ಯುಎಸ್‌ ಓಪನ್: ಮೂರನೇ ಸುತ್ತಿಗೆ ಪ್ರವೇಶ ಪಡೆದ ನೊವಾಕ್ ಜೊಕೋವಿಕ್

ವಿಶ್ವದ ನಂಬರ್ 1 ಆಟಗಾರ ಸರ್ಬಿಯಾದ ನೊವಾಕ್ ಜೊಕೋವಿಕ್ ಯುಎಸ್ ಓಪನ್‌ನ 3ನೇ ಸುತ್ತಿಗೆ ಪ್ರವೇಶ ಪಡೆದಿದ್ದು ಈ ವರ್ಷದ ಮತ್ತೊಂದು ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಸನಿಹಕ್ಕೆ ನುಗ್ಗುತ್ತಿದ್ದಾರೆ. ಡಚ್ ಟೆನ್ನಿಸಿಗ ಟ್ಯಾಲನ್ ಗ್ರಿಕ್ಸ್ಪೂರ್ ವಿರುದ್ಧದ ಸೆಣೆಸಾಟದಲ್ಲಿ ಜೊಕೋವಿಕ್ 6-2, 6-3, 6-2 ಅಂತರದಿಂದ ಗೆಲುವು ಸಾಧಿಸಿ ಮೂರನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಈ ಬಾರಿಯ ಋತುವಿನ ಪ್ರಮುಖ ಮೂರು ಟೆನಿಸ್ ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಜೊಕೋವಿಕ್ ಗೆದ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್‌ನಲ್ಲಿ ಜೊಕೋವಿಕ್ ಗೆದ್ದು ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಒಂದು ಗಂಟೆ ಮೂವತ್ತೊಂಬತ್ತು ನಿಮಿಷಗಳ ಕಾಲ ನಡೆದ ಸೆಣೆಸಾಟದಲ್ಲಿ ಗೆಲ್ಲುವ ಮೂಲಕ ಮತ್ತೊಂದು ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಭರವಸೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಈ ಗೆಲುವಿನ ನಂತರ ನೊವಾಕ್ ಜೋಕೊವಿಕ್ ಪ್ರತಿಕ್ರಿಯೆ ನೀಡಿದ್ದಾರೆ. "ಉತ್ತಮ ಪ್ರದರ್ಶನ ಇದಾಗಿತ್ತು. ಮೊದಲ ಸುತ್ತಿನ ಪಂದ್ಯಕ್ಕಿಂತ ಖಂಡಿತವಾಗಿಯೂ ಅದ್ಭುತವಾಗಿತ್ತು" ಎಂದು ಜೊಕೊವಿಕ್ ಹೇಳಿದರು. "ನಿಸ್ಸಂಶಯವಾಗಿ ನಾನು ಮೈದಾನದಿಂದ ಹೊರಬಂದ ರೀತಿಯಿಂದಾಗಿ ನಾನು ತುಂಬಾಸಂತೋಷಗೊಂಡಿದ್ದೇನೆ. ಇಂದು ನಾನು ಅದ್ಭುತವಾಗಿ ಸರ್ವ್ ಮಾಡಿದ್ದೇನೆ. ಸರ್ವ್‌ನಲ್ಲಿ ನಾನು ಲಯವನ್ನು ಕಂಡುಕೊಂಡೆ. ಉತ್ತಮ ಮನಸ್ಥಿತಿಯೊಂದಿಗೆ ಕಣಕ್ಕಿಳಿದಿದ್ದು ನಾನು ಇಂದು ಯಶಸ್ಸು ಸಾಧಿಸಲು ಸಾಧ್ಯವಾಯಿತು" ಎಂದಿದ್ದಾರೆ ನಿವಾಕ್ ಜೊಕೋವಿಕ್.

'ಅತಿ ಕೆಟ್ಟ ಪದಗಳಿಂದ ಈ ತಂಡದ ಎಲ್ಲಾ ಆಟಗಾರರು ನನ್ನನ್ನು ನಿಂದಿಸಿದ್ದರು'; ಕಹಿ ಘಟನೆ ನೆನೆದ ಸೆಹ್ವಾಗ್'ಅತಿ ಕೆಟ್ಟ ಪದಗಳಿಂದ ಈ ತಂಡದ ಎಲ್ಲಾ ಆಟಗಾರರು ನನ್ನನ್ನು ನಿಂದಿಸಿದ್ದರು'; ಕಹಿ ಘಟನೆ ನೆನೆದ ಸೆಹ್ವಾಗ್

