ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೆನಿಸ್‌: ವಿಂಬಲ್ಡನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತರೂ 40 ಲಕ್ಷ ರೂ. ಬಹುಮಾನ!

Wimbledon prize money rises 11.8 percent

ಪ್ರತಿಷ್ಠಿತ ಟೂರ್ನಿಯ ಒಟ್ಟು ಬಹುಮಾನ ಮೊತ್ತದಲ್ಲಿ ಶೇ.11.8ರಷ್ಟು ಏರಿಕೆ

ಲಂಡನ್‌, ಮೇ 01: ಹುಲ್ಲುಹಾಸಿನ ಮೇಲೆ ನಡೆಯುವ ಏಕೈಕ ಗ್ರ್ಯಾನ್‌ ಸ್ಲ್ಯಾಮ್‌ ಪ್ರತಿಷ್ಠಿತ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಒಟ್ಟು ಪ್ರಶಸ್ತಿ ಮೊತ್ತದಲ್ಲಿಈ ಬಾರಿ ಶೇ.11.8 ರಷ್ಟು ಏರಿಕೆಯಾಗಿದೆ.

 ಟೆನಿಸ್‌: ಸ್ಟಟ್‌ಗಾರ್ಟ್‌ ಚಾಂಪಿಯನ್‌ ಕ್ವಿಟೋವಾಗೆ ವಿಶ್ವದ 2ನೇ ಶ್ರೇಯಾಂಕ ಟೆನಿಸ್‌: ಸ್ಟಟ್‌ಗಾರ್ಟ್‌ ಚಾಂಪಿಯನ್‌ ಕ್ವಿಟೋವಾಗೆ ವಿಶ್ವದ 2ನೇ ಶ್ರೇಯಾಂಕ

ಇಲ್ಲಿನ ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ನಡೆಯುವ ವಿಂಬಲ್ಡನ್‌ ಟೂರ್ನಿಯ ಒಟ್ಟು ಬಹುಮಾನ ಮೊತ್ತ ಈ ಬಾರಿ 344 ಕೋಟಿ ರೂ. ಆಗಿದೆ. ಕಳೆದ ಆವೃತ್ತಿಗೆ ಹೋಲಿಸಿದರೆ ಶೇ.11.8 ರಷ್ಟು ಏರಿಕೆಯಾಗಿದ್ದು, ಮಹಿಳಾ ಮತ್ತು ಪುರುಷ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಆಟಗಾರರು ಬರೋಬ್ಬರಿ 21.33 ಕೋಟಿ ರೂ. ಬಹುಮಾನ ಮೊತ್ತವನ್ನು ಜೇಬಿಗಿಳಿಸಲಿದ್ದಾರೆ.

ಇನ್ನು ಆಟಗಾರರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಆರಂಭಿಕ ಹಂತಗಳಲ್ಲಿ ಸೋಲುವ ಆಟಗಾರರಿಗೆ ನೀಡಲಾಗುವ ಮೊತ್ತವನ್ನೂ ಏರಿಕೆ ಮಾಡಲಾಗಿದೆ. ಅರ್ಹತಾ ಸುತ್ತು ಮತ್ತು 1ರಿಂದ 3ನೇ ಸುತ್ತಿನ ವರೆಗೆ ನೀಡಲಾಗುವ ಮೊತ್ತದಲ್ಲಿ ಶೇ.10 ರಷ್ಟು ಏರಿಕೆಯಾಗಿದೆ. ಇದರೊಂದಿಗೆ ಮೊದಲ ಸುತ್ತಿನಲ್ಲಿ ಸೋಲುವ ಸ್ಪರ್ಧಿಗೆ ಅಂದಾಜು 40.84 ಲಕ್ಷ ರೂ. ಬಹುಮಾನ ಲಭ್ಯವಾಗಲಿರುವುದು ವಿಶೇಷ.

 ಭಾರತ ಬಿಟ್ಟು ಹೊರಡೋ ಮುನ್ನ ಭಾವನಾತ್ಮಕ ಸಂದೇಶ ಬರೆದ ವಾರ್ನರ್ ಭಾರತ ಬಿಟ್ಟು ಹೊರಡೋ ಮುನ್ನ ಭಾವನಾತ್ಮಕ ಸಂದೇಶ ಬರೆದ ವಾರ್ನರ್

ಈ ಬಾರಿಯ ವಿಂಬಲ್ಡನ್‌ನಲ್ಲಿ 1ನೇ ಸಂಖ್ಯೆ ಕೋರ್ಟ್‌ಗೂ ಮೇಲ್ಛಾವಣಿ ಅಳವಡಿಸಲಾಗಿದೆ. ಜೊತೆಗೆ ಇದೇ ಮೊದಲ ಬಾರಿ ನಿರ್ಣಾಯಕ ಸೆಟ್‌ಗೆ 12-12ರ ಮಿತಿ ನಿಗದಿ ಪಡಿಸಲಾಗಿದೆ. ಇದಕ್ಕೂ ಮುನ್ನ 5ನೇ ಹಾಗೂ ಅಂತಿಮ ಸೆಟ್‌ನಲ್ಲಿ ಒಬ್ಬ ಆಟಗಾರ ತನ್ನ ಸರ್ವ್‌ ಕಾಯ್ದುಕೊಂಡು ಎದುರಾಳಿಯ ಸರ್ವ್‌ ಮುರಿಯುವ ವರೆಗೂ ಆಟ ಮುಂದುವರಿಸಬೇಕಿತ್ತು.

ಕಳೆದ ವರ್ಷ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್ಸ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಕೆವಿನ್‌ ಆಂಡರ್ಸನ್‌, ಐದನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ 26-24 ಅಂತರದ ಗೇಮ್‌ಗಳ ಮ್ಯಾರಥಾನ್‌ ಹೋರಾಟ ನಡೆಸಿ ಅಮೆರಿಕದ ಆಟಗಾರ ಜಾನ್‌ ಇಸ್ನರ್‌ ಎದುರು ಜಯ ದಾಖಲಿಸಿದ್ದರು. ಆಟಗಾರರನ್ನು ದಣಿಸುವ ಈ ಮಾದರಿಯಲ್ಲಿ ಬದಲಾವಣೆ ತಂದು 12-12 ಗೇಮ್‌ಗಳಿಗೆ ಸೀಮಿತಗೊಳಿಸಲಾಗಿದೆ. 12-12ರ ಸಮಬಲದ ಬಳಿಕ ಫಲಿತಾಂಶಕ್ಕಾಗಿ ಟೈ ಬ್ರೇಕರ್‌ ನಡೆಸಲಾಗುತ್ತದೆ.

Story first published: Tuesday, April 30, 2019, 20:23 [IST]
Other articles published on Apr 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X