ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್: ಸೆರೆನಾಗೆ ಆಘಾತ ನೀಡಿ ಪ್ರಶಸ್ತಿ ಗೆದ್ದ ಬಿಯಾಂಕಾ

US Open Final: Canadian Teen Bianca Andreescu Beats Serena Williams to grab Grand Slam Title

ಯುಎಸ್ ಓಪನ್ 2019ರಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. 19ರ ಹರೆಯದ ಯುವ ಆಟಗಾರ್ತಿ ಬಿಯಾಂಕಾ ವಿರುದ್ಧ ಅಮೆರಿಕದ ಸೆರೆನಾ ವಿಲಿಯಮ್ಸ್ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ತಮ್ಮ 24ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಕನಸು ಹೊತ್ತು ಫೈನಲ್ ಎದುರಿಸಿದ್ದ ಸೆರೆನಾ ಕನಸನ್ನು ಕೆನಡಾದ ಬಿಯಾಂಕಾ ಆಂಡ್ರೆಸ್ಕೂ ನುಚ್ಚುನೂರು ಮಾಡಿದ್ದಾರೆ.

ಯುಎಸ್ ಓಪನ್ 2019 ಫೈನಲ್ ನಲ್ಲಿ ಬಿಯಾಂಖಾ 6-3,7-5 ರಲ್ಲಿ ಸೆರೆನಾರನ್ನು ಸೋಲಿಸಿದ್ದಾರೆ. ಈ ಗೆಲುವಿನ ಮೂಲಕ ಈ ಗ್ರ್ಯಾನ್ ಸ್ಲಾಮ್ ಗೆದ್ದ ಕೆನಡಾದ ಮೊದಲ ಟೆನಿಸ್ ಆಟಗಾರ್ತಿ ಎನಿಸಿಕೊಂಡಿದ್ದಾರೆ.

2006ರಲ್ಲಿ ಮರಿಯಾ ಶೆರಪೋವಾ ನಂತರ ಯುಎಸ್ ಓಪನ್ ಗೆದ್ದ ಅತ್ಯಂತ ಯುವ ಆಟಗಾರ್ತಿ ಎಂಬ ಸಾಧನೆಯನ್ನು ಬಿಯಾಂಕಾ ಗಳಿಸಿದ್ದಾರೆ. ಇನ್ನೊಂದೆಡೆ 2018ರಲ್ಲಿ ಜಪಾನಿನ ನಯೋಮಿ ಒಸಾಕಾ ವಿರುದ್ಧ ಸೋಲು ಕಂಡ ಬಳಿಕ 37 ವರ್ಷ ವಯಸ್ಸಿನ ಸೆರೆನಾಗೆ ಇದು ಸತತ ಎರಡನೇ ಸೋಲಾಗಿದೆ.

ಯುಎಸ್ ಓಪನ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸೆರೆನಾ ವಿಲಿಯಮ್ಸ್ಯುಎಸ್ ಓಪನ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸೆರೆನಾ ವಿಲಿಯಮ್ಸ್

ಯುಎಸ್ ಓಪನ್ ಟೂರ್ನಮೆಂಟ್ ನ ಕ್ವಾರ್ಟರ್ ಫೈನಲ್ ನಲ್ಲಿ ಚೀನಾದ ವಾಂಗ್ ಕ್ಯೂಯಿ ಆಂಗ್ ವಿರುದ್ಧ ಗೆಲ್ಲುವ ಮೂಲಕ ಯುಎಸ್ ಓಪನ್ ನಲ್ಲಿ 100ನೇ ಜಯ ದಾಖಲಿಸಿದ ಸಾಧನೆ ಮಾಡಿದ್ದ ಸೆರೆನಾ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದರು.

ಸೆಮಿಫೈನಲ್ ನಲ್ಲಿ ಬೆಲಿಂಡಾ ಬೆನ್ಸಿಕ್ ವಿರುದ್ಧ 7-6,7-5ರಲ್ಲಿ ಗೆದ್ದಿದ್ದ 15ನೇ ಶ್ರೇಯಾಂಕದ ಬಿಯಾಂಕಾ, 3.85 ಮಿಲಿಯನ್ ಡಾಲರ್ ಗೆದ್ದು ಬೀಗಿದ್ದಾರೆ. ಸೆರೆನಾ 1.9 ಮಿಲಿಯನ್ ಡಾಲರ್ ಗೆ ತೃಪ್ತಿ ಪಡಬೇಕಾಗಿದೆ.

Story first published: Sunday, September 8, 2019, 7:11 [IST]
Other articles published on Sep 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X