ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಂಬಲ್ಡನ್ 2022: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಎಲೆನಾ ರೈಬಾಕಿನಾ

Wimbledon 2022: Elena Rybakina Win First Grand Slam Singles Title

ಶನಿವಾರ ನಡೆದ ವಿಂಬಲ್ಡನ್‌ನಲ್ಲಿ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಕಜಕಿಸ್ತಾನದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಎಲೆನಾ ರೈಬಾಕಿನಾ ಪಾತ್ರರಾದರು. ಫೈನಲ್‌ನಲ್ಲಿ 3-6, 6-2, 6-2 ಸೆಟ್‌ಗಳಿಂದ ಟುನೀಶಿಯಾದ ಓನ್ಸ್ ಜಬೇರ್ ಅವರನ್ನು ಸೋಲಿಸಿದರು.

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ ರಷ್ಯಾ ಮತ್ತು ಬೆಲರೂಸಿಯನ್ ಆಟಗಾರರನ್ನು ವಿಂಬಲ್ಡನ್ 2022ರಿಂದ ನಿಷೇಧಿಸಲಾಗಿದೆ. ರೈಬಾಕಿನಾ ಅವರು ನಾಲ್ಕು ವರ್ಷಗಳ ಹಿಂದೆ ರಷ್ಯಾದ ಪೌರತ್ವ ಬದಲಾಯಿಸದಿದ್ದರೆ ಈ ವರ್ಷದ ವಿಂಬಲ್ಡನ್‌ನಿಂದ ಹೊರಗಿರಬೇಕಾಗಿತ್ತು.

ಈ ಮೊದಲ ವಿಂಬಲ್ಡನ್ ಪ್ರಶಸ್ತಿ ಪಂದ್ಯದಲ್ಲಿ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಫೈನಲಿಸ್ಟ್‌ಗಳಾದ ಓಪನ್ ಯುಗದಲ್ಲಿ 23 ವರ್ಷದ ರೈಬಾಕಿನಾ ಅವರು 2011ರಲ್ಲಿ 21 ವರ್ಷದ ಪೆಟ್ರಾ ಕ್ವಿಟೋವಾ ಗೆದ್ದ ನಂತರ ಪ್ರಶಸ್ತಿಯನ್ನು ಎತ್ತಿ ಹಿಡಿದ ಅತ್ಯಂತ ಕಿರಿಯ ಮಹಿಳೆಯಾಗಿದ್ದಾರೆ.

Wimbledon 2022: Elena Rybakina Win First Grand Slam Singles Title

ಈ ಮೂಲಕ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೊದಲ ಕಜಕಿಸ್ತಾನದ ಆಟಗಾರ್ತಿ ಎಂಬ ದಾಖಲೆ ಬರೆದರು. ಇದೇ ವೇಳೆ ಫೈನಲ್ ತಲುಪಿದ ಮೊದಲ ದಕ್ಷಿಣ ಆಫ್ರಿಕಾದ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದ ಒನ್ಸ್ ಜಬ್ಯುರ್ ಅವರಿಗೆ ನಿರಾಸೆ ಉಂಟಾಯಿತು.

ಎಲೆನಾ ರೈಬಾಕಿನಾ ಮೊದಲ ಸೆಟ್‌ನಲ್ಲಿ ಸೋಲುಂಡರೂ ನಂತರ ಅಮೋಘವಾಗಿ ಚೇತರಿಸಿಕೊಂಡು ನಂತರದ ಎರಡೂ ಸೆಟ್ ಗಳನ್ನು ಸುಲಭವಾಗಿ ಗೆದ್ದು ಪ್ರಶಸ್ತಿ ಎತ್ತಿ ಹಿಡಿದರು.

"ನಾನು ಮೊದಲು ಈ ರೀತಿ ಏನನ್ನೂ ಅನುಭವಿಸಿರಲಿಲ್ಲ," ಎಂದು ಚಾಂಪಿಯನ್ ಎಲೆನಾ ರೈಬಾಕಿನಾ ಹೇಳಿದರು. "ನೀವು ಸಾಧಿಸಿದ ಎಲ್ಲದಕ್ಕೂ ಓನ್ಸ್‌ಗೆ ಅಭಿನಂದನೆಗಳು. ನೀವು ಟುನೀಶಿಯನ್ನರಿಗೆ ಮತ್ತು ಎಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ನೀವು ಉತ್ತಮ ಪಂದ್ಯವನ್ನು ಆಡಿದ್ದೀರಿ," ಎಂದು ಎಲೆನಾ ರೈಬಾಕಿನಾ ತಿಳಿಸಿದರು.

Story first published: Saturday, July 9, 2022, 22:09 [IST]
Other articles published on Jul 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X