ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಐತಿಹಾಸಿಕ ಸಾಧನೆ ಮಾಡುತ್ತಾರಾ ಟೆನಿಸ್ ತಾರೆ ಜೊಕೋವಿಕ್!

Tokyo Olympics : Novak Djokovic keeps his Golden Slam hopes alive as reaching the third round

ಟೋಕಿಯೋ, ಜುಲೈ 26: ಗೆಲುವಿನ ಗೆಲುವು ಸಾಧಿಸುತ್ತಾ ಗ್ರಾಂಡ್‌ಸ್ಲ್ಯಾಮ್‌ಗಳನ್ನು ಮುಡಿಗೇರಿಸಿಕೊಳ್ಳುತ್ತಿರುವ ಸರ್ಬಿಯಾ ಮೂಲದ ಟೆನಿಸ್ ತಾರೆ ನೋವಾಕ್ ಜೊಕೋವಿಕ್ ಈ ಬಾರಿಯ ಒಲಿಂಪಿಕ್ಸ್‌ನಲ್ಲಿಯೂ ತನ್ನ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜೊಕೋವಿಕ್ ಮೂರನೇ ಸುತ್ತಿಗೆ ಕಾಲಿಟ್ಟಿದ್ದಾರೆ. ಈ ಮೂಲಕ ಟೆನಿಸ್ ಇತಿಹಾಸದಲ್ಲಿ ಯಾವ ಪುರುಷ ಟೆನಿಸ್ ಆಟಗಾರ ಕೂಡ ಸಾಧಿಸಲಾಗದ ಗೋಲ್ಡನ್ ಸ್ಲ್ಯಾಮ್‌ಗೆ ಹತ್ತಿರವಾಗುತ್ತಿದ್ದಾರೆ.

ನೋವಾಕ್ ಜೊಕೋವಿಕ್ ಟೆನಿಸ್‌ನಲ್ಲಿ ಪುರುಷ ಆಟಗಾರನಿಂದ ಈವರೆಗೆ ಮಾಡಲಾಗದ ಸಾಧನೆಯನ್ನು ಮಾಡಲು ಅವಕಾಶ ಹೊಂದಿದ್ದಾರೆ. ಒಂದು ವರ್ಷದಲ್ಲಿ ಈವರೆಗೆ ಯಾವ ಟೆನಿಸ್ ಆಟಗಾರ ಕೂಡ ಎಲ್ಲಾ ಪ್ರಮುಖ ನಾಲ್ಕು ಗ್ರ್ಯಾಂಡ್‌ಸ್ಲಾಮ್ ಹಾಗೂ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ಇತಿಹಾಸವಿಲ್ಲ. ಈ ದಾಖಲೆಯನ್ನು 'ಗೋಲ್ಡನ್ ಸ್ಲ್ಯಾಮ್' ಎನ್ನಲಾಗುತ್ತದೆ. ಈ ವಿಶೇಷ ಸಾಧನೆ ಮಾಡಿದ ಪ್ರಥಮ ಪುರುಷ ಟೆನಿಸ್ ಆಟಗಾರ ಎನಿಸಿಕೊಳ್ಳುತ್ತಾರಾ ಜೊಕೊವಿಕ್ ಎಂಬುದು ಈಗ ಕುತೂಹಲ ಮೂಡಿಸಿದೆ.

ಟೋಕಿಯೋ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ ಭಾರತೀಯ ಬಿಲ್ಲುಗಾರರುಟೋಕಿಯೋ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ ಭಾರತೀಯ ಬಿಲ್ಲುಗಾರರು

ಒಟ್ಟಾರೆಯಾಗಿ ಟೆನಿಸ್ ಇತಿಹಾಸದಲ್ಲಿ ಗೋಲ್ಡನ್ ಸ್ಲ್ಯಾಮ್ ಸಾಧನೆ ಮಾಡಿದ ಏಕೈಕ ನಿದರ್ಶನವಿದೆ. 1988ರಲ್ಲಿ ಜರ್ಮನಿಯ ಮಹಿಳಾ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್ ಗೋಲ್ಡನ್ ಸ್ಲ್ಯಾಮ್ ದಾಖಲೆ ಬರೆದಿದ್ದರು. ಪುರುಷ ಟೆನಿಸ್ ಆಟಗಾರರ ಪೈಕಿ ಈವರೆಗೂ ಇದು ಯಾರಿಂದಲೂ ಸಾಧ್ಯವಾಗಿಲ್ಲ. ಹೀಗಾಗಿ ಜೊಕೋವಿಕ್ ಪ್ರದರ್ಶನ ಈಗ ಕುತೂಹಲ ಮೂಡಿಸಿದೆ.

ಸರ್ಬಿಯಾದ ಈ ಸ್ಟಾರ್ ಆಟಗಾರ ಈ ವರ್ಷದ ಪ್ರಮುಖ ಮೂರು ಗ್ರಾಂಡ್‌ಸ್ಲಾಮ್‌ಗಳನ್ನು ಗೆದ್ದಾಗಿದೆ. ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಟೂರ್ನಿಗಳನ್ನು ಗೆದ್ದು ಪ್ರಶಸ್ತಿ ಎತ್ತಿ ಹಿಡಿದಿರುವ ಜೊಕೋವಿಕ್ ಈ ಅತ್ಯಂತ ವಿಶೇಷ ದಾಖಲೆಯನ್ನು ನಿರ್ಮಿಸಲು ಟೋಕಿಯೋ ಒಲಿಂಪಿಕ್ಸ್ ಹಾಗೂ ಯುಎಸ್‌ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಬೇಕಿದೆ.

ಟೋಕಿಯೋ ಒಲಿಂಪಿಕ್ಸ್: ಸಾತ್ವಿಕ್‌ಸಾಯ್‌ರಾಜ್-ಚಿರಾಗ್ ಜೋಡಿಗೆ ಸೋಲುಟೋಕಿಯೋ ಒಲಿಂಪಿಕ್ಸ್: ಸಾತ್ವಿಕ್‌ಸಾಯ್‌ರಾಜ್-ಚಿರಾಗ್ ಜೋಡಿಗೆ ಸೋಲು

ಟೋಕಿಯೋ ಒಲಿಂಪಿಕ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಜೊಕೋವಿಕ್ ಜರ್ಮನಿಯ ಜಾನ್ ಲೆನ್ನಾರ್ಡ್ ಸ್ಟ್ರಫ್ ವಿರುದ್ಧ 6-4, 6-3 ಅಂತರದಿಂದ ಗೆದ್ದು ಮುನ್ನಡೆದಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

Story first published: Monday, July 26, 2021, 16:28 [IST]
Other articles published on Jul 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X