ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರೋಜರ್ ಫೆಡರರ್‌ಗೆ ವಿಡಿಯೋ ಮೂಲಕ ಶುಭಹಾರೈಸಿದ ವಿರಾಟ್ ಕೊಹ್ಲಿ

Virat Kohli Shares a touching video to Roger Federer said Never witnessed unity for any other individual athlete

ಟೆನಿಸ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ರೋಜರ್ ಫೆಡರರ್ ಇತ್ತೀಚೆಗಷ್ಟೇ ವೃತ್ತಿಪರ ಟೆನಿಸ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ. ಲೇವರ್ ಕಪ್ ಟೂರ್ನಮೆಂಟ್‌ನಲ್ಲಿ ಆಡುವ ಮೂಲಕ ತಮ್ಮ ವೃತ್ತಿ ಜೀವನದ ಅಂತಿಮ ಪಂದ್ಯವನ್ನು ಆಡಿರುವ ಫೆಡರರ್ ಸುದೀರ್ಘ ವೃತ್ತಿ ಜೀವನಕ್ಕೆ ಪೂರ್ಣವಿರಾಮವಿಟ್ಟಿದ್ದಾರೆ. ದಿಗ್ಗಜ ಆಟಗಾರನ ವಿದಾಯಕ್ಕೆ ಇಡೀ ಕ್ರೀಡಾ ಜಗತ್ತು ಶುಭಹಾರೈಸಿದ್ದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ವಿಡಿಯೋ ಮೂಲಕ ಭಾವನಾತ್ಮಕವಾಗಿ ಶುಭಹಾರೈಸಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ವಿಡಿಯೋದಲ್ಲಿ ದಿಗ್ಗಜ ಆಟಗಾರನಿಗೆ ವಿಶ್ವಾದ್ಯಂತ ದೊರೆತ ಬೆಂಬಲವನ್ನು ಉಲ್ಲೇಖಿಸಿದ್ದು ಒಬ್ಬ ಆಟಗಾರನಿಗೆ ಇಡೀ ವಿಶ್ವವೇ ಒಗ್ಗಟ್ಟಾಗಿರುವುದನ್ನು ಈ ಹಿಂದೆ ಎಂದೂ ನೊಡಿಲ್ಲ ಎಂದಿದ್ದಾರೆ. ಅಲ್ಲದೆ ಸ್ವಿಜರ್ಲೆಂಡ್‌ನ ದಿಗ್ಗಜ ಆಟಗಾರ ರೋಜರ್ ಫೆಡರರ್ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ ವಿರಾಟ್ ಕೊಹ್ಲಿ.

Breaking: ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಆಘಾತ: ಜಸ್ಪ್ರೀತ್ ಬೂಮ್ರಾ ಸಂಪೂರ್ಣ ಟೂರ್ನಿಯಿಂದ ಔಟ್!Breaking: ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಆಘಾತ: ಜಸ್ಪ್ರೀತ್ ಬೂಮ್ರಾ ಸಂಪೂರ್ಣ ಟೂರ್ನಿಯಿಂದ ಔಟ್!

ಎರಡು ಬಾರಿ ಭೇಟಿಯಾಗಿದ್ದಾರೆ ಕೊಹ್ಲಿ ಫೆಡರರ್

ಎರಡು ಬಾರಿ ಭೇಟಿಯಾಗಿದ್ದಾರೆ ಕೊಹ್ಲಿ ಫೆಡರರ್

ಕ್ರೀಡಾಲೋಕದ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ವಿರಾಟ್ ಕೊಹ್ಲಿ ಎರಡು ಬಾರಿ ಭೇಟಿಯಾಗಿದ್ದಾರೆ. 2015ರಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಇವರು ಬಳಿಕ 2018ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಮತ್ತೊಮ್ಮೆ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸಲು ಫೆಡರರ್ ಕಾಂಗರೂ ನಾಡಿನಲ್ಲಿದ್ದರು. ಫೆಡರರ್ ಅವರನ್ನು ಭೇಟಿಯಾಗಿದ್ದು ಅಭಿಮಾನಿಯಾಗಿ ಬಹಳ ಸಂತಸಪಟ್ಟಿರುವುದಾಗಿ ಕೊಹ್ಲಿ ಆ ಸಂದರ್ಭದಲ್ಲಿ ಹೇಳಿಕೊಂಡಿದ್ದರು.

