ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸೆರೆನಾ ಯುಗಾಂತ್ಯ: US ಓಪನ್‌ನ 3ನೇ ಸುತ್ತಿನಲ್ಲಿ ಸೋಲು, ಟೆನಿಸ್‌ಗೆ ವಿಲಿಯಮ್ಸ್‌ ವಿದಾಯ

serena williams

ಯುಎಸ್ ಓಪನ್‌ನ ಮೂರನೇ ಸುತ್ತಿನಲ್ಲಿ ಸೋಲುವ ಮೂಲಕ ಅಮೆರಿಕದ ಟೆನಿಸ್ ಲೆಜೆಂಡ್ ಸೆರೆನಾ ವಿಲಿಯಮ್ಸ್ ಟೆನಿಸ್ ಅಂಗಳಕ್ಕೆ ವಿದಾಯ ಹೇಳಿದರು. ಈ ಟೂರ್ನಿಯು ತನ್ನ ಕೊನೆಯ ಗ್ರ್ಯಾಂಡ್‌ಸ್ಲ್ಯಾಮ್‌ ಫೈಟ್ ಆಗಿದ್ದು, ನಿವೃತ್ತಿ ಘೋಷಿಸುವುದಾಗಿ ಈ ಹಿಂದೆಯೇ ಸೆರೆನಾ ಘೋಷಿಸಿದ್ದರು.

ತನ್ನ 24ನೇ ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿಯನ್ನ ಗೆಲ್ಲುವ ಕನಸನ್ನ ನನಸು ಮಾಡುವಲ್ಲಿ ಸಾಧ್ಯವಾಗದ ಸೆರೆನಾ ವಿಲಿಯಮ್ಸನ್‌ ಯುಎಸ್ ಓಪನ್ 3ನೇ ಸುತ್ತಿನಲ್ಲಿ ಶನಿವಾರ(ಸೆ.3) ಆಸ್ಟ್ರೇಲಿಯಾದ ಎದುರಾಳಿ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಷ್ಟೇ ಅಲ್ಲದೆ, ಭಾವುಕರಾಗಿ ಟೆನಿಸ್ ಅಂಗಳಕ್ಕೆ ಗುಡ್‌ಬೈ ಹೇಳಿದ್ದಾರೆ.

ಅಜ್ಲಾ ಟೊಮಿಲ್ಜಾನೋವಿಕ್ ವಿರುದ್ಧ ಸೋತ ಸೆರೆನಾ

ಅಜ್ಲಾ ಟೊಮಿಲ್ಜಾನೋವಿಕ್ ವಿರುದ್ಧ ಸೋತ ಸೆರೆನಾ

ಯುಎಸ್ ಓಪನ್ ಮೂರನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಜ್ಲಾ ಟೊಮಿಲ್ಜಾನೋವಿಕ್ ವಿರುದ್ಧ 40 ವರ್ಷದ ಸೆರೆನಾ ವಿಲಿಯಮ್ಸನ್ ಬರೋಬ್ಬರಿ 3 ಗಂಟೆ 5 ನಿಮಿಷಗಳ ಹೋರಾಟದಲ್ಲಿ ಕೊನೆಗೂ ಸೋಲನ್ನ ಒಪ್ಪಿಕೊಂಡರು. 7-5, 6-7, 6-1 ಸೆಟ್‌ಗಳಿಂದ ಸೋತ ಸೆರೆನಾ ಮೊದಲ ಸೆಟ್‌ ಗೆದ್ದ ಬಳಿಕ, ನಂತರದ ಎರಡು ಸೆಟ್‌ಗಳಲ್ಲಿ ಸೋತರು. ತಮ್ಮ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳ ಮುಂದೆ ಸೆರೆನಾ ಕಣ್ಣೀರು ಹಾಕುತ್ತಾ ಬೀಳ್ಕೊಟ್ಟರು.

2ನೇ ಸುತ್ತಿನಲ್ಲಿ ವಿಶ್ವದ 2 ರ್ಯಾಂಕ್ ಆಟಗಾರ್ತಿಯನ್ನ ಸೋಲಿಸಿದ್ದರು!

ಎರಡನೇ ಸುತ್ತಿನಲ್ಲಿ ಸೆರೆನಾ ವಿಶ್ವದ ಎರಡನೇ ಶ್ರೇಯಾಂಕಿತೆ ಆನೆಟ್ ಕೊಂಟಾವೆಟ್ ಅವರನ್ನು ಸೋಲಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಪಂದ್ಯದ ನಂತರ ಸೆರೆನಾ ಅವರು ಸಾಬೀತುಪಡಿಸಲು ಅಥವಾ ಸಾಧಿಸಲು ಇನ್ನೇನು ಇಲ್ಲ ಎಂದು ಹೇಳಿದರು. ಟೆನಿಸ್ ವೃತ್ತಿಜೀವನವನ್ನು ನೋಡಿದರೆ, ತಾರೆಯರ ಮಾತುಗಳು ಬಹುತೇಕ ಒಂದೇ ಆಗಿವೆ. ಸೆರೆನಾ ಎಲ್ಲಾ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸತತ ಮೂರನೇ ಸುತ್ತಿಗೆ ಪ್ರವೇಶಿಸಿದ್ದ ಸೆರೆನಾ ಅವರ ಪಂದ್ಯವನ್ನು ವೀಕ್ಷಿಸಲು 29 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಬಂದಿರುವುದು ಸೆರೆನಾ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಟಿ20 ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್‌ಗೆ ಭಾರೀ ಹಿನ್ನಡೆ: ತಂಡ ಘೋಷಿಸಿದ ಕೆಲವೇ ಘಂಟೆಯಲ್ಲಿ ಜಾನಿ ಬೈಸ್ಟ್ರೋವ್‌ ಔಟ್‌

