ್ ಶುಯಿ ಸಮಸ್ಯೆಗೆ ಸಿಲುಕಿ ಹಾಕಿಕೊಂಡಳಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿತ್ತು. ಹಾಗೂ ಫೆಂಗ್ ಶುಯಿ ಹುಡುಕಾಟಕ್ಕಾಗಿ ಸಾಕಷ್ಟು ಯತ್ನಗಳು ಕೂಡ ನಡೆದವು ಮತ್ತು ಆ ಸಂದರ್ಭದಲ್ಲಿ ಫೆಂಗ್ ಶೂಯಿಗೆ ಅನ್ಯಾಯವಾಗಿದೆ ಆಕೆಗೆ ನ್ಯಾಯ ದೊರಕಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ದನಿ ಎತ್ತಿದರು ಹಾಗೂ ಫೆಂಗ್ ಶುಯಿ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಮಹಿಳಾ ಟೆನಿಸ್ ಸರ್ಕ್ಯೂಟ್ ಚೀನಾದಲ್ಲಿ ಎಲ್ಲಾ ಪಂದ್ಯಾವಳಿಗಳನ್ನು ಸ್ಥಗಿತಗೊಳಿಸುತ್ತಿದೆ ಎಂದು ವುಮೆನ್ಸ್ ಟೆನಿಸ್ ಅಸೋಸಿಯೇಶನ್ ಅಧ್ಯಕ್ಷ ಸ್ಟೀವ್ ಸೈಮನ್ ನಿರ್ಧಾರ ಕೈಗೊಂಡಿದ್ದರು.

ವಿಜಯ್ ಹಜಾರೆ ಟ್ರೋಫಿ: ರಾಜಸ್ಥಾನ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು: ಕ್ವಾರ್ಟರ್‌ಫೈನಲ್‌ಗೆ ಪ್ರವೇಶವಿಜಯ್ ಹಜಾರೆ ಟ್ರೋಫಿ: ರಾಜಸ್ಥಾನ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು: ಕ್ವಾರ್ಟರ್‌ಫೈನಲ್‌ಗೆ ಪ್ರವೇಶ

ಹೀಗೆ ಫೆಂಗ್ ಶೂಯಿ ಕುರಿತಾಗಿ ಮಹಿಳಾ ಟೆನಿಸ್ ಸರ್ಕ್ಯೂಟ್ ತೆಗೆದುಕೊಂಡ ನಿರ್ಧಾರ ಪ್ರಪಂಚದ ಕ್ರೀಡಾಭಿಮಾನಿಗಳ ಚಿತ್ತವನ್ನು ತನ್ನತ್ತ ಸೆಳೆದಿತ್ತು ಮತ್ತು ಈ ಪ್ರಕರಣದ ಕುರಿತು ವಿಶ್ವದಾದ್ಯಂತ ಕ್ರೀಡಾಭಿಮಾನಿಗಳು ಕುತೂಹಲದಿಂದ ನೋಡಲಾರಂಭಿಸಿದರು. ಹೀಗೆ ಕಣ್ಮರೆಯಾಗಿ ದಿಢೀರನೆ ಪತ್ತೆಯಾದ ಫೆಂಗ್ ಶುಯಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್ ಜೊತೆ ಮಾತನಾಡಿದ್ದರು. ಇಷ್ಟೆಲ್ಲಾ ವಿದ್ಯಮಾನಗಳು ಜರುಗಿದ ನಂತರ ಒಲಿಂಪಿಕ್ ಸಮಿತಿ ಮತ್ತು ಚೀನಾ ಸರ್ಕಾರ ಫೆಂಗ್ ಶೂಯಿ ಪ್ರಕರಣವನ್ನು ಅಂತ್ಯಗೊಳಿಸಲು ತೀರ್ಮಾನಿಸಿತ್ತು.

