ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್‌ಗಿಲ್ಲ ನೊವಾಕ್ ಜೊಕೊವಿಕ್: ಅಧಿಕೃತ ಮಾಹಿತಿ ನೀಡಿದ ಸ್ಟಾರ್ ಆಟಗಾರ

US Open 2022: Star player Novak Djokovic confirms withdrawal due to his vaccine status

21 ಗ್ರಾನ್‌ಸ್ಲ್ಯಾಮ್ ವಿಜೇತ ಸರ್ಬಿಯಾದ ನೊವಾಕ್ ಜೊಕೊವಿಕ್ ಈ ಬಾರಿಯ ಯುಎಸ್ ಓಪನ್‌ನಲ್ಲಿ ಭಾಗವಹಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಜೊಕೊವಿಕ್ ಮಾಹಿತಿಯನ್ನು ಹಂಚಿಕೊಂಡಿದ್ದು ನ್ಯೂಯಾರ್ಕ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತಿಷ್ಠಿತ ಟೂರ್ನಿಯಿಂದ ಹೊರಗುಳಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಯುಎಸ್ ಓಪನ್‌ನ ಮೂರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಈ ಬಾರಿಯ ಯುಎಸ್ ಓಪನ್‌ಗೆ ಪ್ರವೇಶ ಪಡೆದ ಅಧಿಕೃತ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಲಸಿಕೆ ಹಾಕಿಸಿಕೊಳ್ಳದಿರುವ ಕಾರಣ ಯುನೈಟೆಡ್ ಸ್ಟೇಟ್ಸ್‌ಗೆ ಪ್ರವೇಶ ಪಡೆಯಲು ಸರ್ಬಿಯಾದ ಆಟಗಾರ ಅನರ್ಹರಾಗಿದ್ದಾರೆ. ಇತ್ತೀಚೆಗೆ ನಡೆದ ಟ್ಯೂನ್‌ಅಪ್ ಇವೆಂಟ್‌ನಲ್ಲಿ ಕೂಡ ಜೊಕೊವಿಕ್ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಕೊರೊನಾವೈರಸ್‌ಗೆ ಲಸಿಕೆ ಹಾಕಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿಯೂ ಭಾಗವಹಿಸಿರಲಿಲ್‌ಲ ಜೊಕೊವಿಕ್. ಯುಎಸ್ ಓಪನ್‌ನಿಂದಲೂ ನಿರೀಕ್ಷಿತವಾಗಿ ಹೊರಗುಳಿಯಬೇಕಾಗಿದೆ.

ಏಷ್ಯಾಕಪ್‌ಗೆ ಆರನೇ ತಂಡವಾಗಿ ಹಾಂಗ್‌ಕಾಂಗ್ ಆಯ್ಕೆಯಾದ ನಂತರ ಟೂರ್ನಿಯ ವೇಳಾಪಟ್ಟಿ ಹೇಗಿದೆ?ಏಷ್ಯಾಕಪ್‌ಗೆ ಆರನೇ ತಂಡವಾಗಿ ಹಾಂಗ್‌ಕಾಂಗ್ ಆಯ್ಕೆಯಾದ ನಂತರ ಟೂರ್ನಿಯ ವೇಳಾಪಟ್ಟಿ ಹೇಗಿದೆ?

"ದುರದೃಷ್ಟವಶಾತ್ ಈ ಬಾರಿ ನಾನು ಯುಎಸ್ ಓಪನ್‌ನಲ್ಲಿ ಭಾಗಿಯಾಗಲು ನ್ಯೂಯಾರ್ಕ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮೆಲ್ಲ ಪ್ರೀತಿ ಹಾಗೂ ಬೆಂಬಲದ ಸಂದೇಶಗಳಿಗೆ ನಾನು ಆಭಾರಿಯಾಗಿದ್ದೇನೆ. " ಎಂದು ನಿವಾಕ್ ಜೊಕೊವಿಕ್ ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದ್ದಾರೆ. ಇನ್ನು ಯುಎಸ್ ಓಪನ್‌ನಲ್ಲಿ ಭಾಗಿಯಾಗುವ ಆಟಗಾರರಿಗೆ ಶುಭಹಾರೈಸಿರುವ ಜೊಕೊವಿಕ್ ಸಕಾರಾತ್ನಕವಾಗಿದ್ದು ಅವಕಾಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಜರ್ಮನಿಯ ಟೆನಿಸ್ ಆಟಗಾರ, ವಿಶ್ವದ ನಂಬರ್ 2 ಶ್ರೇಯಾಂಕಿತ ಅಲೆಕ್ಸಾಂಡರ್ ಝ್ವೆರೇವ್ ಮುಂಬರುವ ಯುಎಸ್ ಓಪನ್‌ನಿಂದ ಹಿಂದಕ್ಕೆ ಸರಿದಿದ್ದಾರೆ. ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಅಲೆಕ್ಸಾಂಡರ್ ಝ್ವೆರೇವ್ ನಿರೀಕ್ಷಿತ ಸಮಯದೊಳಗೆ ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದಿರುವ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. 25ರ ಹರೆಯದ ಅಲೆಕ್ಸಾಂಡರ್ ಝ್ವೆರೇವ್ ಕಳೆದ ಜೂನ್‌ ತಿಂಗಳಿನಲ್ಲಿ ನಡೆದ ಫ್ರೆಂಚ್ ಓಪನ್‌ನಲ್ಲಿ ಭಾಗಿಯಾಗಿದ್ದರು. ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್‌ಗೆ ತಲುಪಿದ್ದ ಅವರು ರಾಫೆಲ್ ನಡಾಲ್ ವಿರುದ್ಧ ನಡೆದ ನಾಲ್ಕರ ಘಟ್ಟದ ಕದನದಲ್ಲಿ ಗಾಯಗೊಂಡು ಆಡಲು ಅಸಮರ್ಥರಾಗಿದ್ದರು.

Asia Cup 2022: ಕೊಹ್ಲಿಯ ಸಿಕ್ಸರ್ ಸುರಿಮಳೆ ಕಂಡು ಬೆರಗಾದ ಜಡೇಜಾ, ಚಾಹಲ್; ವಿಡಿಯೋAsia Cup 2022: ಕೊಹ್ಲಿಯ ಸಿಕ್ಸರ್ ಸುರಿಮಳೆ ಕಂಡು ಬೆರಗಾದ ಜಡೇಜಾ, ಚಾಹಲ್; ವಿಡಿಯೋ

ಮತ್ತೊಂದೆಡೆ ನಿರಂತರ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರೋಜರ್ ಫೆಡರರ್ ಕೂಡ ಯುಎಸ್ ಓಪನ್‌ನಲ್ಲಿ ಭಾಗಿಯಾಗುತ್ತಿಲ್ಲ. ಹೀಗಾಗಿ ಸ್ಟಾರ್‌ಗಳ ಅಲಭ್ಯತೆಯಿಂದ ಈ ಬಾರಿಯ ಯುಎಸ್ ಓಪನ್ ನಿರಾಸೆ ಮೂಡಿಸಿದೆ.

Story first published: Friday, August 26, 2022, 9:53 [IST]
Other articles published on Aug 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X