ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2ನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿ ರದ್ದಾಗಲಿದೆ ವಿಂಬಲ್ಡನ್

Wimbledon set to be cancelled for first time since World War II

ಲಂಡನ್, ಏಪ್ರಿಲ್ 1: ಎರಡನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ವಿಂಬಲ್ಡನ್ ರದ್ದಾಗುವುದರಲ್ಲಿದೆ. ಕೊರೊನಾವೈರಸ್‌ನಿಂದಾಗಿ ಈ ಬಾರಿಯ ಪ್ರತಿಷ್ಠಿತ ಟೆನಿಸ್ ಟೂರ್ನಿ ನಡೆಯೋದು ಕಷ್ಟವೆನಿಸಿದೆ. ಕೋವಿಡ್-19ನಿಂದಾಗಿ ವಿಶ್ವದಗಲ ಎಲ್ಲಾ ಕ್ರೀಡಾಸ್ಪರ್ಧೆಗಳು ರದ್ದಾಗುತ್ತಿವೆ ಇಲ್ಲವೆ ಮುಂದೂಡಲ್ಪಡುತ್ತಿವೆ. ಹೀಗಾಗಿ ವಿಂಬಲ್ಡನ್ ಕೂಡ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ.

"ಗಂಗೂಲಿ ಬೆಂಬಲಿಸಿದರು, ಆದರೆ ಧೋನಿ, ಕೊಹ್ಲಿ...": ಕಡೆಗೂ ಮೌನಮುರಿದ ಯುವಿ

ಮಾರಕ ಕೊರೊನಾವೈರಸ್‌ನಿಂದಾಗಿ ವಿಶ್ವಖ್ಯಾತ ಟೆನಿಸ್ ಟೂರ್ನಿ ಫ್ರೆಂಚ್ ಓಪನ್ ಕೂಡ ಮುಂದೂಡಲ್ಪಟ್ಟಿದೆ. 2020ರ ಫ್ರೆಂಚ್ ಓಪನ್ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 4ರವರೆಗೆ ನಡೆಯಲಿದೆ. ಫ್ರೆಂಚ್ ಓಪನ್ ಮುಂದೂಡಲ್ಪಟ್ಟಿರುವುದರಿಂದ ವಿಂಬಲ್ಡನ್ ಕೂಡ ಮುಂದೂಡಲೇಬೇಕಾದ ಒತ್ತಡದಲ್ಲಿದೆ.

'ಐಪಿಎಲ್ 2020' ನಡೆಯಬೇಕಾದರೆ ಉಳಿದಿರೋ ದಾರಿ ಇದೊಂದೇ!'ಐಪಿಎಲ್ 2020' ನಡೆಯಬೇಕಾದರೆ ಉಳಿದಿರೋ ದಾರಿ ಇದೊಂದೇ!

ಈಗಿನ ವೇಳಾಪಟ್ಟಿಯ ಪ್ರಕಾರ ಜೂನ್ 29ರಿಂದ ಜುಲೈ 12ರ ವರೆಗೆ ವಿಂಬಲ್ಡನ್ ನಡೆಯಲಿದೆ. ಬಹುತೇಕ ಎಲ್ಲಾ ಟೂರ್ನಿಗಳು ಸದ್ಯ ಜೂನ್ 7ರವರೆಗೂ ರದ್ದಾಗಿದೆ. ಹಾಗೂ ಒಂದು ವೇಳೆ ವಿಂಬಲ್ಡನ್ ಹಿಂದಿನ ಅದೇ ವೇಳಾಪಟ್ಟಿಯಂತೆ ನಡೆದರೆ, ನೊವಾಕ್ ಜೊಕೋವಿಕ್ ಮತ್ತು ಸಿಮೋನಾ ಹಾಲೆಪ್ ಪ್ರಶಸ್ತಿ ಉಳಿಸಿಕೊಳ್ಳಲು ಸೆಣಸಾಡಲಿದ್ದಾರೆ.

ಯಾರು ಶ್ರೇಷ್ಟ: ಲಾರಾ, ಸಚಿನ್‌ ಇವರಲ್ಲಿ ಶೇನ್ ವಾರ್ನ್ ಆರಿಸಿದ್ದು ಯಾರನ್ನು ಗೊತ್ತಾ?ಯಾರು ಶ್ರೇಷ್ಟ: ಲಾರಾ, ಸಚಿನ್‌ ಇವರಲ್ಲಿ ಶೇನ್ ವಾರ್ನ್ ಆರಿಸಿದ್ದು ಯಾರನ್ನು ಗೊತ್ತಾ?

ವಿಂಬಲ್ಡನ್ ಮೂರು ಬಾರಿಯ ಚಾಂಪಿಯನ್ ಬೋರಿಸ್ ಬೆಕರ್ ಟ್ವೀಟ್ ಮಾಡಿ, ವಿಂಬಲ್ಡನ್ ನಿರ್ಧಾರಕ್ಕೆ ಏಪ್ರಿಲ್ ಅಂತ್ಯದ ವರೆಗೂ ಕಾಯುವ ನಿರೀಕ್ಷೆಯಿದೆ ಎಂದಿದ್ದಾರೆ. ಟ್ವೀಟ್ ಮಾಡಿರುವ ಬೋರಿಸ್, ಏಪ್ರಿಲ್ ಅಂತ್ಯದವರೆಗೂ ಕಾದ ಬಳಿಕ ವಿಂಬಲ್ಡನ್ ನಿರ್ಧಾರವಾಗಲಿದೆ ಎಂದು ನಾನು ಭಾವಿಸಿದ್ದೇನೆ,' ಬರೆದುಕೊಂಡಿದ್ದಾರೆ.

Story first published: Wednesday, April 1, 2020, 17:21 [IST]
Other articles published on Apr 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X