ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್: ಮುಂದುವರೆದ ಸೆರೆನಾ ವಿಲಿಯಮ್ಸ್ ಗೆಲುವಿನ ಓಟ: 2ನೇ ಸುತ್ತಿನಲ್ಲಿಯೂ ಭರ್ಜರಿ ಗೆಲುವು

US Open 2022: Serena Williams enter 3rd round after win against No.2 seed Anett Kontaveit in 2nd round

ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಅವರ ಗೆಲುವಿನ ಓಟ ಮುಂದಿವರೆದಿದೆ. ಎರಡನೇ ಸುತ್ತಿನಲ್ಲಿ ಎರಡನೇ ಶ್ರೇಯಾಂಕಿತೆಯ ವಿರುದ್ಧ ನಡೆದ ರೋಚಕ ಸೆಣೆಸಾಟದಲ್ಲಿ ಅಮೆರಿಕದ ಸ್ಟಾರ್ ಆಟಗಾರ್ತಿ ಗೆಲುವು ಸಾಧಿಸಿದ್ದಾರೆ.

40ರ ಹರೆಯದ ಸೆರೆನಾ ವಿಲಿಯಮ್ಸ್ ಇಸ್ಟೋನಿಯಾದ ಆಟಗಾರ್ತಿ ಅನೆಟ್ ಕೊಂಟಾವಿಟ್ ವಿರುದ್ಧ 7-6(4), 2-6, 6-2 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೈರನೇ ಸುತ್ತಿನಲ್ಲಿ ಸೆರೆನಾ ಆಸ್ಟ್ರೇಲಿಯಾದ ಆಟಗಾರ್ತಿ ಅಜ್ಲಾ ಟೊಮ್ಲಜಾನೋವಿಕ್ ವಿರುದ್ಧ ಸೆಣೆಸಾಡಲಿದ್ದಾರೆ.

ಮೊದಲ ಸುತ್ತಿನಲ್ಲಿ ದಾಖಲೆಯ ಪ್ರೇಕ್ಷಕರ ಮುಂದೆ ಆಡಿದ ನಂತರ ಎರಡನೇ ಸುತ್ತಿನಲ್ಲಿಯೂ ಭಾರೀ ಪ್ರಮಾಣದಲ್ಲಿ ಪ್ರೇಕ್ಷಕರು ಸೆರೆನಾಗೆ ಬೆಂಬಲಿಸಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಟೈಗರ್ ವುಡ್ಸ್ ಮತ್ತು ಸಹೋದರಿ ವೀನಸ್ ವಿಲಿಯಮ್ಸ್ ಸೇರಿದಂತೆ 29,959 ಅಭಿಮಾನಿಗಳು ಹುರಿದುಂಬಿಸುತ್ತಿದ್ದರು. ಇಷ್ಟು ದೊಡ್ಡ ಪ್ರೇಕ್ಷಕರ ಮಧ್ಯೆಯೂ ಕೊಂಟಾವೀಟ್ ವಿರುದ್ಧ ಹೆಚ್ಚು ಸ್ಥಿರತೆಯನ್ನು ತೋರುವಲ್ಲಿ ಸೆರೆನಾ ಯಶಸ್ಸಿಯಾಗಿದರು.

ಅತಿ ಹೆಚ್ಚು ಟಿ20 ಗೆಲುವು: ಕೊಹ್ಲಿಯನ್ನು ಹಿಂದಿಕ್ಕಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡ ರೋಹಿತ್ ಶರ್ಮಾ!ಅತಿ ಹೆಚ್ಚು ಟಿ20 ಗೆಲುವು: ಕೊಹ್ಲಿಯನ್ನು ಹಿಂದಿಕ್ಕಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡ ರೋಹಿತ್ ಶರ್ಮಾ!

ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದ ಮೊದಲ ಸುತ್ತನ್ನು ಟೈ ಬ್ರೇಕರ್‌ನಲ್ಲಿ ಸೆರೆನಾ ವಿಲಿಯಮ್ಸ್ ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಎರಡನೇ ಸುತ್ತಿನಲ್ಲಿ ಇಸ್ಟೋನಿಯಾದ ಆಟಗಾರ್ತಿ ಸೆರೆನಾ ವಿರುದ್ಧ ತಿರುಗಿ ಬೀಳಲು ಆರಂಭಿಸಿದ್ದರು. ಇದನ್ನು ಕೊಂಟಾವಿಕ್ ತನ್ನ ವಶಕ್ಕೆ ಪಡೆಯುವಲ್ಲಿಯೂ ಯಶಸ್ವಿಯಾದರು. ಹೀಗಾಗಿ ಅಂತಿಮ ನಿರ್ಣಾಯಕ ಸೆಟ್ ಸಾಕಷ್ಟು ಕುತೂಹಲ ಮೂಡಿಸಿತು.

ಇನ್ನು ನಿರ್ಣಾಯಕ ಸೆಟ್ ಕೂಡ ಸಾಕಷ್ಟು ಪೈಪೋಟಿಯಿಂದ ಕೂಡಿತ್ತು. 23 ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್ ವಿಜೇತೆ ಸೆರೆನಾ ಅಂತಿಮ ಸೆಟ್‌ನಲ್ಲಿ ಮೊದಲ ಮೂರು ಅಂಕಗಳನ್ನು ತನ್ನ ಖಾತೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಸೆರೆನಾ ಗೆಲುವು ಸುಲಭವಾಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮತ್ತೆ ಕಮ್‌ಬ್ಯಾಕ್ ಮಾಡಿದ ಕೊಂಟಾವಿಕ್ ಅದನ್ನು ಮುಂದುವರಿಸಲು ಯಶಸ್ವಿಯಾಗಲಿಲ್ಲ. ಹೀಗಾಗಿ ಅನುಭವಿ ಆಟಗಾರ್ತಿಗೆ ಅನೆಟ್ ಕೊಂಟಾವಿಕ್ ಶರಣಾದರು.

ಇನ್ನು ಎರಡನೇ ಶ್ರೇಯಾಂಕಿತ ಆಟಗಾರ್ತಿ ಕೊಂಟಾವಿಕ್ ಈ ವರ್ಷದ ಮೂರು ಪ್ರಮುಖ ಗ್ರ್ಯಾನ್ ಸ್ಲ್ಯಾಮ್‌ಗಳನ್ನು ಎರಡನೇ ಸುತ್ತಿನಲ್ಲಿ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಬಳಿಕ ಇದೀಗ ಯುಎಸ್ ಓಪನ್‌ನಲ್ಲಿಯೂ ಕೊಂಟಾವಿಕ್ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ.

Story first published: Thursday, September 1, 2022, 11:39 [IST]
Other articles published on Sep 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X