ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್ 2022: ಗಾಯದ ಕಾರಣದಿಂದಾಗಿ ಹಿಂದಕ್ಕೆ ಸರಿದ ಸಾನಿಯಾ ಮಿರ್ಜಾ

US Open 2022: Sania Mirza withdraws from US Open because of injury

ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗಾಯದ ಕಾರಣದಿಂದಾಗಿ ಯುಎಸ್ ಓಪನ್‌ನಿಂದ ಹಿಂದಕ್ಕೆ ಸರಿಯುತ್ತಿದ್ದಾರೆ ಎಂದು ಘೋಷಿಸಿದ್ದಾರೆ. ತೋಳು ಹಾಗೂ ಮೊಣಕೈ ಗಾಯಕ್ಕೆ ತುತ್ತಾಗಿರುವ ಸಾನಿಯಾ ಮಿರ್ಜಾ ಪ್ರತಿಷ್ಠಿತ ಗ್ರ್ಯಾನ್‌ಸ್ಲ್ಯಾಮ್‌ನಿಂದ ಹಿಂದಕ್ಕೆ ಸರಿದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿಯನ್ನು ಸಾನಿಯಾ ಮಿರ್ಜಾ ಹಂಚಿಕೊಂಡಿದ್ದಾರೆ. "ಹಿತಕರವಲ್ಲದ ಸುದ್ದಿಯೊಂದನ್ನು ತಿಳಿಸುತ್ತಿದ್ದೇನೆ. ಕೆನಡಾದಲ್ಲಿ ಆಡುತ್ತಿದ್ದಾಗ ಎರಡು ವಾರಗಳ ಹಿಂದೆ ಮೊಣಕೈ ಗಾಯಕ್ಕೆ ಒಳಗಾಗಿದ್ದೆ. ನಿನ್ನೆ ಸ್ಕ್ಯಾನ್ ಮಾಡಿಸುವವರೆಗೆ ಎಷ್ಟು ತೀವ್ರವಾಗಿದೆ ಎಂಬುದನ್ನು ನಾನು ತಿಳಿದಿರಲಿಲ್ಲ. ದುರದೃಷ್ಟವಶಾತ್ ನನ್ನ ಸ್ನಾಯುರಜ್ಜುಗೆ ಘಾಸಿತಾಗಿದೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ ಸಾನಿಯಾ ಮಿರ್ಜಾ.

ಏಷ್ಯಾಕಪ್ 2022: ಕೊಹ್ಲಿ, ಅನುಷ್ಕಾ ಜತೆ ದುಬೈಗೆ ಹಾರಿದ ರೋಹಿತ್ ಶರ್ಮಾ; ಇಲ್ಲ ದ್ರಾವಿಡ್!ಏಷ್ಯಾಕಪ್ 2022: ಕೊಹ್ಲಿ, ಅನುಷ್ಕಾ ಜತೆ ದುಬೈಗೆ ಹಾರಿದ ರೋಹಿತ್ ಶರ್ಮಾ; ಇಲ್ಲ ದ್ರಾವಿಡ್!

ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ಗೇರಿದ್ದ ಸಾನಿಯಾ ಜೋಡಿ

ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ಗೇರಿದ್ದ ಸಾನಿಯಾ ಜೋಡಿ

ಕಳೆದ ತಿಂಗಳು ವಿಂಬಲ್ಡನ್‌ನಲ್ಲಿ ಸಾನಿಯಾ ಮಿರ್ಜಾ ಕ್ರೊಯೇಷಿಯಾದ ಜೊತೆಗಾರ ಮೇಟ್ ಪಾವಿಕ್ ಜೊತೆಗೆ ಮಿಶ್ರ ಡಬಲ್ಸ್‌ನಲ್ಲಿ ಭಾಗಿಯಾಗಿದ್ದರು. ಸೆಮಿಫೈನಲ್ ಹಂತದವರೆಗೆ ತಲುಪಿದ್ದ ಈ ಜೋಡಿ ಈ ಹಂತದಲ್ಲಿ ಸೋಲು ಅನುಭವಿಸಿ ಹೊರಬಿದ್ದಿದ್ದರು. 2009 ಮತ್ತು 2012 ರಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಕ್ರಮವಾಗಿ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದ ಸಾನಿಯಾ, ವಿಂಬಲ್ಡನ್‌ನಲ್ಲಿ ತಮ್ಮ ಚೊಚ್ಚಲ ಮಿಶ್ರ ಡಬಲ್ಸ್ ಫೈನಲ್‌ಗೇರುವ ನಿರೀಕ್ಷೆ ಮೂಡಿಸಿದ್ದರು.

ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು 2014 ರಲ್ಲಿ ಬ್ರೂನೋ ಸೋರೆಸ್ ಅವರೊಂದಿಗೆ ಮಿಶ್ರ ಡಬಲ್ಸ್ ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ. ಈ ಬಾರಿಯ ಯುಎಸ್ ಓಪನ್ ಮುಂದಿನ ಸೋಮವಾರದಿಂದ ಆರಂಭವಾಗಲಿದೆ.