ಫೆಡರರ್‌ಗೆ ಶುಭಹಾರೈಸಿದ ಕೊಹ್ಲಿ

"ಹಲೋ ರೋಜರ್, ನಿಮ್ಮ ಅದ್ಭುತವಾದ ವೃತ್ತಿ ಜೀವನದಲ್ಲಿ ಸಾಕಷ್ಟು ಸುಂದರವಾದ ಕ್ಷಣಗಳನ್ನು ಹಾಗೂ ನೆನಪುಗಳನ್ನು ನೀಡಿದ್ದೀರ. ಅದಕ್ಕಾಗಿ ಅದ್ಭುತ ವೃತ್ತಿ ಝಿವನಕ್ಕಾಗಿ ಅಭಿನಂದನೆಯನ್ನು ಸಲ್ಲಿಸಲು ವಿಡಿಯೋ ಮೂಲಕ ಸಂದೇಶ ಕಳುಹಿಸುತ್ತಿರುವುದು ನನ್ನ ಭಾಗ್ಯ. 2018ರಲ್ಲಿ ವೈಯಕ್ತಿಕವಾಗಿ ನಿಮ್ಮನ್ನು ಭೇಟಿಯಾಗಲು ದೊರೆತ ಅವಕಾಶವನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ. ನೀವು ಆಡುತ್ತಿದ್ದಗಲೂ ಅಷ್ಟೇ ನೀವು ನನಗೆ ಭಿನ್ನವಾಗಿ ಕಾಣಿಸಿದ್ದು ಯಾಕೆಂದರೆ ಟೆನಿಸ್ ಲೋಕ ಮಾತ್ರವಲ್ಲ, ವಿಶ್ವಾದ್ಯಂತ ದೊಡ್ಡ ಪ್ರಮಾಣದಲ್ಲಿ ಒಗ್ಗಟ್ಟಾಗಿ ನಿಮಗೆ ಬೆಂಬಲವನ್ನು ನೀಡುತ್ತಿದ್ದರು. ಇಂಥಾ ಬೆಂಬಲವನ್ನು ಒಬ್ಬ ಆಗಟಾರನಿಗೆ ದೊರೆತಿರುವುದನ್ನು ನಾನು ನನ್ನ ಜೀವನದಲ್ಲಿ ನೋಡಿಲ್ಲ. ಇದನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ" ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

ಟೆನಿಸ್ ಲೋಕದಲ್ಲಿ ದಾಖಲೆ ಮೇಲೆ ದಾಖಲೆ ಬರೆದ ಆಟಗಾರ

ಟೆನಿಸ್ ಲೋಕದಲ್ಲಿ ದಾಖಲೆ ಮೇಲೆ ದಾಖಲೆ ಬರೆದ ಆಟಗಾರ

2003ರ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಗ್ರ್ಯಾನ್‌ಸ್ಲ್ಯಾಮ್ ಬೇಟೆ ಆರಂಭಿಸಿದ ಫೆಡರರ್ ನಂತರ ಟೆನಿಸ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ 6 ಆಸ್ಟ್ರೇಲಿಯನ್ ಓಪನ್, 8 ವಿಂಬಲ್ಡನ್, 5 ಯುಎಸ್ ಓಪನ್ ಪ್ರಶಸ್ತಿಗಳು ಮತ್ತು ಒಂದು ಫ್ರೆಂಚ್ ಓಪನ್ ಗೆದ್ದುಕೊಂಡಿದ್ದಾರೆ ಸ್ವಿಜರ್ಲ್ಯಾಂಡ್‌ನ ಈ ದಿಗ್ಗಜ ಆಟಗಾರ. ಅಲ್ಲದೆ ಪುರುಷರ ಸಿಂಗಲ್ಸ್‌ನಲ್ಲಿ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ನಂತರ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ ಫೆಡರರ್.

ರೋಜರ್ ಫೆಡರರ್ ಸೆಪ್ಟೆಂಬರ್ 23 ಶುಕ್ರವಾರದಂದು ATP ಪ್ರವಾಸದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಅವರು ಲೇವರ್ ಕಪ್ 2022 ಡಬಲ್ಸ್ ಪಂದ್ಯದಲ್ಲಿ 22 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ರಾಫೆಲ್ ನಡಾಲ್ ಅವರೊಂದಿಗೆ ಜೊತೆಗಾರನಾಗಿ ಕಣಕ್ಕಿಳಿದಿದ್ದರು. ಫೆಡರರ್ ನಿರ್ಗಮನದ ಸಮಯದಲ್ಲಿ ನಡಾಲ್ ಸ್ವತಃ ಭಾವನೆಯನ್ನು ತಡೆದುಕೊಳ್ಳಲು ಸಾಧ್ಯವಾದೆ ಕಣ್ಣೀರು ಸುರಿಸಿದ್ದರು.

Story first published: Thursday, September 29, 2022, 16:48 [IST]
Other articles published on Sep 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X