ಇನ್ನು ನೊವಾಕ್ ಜೋಕೊವಿಕ್ ವಿರುದ್ಧ ಕಣಕ್ಕಿಳಿದಿದ್ದ ಟ್ಯಾಲನ್ ಗ್ರಿಕ್ಸ್ಪೂರ್‌ಗೆ ಇದು ನಿಜಕ್ಕೂ ಕಠಿಣವಾದ ಸವಾಲಾಗಿತ್ತು. ಇದಕ್ಕೆ ಪ್ರತಿಸ್ಪರ್ಧಿಯಾಗಿ ನೊವಾಕ್ ಜೋಕೊವಿಕ್ ಇದ್ದಾರೆ ಎಂಬುದು ಮಾತ್ರ ಕಾರಣವಾಗಿರಲಿಲ್ಲ. ಕಳೆದ ಗುರುವಾರ ಈ ಪಂದ್ಯಕ್ಕೆ ಟ್ಯಾಲನ್ ಗ್ರಿಕ್ಸ್ಪೂರ್‌ ಆಡಲಿಳಿಯುವುದು ಅನುಮಾನ ಎಂಬ ಪರಿಸ್ಥಿತಿಯಿತ್ತು. ವಿಸಾದಲ್ಲಿ ಸಮಸ್ಯೆಯಾಗಿದ್ದ ಕಾರಣ ಗೊಂದಲವುಂಟಾಗುತ್ತು. ಹೀಗಾಗಿ ಸರಿಯಾಗಿ ಅಭ್ಯಾಸಕ್ಕೂ ಟ್ಯಾಲನ್ ಗ್ರಿಕ್ಸ್ಪೂರ್‌ಗೆ ಅವಕಾಶ ದೊರೆತಿರಲಿಲ್ಲ.

121ನೇ ಶ್ರೇಯಾಂಕಿತ ಈ ಆಟಗಾರನ ವಿರುದ್ಧ ನಂಬರ್ 1 ಆಟಗಾರ ಜಾಕೋವಿಕ್ ಸಂಪೂರ್ಣ ಯಶಸ್ಸು ಸಾಧಿಸಿದರು ಹಾಗೂ ಉತ್ತಮ ನಿಯಂತ್ರಣವನ್ನು ಕೂಡ ಹೊಂದಿದ್ದರು. 20 ಗ್ರ್ಯಾಂಡ್‌ಸ್ಲ್ಯಾಮ್ ವಿಜೇತ ಜಾಕೋವಿಕ್ ಸರ್ವ್‌ನಲ್ಲಿ ಕೆಲ ಬಾರಿ ಎಡವಿದರಾದರೂ ಒತ್ತಡಕ್ಕೆ ಒಳಗಾಗದೆ ಆಟವನ್ನು ಮುಂದುವರಿಸಿದರು. ಈ ಮೂಲಕ ಗೆಲುವು ಸಾಧಿಸಿ ಬೀಗಿದ್ದಾರೆ ಜೊಕೋವಿಕ್.

"ಎಲ್ಲವೂ ತುಂಬಾ ಅದ್ಭುತವಾಗಿತ್ತು. ನನ್ನ ಟೆನಿಸ್ ಆಟದ ಮಟ್ಟದ ಬಗ್ಗೆ ನಾನು ಸಂತಸಗೊಂಡಿದ್ದೇನೆ. ಎಲ್ಲವೂ ಕೂಡ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದಿದ್ದಾರೆ ಜಾಕೋವಿಕ್. ಮುಂದಿನ ಸುತ್ತಿನಲ್ಲಿ ಜೊಕೋವಿಕ್ ವಿಶ್ವದ ಮಾಜಿ ನಂಬರ್ 4 ಆಟಗಾರ ಕೈ ನಿಶಿಕೊರಿ ವಿರುದ್ಧ ಸೆಣೆಸಾಟವನ್ನು ನಡೆಸಲಿದ್ದಾರೆ. ಈ ಆಟಗಾರನ ವಿರುದ್ಧದ ಹೆಡ್‌ ಟು ಹೆಡ್ ಕಾದಾಟದಲ್ಲಿ ಜೊಕೋವಿಕ್ 17-2 ಅಂತರದ ಭಾರೀ ಮುನ್ನಡೆಯ ದಾಖಲೆ ಹೊಂದಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 9 - October 21 2021, 03:30 PM
ಬಾಂಗ್ಲಾದೇಶ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Friday, September 3, 2021, 20:56 [IST]
Other articles published on Sep 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X