ಭಾರತದ ಪರ ಅತ್ಯುತ್ತಮ ಸಾಧನೆ

ಭಾರತದ ಪರ ಅತ್ಯುತ್ತಮ ಸಾಧನೆ

ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದ ಮೊದಲಾರ್ಧದಲ್ಲಿ ಸಮರ್ಥ ಸಿಂಗಲ್ಸ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಆದರೆ 2013ರಲ್ಲಿ ಮೊಣಕೈ ಗಾಯಕ್ಕೆ ತುತ್ತಾದ ಸಾನಿಯಾ ಬಳಿಕ ಕೇವಲ ಡಬಲ್ಸ್ ವಿಭಾಗದತ್ತ ಗಮನಹರಿಸಿದರು. ಇದಕ್ಕೂ ಮುನ್ನ 2007ರಲ್ಲಿ ಸಾನಿಯಾ ಮಿರ್ಜಾ ಸಿಂಗಲ್ಸ್‌ನಲ್ಲಿ ತಮ್ಮ ಅತ್ಯುನ್ನತ 27ನೇ ಶ್ರೇಯಾಂಕವನ್ನು ಗಳಿಸಿದ್ದರು. ಇದು ಭಾರತೀಯ ಟೆನಿಸ್ ಆಟಗಾರರ ಪೈಕಿ ಸಿಂಗಲ್ಸ್ ವಿಭಾಗದ ಅತ್ಯುತ್ತಮ ಸಾಧನೆಯೂ ಹೌದು.

IND vs ZIM: ಮಂಕಡಿಂಗ್ ಮಾಡಿದರೂ ಔಟ್‌ಗೆ ಮನವಿ ಮಾಡದ ದೀಪಕ್ ಚಹಾರ್; ವಿಡಿಯೋ ವೈರಲ್

ಸ್ಟಾರ್ ಆಟಗಾರರಿಲ್ಲದೆ ಕಳೆಗುಂದಲಿದೆಯಾ ಯುಎಸ್ ಓಪನ್

ಸ್ಟಾರ್ ಆಟಗಾರರಿಲ್ಲದೆ ಕಳೆಗುಂದಲಿದೆಯಾ ಯುಎಸ್ ಓಪನ್

ಜರ್ಮನಿಯ ಟೆನಿಸ್ ಆಟಗಾರ, ವಿಶ್ವದ ನಂಬರ್ 2 ಶ್ರೇಯಾಂಕಿತ ಅಲೆಕ್ಸಾಂಡರ್ ಝ್ವೆರೇವ್ ಮುಂಬರುವ ಯುಎಸ್ ಓಪನ್‌ನಿಂದ ಹಿಂದಕ್ಕೆ ಸರಿದಿದ್ದಾರೆ. ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಅಲೆಕ್ಸಾಂಡರ್ ಝ್ವೆರೇವ್ ನಿರೀಕ್ಷಿತ ಸಮಯದೊಳಗೆ ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದಿರುವ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. 25ರ ಹರೆಯದ ಅಲೆಕ್ಸಾಂಡರ್ ಝ್ವೆರೇವ್ ಕಳೆದ ಜೂನ್‌ ತಿಂಗಳಿನಲ್ಲಿ ನಡೆದ ಫ್ರೆಂಚ್ ಓಪನ್‌ನಲ್ಲಿ ಭಾಗಿಯಾಗಿದ್ದರು. ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ತಲುಪಿದ್ದ ಅವರು ರಾಫೆಲ್ ನಡಾಲ್ ವಿರುದ್ಧ ನಡೆದ ನಾಲ್ಕರ ಘಟ್ಟದ ಕದನದಲ್ಲಿ ಗಾಯಗೊಂಡು ಆಡಲು ಅಸಮರ್ಥರಾಗಿದ್ದರು.

ಮತ್ತೊಂದೆಡೆ ನಿರಂತರ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರೋಜರ್ ಫೆಡರರ್ ಕೂಡ ಯುಎಸ್ ಓಪನ್‌ನಲ್ಲಿ ಭಾಗಿಯಾಗುತ್ತಿಲ್ಲ. ಹೀಗಾಗಿ ಸ್ಟಾರ್‌ಗಳ ಅಲಭ್ಯತೆಯಿಂದ ಈ ಬಾರಿಯ ಯುಎಸ್ ಓಪನ್ ನಿರಾಸೆ ಮೂಡಿಸಿದೆ. 21 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರು ಲಸಿಕೆ ಹಾಕದ ಕಾರಣ ಈ ಟೂರ್ನಿಯಲ್ಲಿ ಭಾಗವಹಿಸುವುದು ಅಸಾಧ್ಯ ಎನ್ನಲಾಗುತ್ತಿದೆ.

Story first published: Wednesday, August 24, 2022, 10:42 [IST]
Other articles published on Aug 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X