ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನೊವಾಕ್ ಜೊಕೋವಿಕ್ ಮಣಿಸಿದ ಡ್ಯಾನಿಲ್ ಮೆಡ್ವೆಡೆವ್ ಯುಎಸ್ ಓಪನ್ ಚಾಂಪಿಯನ್

US Open: Daniil Medvedev ends Novak Djokovics bid for year Slam

ನ್ಯೂಯಾರ್ಕ್: 1969ರ ನಂತರ ಕ್ಯಾಲೆಂಡರ್ ವರ್ಷದ ಮೊದಲ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲಬೇಕೆನ್ನುವ ನೊವಾಕ್ ಜೊಕೋವಿಕ್ ಅವರ ಪ್ರಯತ್ನಕ್ಕೆ ಮತ್ತೆ ಸೋಲಾಗಿದೆ. ಭಾನುವಾರ (ಸೆಪ್ಟೆಂಬರ್‌ 12) ನಡೆದ ಯುಎಸ್ ಓಪನ್ ಪುರುಷರ ಫೈನಲ್ ಪಂದ್ಯದಲ್ಲಿ ಜೊಕೋವಿಕ್ ಎದುರು ಡ್ಯಾನಿಲ್ ಮೆಡ್ವೆಡೆವ್ 6-4, 6-4, 6-4ರ ಗೆಲುವಿನೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ತವರಿನ ಮೈದಾನದ ಪಿಚ್ ಬಗ್ಗೆಯೇ ಕಟುವಾಗಿ ಟೀಕಿಸಿದ ಶಕೀಬ್ ಅಲ್ ಹಸನ್ತವರಿನ ಮೈದಾನದ ಪಿಚ್ ಬಗ್ಗೆಯೇ ಕಟುವಾಗಿ ಟೀಕಿಸಿದ ಶಕೀಬ್ ಅಲ್ ಹಸನ್

21 ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಗೆದ್ದು 22ನೇ ಗ್ರ್ಯಾಂಡ್‌ಸ್ಲ್ಯಾಮ್ ಗೆಲ್ಲುತ್ತೇನೆಂದು ಎದುರು ನೋಡುತ್ತಿದ್ದ ಸರ್ಬಿಯಾ ಬಲಿಷ್ಠ ನೊವಾಕ್ ಜೊಕೋವಿಕ್‌ಗೆ ರಷ್ಯಾದ ಸ್ಟಾರ್ ಆಟಗಾರ ಡ್ಯಾನಿಲ್ ಮೆಡ್ವೆಡೆವ್ ಅಚ್ಚರಿ ನೀಡಿದರು. ಈ ಗೆಲುವಿನ ಮೂಲಕ ಮೆಡ್ವೆಡೆವ್ ವೃತ್ತಿ ಬದುಕಿನ ಚೊಚ್ಚಲ ಗ್ರ್ಯಾಂಡ್‌ಸ್ಲ್ಯಾಮ್ ದಾಖಲಾಗಿದ್ದರೆ, ಜೊಕೋವಿಕ್ ನಿರಾಸೆ ಅನುಭವಿಸಬೇಕಾಗಿ ಬಂತು.

ಮುಖಾಮುಖಿಯಲ್ಲಿ 27-0ಯ ಅಂತರ ಹೊಂದಿದ್ದ ವಿಶ್ವ ನಂ.1 ಶ್ರೇಯಾಂಕಿತ ಜೊಕೋವಿಕ್ 2021ರಲ್ಲಿ ಒಲಿಂಪಿಕ್ಸ್ ಕೂಡ ಸೇರಿ ಒಟ್ಟು ನಾಲ್ಕು ಪ್ರಮುಖ ಟೂರ್ನಿಗಳಲ್ಲಿ ಸೋಲನುಭವಿಸಿದ್ದರಿಂದ ಇಲ್ಲೂ ಅವರ ಆತ್ಮವಿಶ್ವಾಸದ ಮಟ್ಟ ಕೊಂಚ ಕಡಿಮೆಯೇ ಇತ್ತು.

ಐಪಿಎಲ್ 2021: ಗೇಲ್ to ಎಬಿಡಿ, ಐಪಿಎಲ್ ಇತಿಹಾಸದ ಟಾಪ್ 5 ಸ್ಪೋಟಕ ಶತಕಗಳುಐಪಿಎಲ್ 2021: ಗೇಲ್ to ಎಬಿಡಿ, ಐಪಿಎಲ್ ಇತಿಹಾಸದ ಟಾಪ್ 5 ಸ್ಪೋಟಕ ಶತಕಗಳು

ಕಳೆದ ಫೆಬ್ರವರಿಯಲ್ಲಿ ಜೊಕೋವಿಕ್ ಅವರು ಆಸ್ಟ್ರೇಲಿಯಾ ಓಪನ್‌ನಲ್ಲಿ ಮೆಡ್ವೆಡೆವ್ ಅವರನ್ನು ಸೋಲಿಸಿದ್ದರು. ಆ ಬಳಿಕ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್‌ನಲ್ಲೂ ಚಾಂಪಿಯನ್ ಆಗಿ ಮಿನುಗಿದ್ದ ಜೊಕೋವಿಕ್, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ವಿಶ್ವ ದಾಖಲೆ ನಿರ್ಮಿಸುವುದರಲ್ಲಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ ಜೊಕೋವಿಕ್ ಸೋತು ಮುಖಭಂಗ ಅನುಭವಿಸಿದ್ದರು.

Story first published: Monday, September 13, 2021, 8:26 [IST]
Other articles published on Sep 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X