40ನೇ ವಯಸ್ಸಿನಲ್ಲೂ ಮಿಂಚಿನಂತೆ ಆಡಿದ ಸೆರೆನಾ

40ನೇ ವಯಸ್ಸಿನಲ್ಲೂ ಮಿಂಚಿನಂತೆ ಆಡಿದ ಸೆರೆನಾ

ಮಗುವಿಗೆ ಜನ್ಮ ನೀಡಿದರೂ ಮತ್ತೆ ಅಂಗಳಕ್ಕೆ ಬಂದು ಅಮೋಘ ಪ್ರದರ್ಶನ ನೀಡಿದ ಸೆರೆನಾ 40ರ ಹರೆಯದಲ್ಲಿ ಗ್ರ್ಯಾಂಡ್‌ಸ್ಲ್ಯಾಮ್ ಟೂರ್ನಿಗಳನ್ನ ಆಡಿದ್ದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.
ಸೆರೆನಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಏಳು, ಫ್ರೆಂಚ್ ಓಪನ್‌ನಲ್ಲಿ ಮೂರು, ವಿಂಬಲ್ಡನ್‌ನಲ್ಲಿ ಏಳು ಮತ್ತು ಯುಎಸ್ ಓಪನ್‌ನಲ್ಲಿ ಆರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

23ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿರುವ ಒಡತಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸುತ್ತಿದ್ದಾರೆ. ಯುಎಸ್ ಓಪನ್‌ನ ಅಧಿಕೃತ ಟ್ವಿಟರ್ ಪುಟದಲ್ಲಿ ಸೆರೆನಾ ವಿಲಿಯಮ್ಸ್ ಎಂದು ಬರೆದುಕೊಂಡಿದ್ದು, "ನೀವು ನಮಗೆ ಹೇಗಿದ್ದೀರಿ ಎಂಬುದನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ'' ಎಂದು ಪ್ರಕಟಿಸಲಾಗಿದೆ.

ಏಷ್ಯಾ ಕಪ್ 2022: KL ರಾಹುಲ್ ಅಲ್ಲ, ರೋಹಿತ್‌ನೊಂದಿಗೆ ಈತ ಇನ್ನಿಂಗ್ಸ್ ಆರಂಭಿಸಲಿ; ಗವಾಸ್ಕರ್

ಹಲವು ಸಾಧನೆ ಮಾಡಿರುವ ಟೆನಿಸ್ ಲೆಜೆಂಡ್ ವಿಲಿಯಮ್ಸ್‌

ಹಲವು ಸಾಧನೆ ಮಾಡಿರುವ ಟೆನಿಸ್ ಲೆಜೆಂಡ್ ವಿಲಿಯಮ್ಸ್‌

ಟೆನಿಸ್ ಕಂಡ ಅಮೋಘ ಆಟಗಾರ್ತಿಯರಲ್ಲಿ ಸೆರೆನಾ ವಿಲಿಯಮ್ಸನ್ ಅಗ್ರಜರಾಗಿದ್ದಾರೆ. ಆಧುನಿಕ ಟೆನಿಸ್ ಯುಗದಲ್ಲಿ ಸೆರೆನಾ ದಂತಕತೆಯಾಗಿದ್ದಾರೆ. ತನ್ನ 27 ವರ್ಷಗಳ ವೃತ್ತಿಜೀವನದಲ್ಲಿ 23 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗಳಿಸಿದ ಏಕೈಕ ಆಟಗಾರ್ತಿಯಾಗಿದ್ದು, ಇವರ ಹತ್ತಿರಕ್ಕೂ ಯಾರೂ ಸುಳಿಯಲು ಸಾಧ್ಯವಾಗಿಲ್ಲ. ಅನೇಕ ಕಷ್ಟಗಳನ್ನು ದಾಟಿ ಸಾಧನೆ ಮೆರೆದಿರುವ ಸೆರೆನಾ ಟೆನಿಸ್ ಲೋಕದ ನಿಜವಾದ ಲೆಜೆಂಡ್.

ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗೂ ಮುನ್ನ ಟೆನಿಸ್‌ನಲ್ಲಿ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್‌ ಅತಿ ಹೆಚ್ಚು ಪ್ರಶಸ್ತಿಗಳನ್ನ ಗೆದ್ದ ನಂಬರ್ ಒನ್ ಆಟಗಾರ್ತಿಯಾಗಿದ್ದಾರೆ. ಈಕೆ 24 ಪ್ರಶಸ್ತಿಗಳನ್ನ ಗೆದ್ದುಕೊಂಡಿದ್ದು ಮಹಿಳಾ ಟೆನಿಸ್ ಇತಿಹಾಸದಲ್ಲಿ ಯಾರೂ ತಲುಪದ ಸ್ಥಾನದಲ್ಲಿದ್ದಾರೆ. ಸೆರೆನಾ ಇನ್ನೊಂದು ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿ ಗೆದ್ದಿದ್ದರು, ಇವರ ಸಾಧನೆಗೆ ಸಮನಾಗಿ ನಿಲ್ಲುವ ಅವಕಾಶ ಸಿಗುತ್ತಿತ್ತು. ಆದ್ರೆ ಸೆರೆನಾ ವಿಲಿಯಮ್ಸನ್‌ಗೆ ಈ ಒಂದು ಮೆಟ್ಟಿಲನ್ನ ಹತ್ತಲು ಸಾಧ್ಯವಾಗದೆ ಟೆನಿಸ್‌ಗೆ ವಿದಾಯ ಹೇಳಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

Story first published: Saturday, September 3, 2022, 13:31 [IST]
Other articles published on Sep 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X