ಇಷ್ಟೆಲ್ಲಾ ಆದರೂ ಸಹ ಫೆಂಗ್ ಶೂಯಿ ಬಹಿರಂಗವಾಗಿ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಕುರಿತಾಗಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿರಲಿಲ್ಲ ಮತ್ತು ವಿವಾದದ ಕುರಿತು ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಆದರೆ ಇದೀಗ ಇದೇ ಮೊದಲ ಬಾರಿಗೆ ಈ ಕುರಿತಾಗಿ ಮುಕ್ತವಾಗಿ ಮಾತನಾಡಿರುವ ಫೆಂಗ್ ಶುಯಿ "ಮೊದಲಿಗೆ ನಾನು ಒಂದು ವಿಷಯದ ಕುರಿತಾದ ಗೊಂದಲವನ್ನು ಇತ್ಯರ್ಥಪಡಿಸಲು ಇಚ್ಛಿಸುತ್ತೇನೆ. ನಾನು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಎಲ್ಲಿಯೂ ಬರೆದುಕೊಂಡಿಲ್ಲ ಮತ್ತು ಹೇಳಿಕೊಂಡಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿಚ್ಛಿಸುತ್ತೇನೆ" ಎಂದು ಹೇಳಿಕೆ ನೀಡುವುದರ ಮೂಲಕ ತಾನು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪೋಸ್ಟ್ ಹಾಕಿರಲಿಲ್ಲ ಎಂದಿದ್ದಾರೆ. ಈ ರೀತಿ ಹೇಳಿಕೆ ನೀಡುವುದರ ಮೂಲಕ ತಾನು ಕಮ್ಯುನಿಸ್ಟ್ ಪಕ್ಷದ ಪ್ರಭಾವಿ ನಾಯಕನಾದ ಝಾಂಗ್ ಗೌಲಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿಯೇ ಇಲ್ಲ ಎಂದು ಫೆಂಗ್ ಶುಯಿ ಹೇಳಿದ್ದಾರೆ.

ಫೆಂಗ್ ಶುಯಿ ನೀಡಿದ ಈ ಹೇಳಿಕೆಯಿಂದ ಇಲ್ಲಿಯವರೆಗೂ ಝಾಂಗ್ ಗೌಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹರಿದಾಡುತ್ತಿದ್ದ ವಿವಾದ ತಿರುವು ಪಡೆದುಕೊಂಡಿದ್ದು ಇದೀಗ ತಣ್ಣಗಾಗಿ ಹೋಗಿದೆ.

ಭಾರತ vs ದ.ಆಫ್ರಿಕಾ: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳಿಗೆ ಬೇಸರದ ಸುದ್ದಿಭಾರತ vs ದ.ಆಫ್ರಿಕಾ: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳಿಗೆ ಬೇಸರದ ಸುದ್ದಿ

ಫೆಂಗ್ ಶುಯಿ ಯಾರು?

ಫೆಂಗ್ ಶೂಯಿ ಚೀನಾ ದೇಶದ ಖ್ಯಾತ ಟೆನಿಸ್ ಆಟಗಾರ್ತಿ. ಇದುವರೆಗೂ ಒಟ್ಟು 3 ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಫೆಂಗ್ ಶುಯಿ ಸದ್ಯ ಸಿಂಗಲ್ಸ್‌ನಲ್ಲಿ 189ನೇ ಶ್ರೇಯಾಂಕ ಮತ್ತು ಡಬಲ್ಸ್‌‌ನಲ್ಲಿ 248ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ. 2013ರಲ್ಲಿ ವಿಂಬಲ್ಡನ್ ಡಬಲ್ಸ್ ಚಾಂಪಿಯನ್ ಆಗಿದ್ದ ಫೆಂಗ್ ಶುಯಿ, 2014ರಲ್ಲಿ ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್ ಆಗಿದ್ದರು. ಈ ಬಳಿಕ ಡಬಲ್ಸ್‌‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದ ಫೆಂಗ್ ಶುಯಿ 2014ರಲ್ಲಿ ನಡೆದ ಯುಎಸ್ ಟೆನಿಸ್ ಓಪನ್ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.

Story first published: Tuesday, December 21, 2021, 10:28 [IST]
Other articles published on Dec 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X