ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡಲು ನೊವಾಕ್ ಜೊಕೋವಿಕ್ ನಿರ್ಧಾರ

World No. 1 Novak Djokovic decides to compete at the Tokyo Olympics

ಬೆಲ್ಗ್ರೇಡ್: ವಿಶ್ವ ನಂ.1 ಟೆನಿಸ್ ಆಟಗಾರ, ಸರ್ಬಿಯನ್ ಬಲಿಷ್ಠ ನೊವಾಕ್ ಜೊಕೋವಿಕ್ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಡಬೇಕೋ ಬೇಡವೋ ಅನ್ನೋದನ್ನು ನಾನಿನ್ನೂ ನಿರ್ಧರಿಸಿಲ್ಲ ಎಂದು ಈ ಮೊದಲು ಹೇಳಿದ್ದ ಜೊಕೋವಿಕ್ ಈಗ ಆಡುವುದಾಗಿ ಹೇಳಿದ್ದಾರೆ.

ರಸೆಲ್‌ಗೆ ಚಳ್ಳೆಹಣ್ಣು ತಿನ್ನಿಸಿದ ಮಿಚೆಲ್ ಸ್ಟಾರ್ಕ್: ವೈರಲ್ ವಿಡಿಯೋರಸೆಲ್‌ಗೆ ಚಳ್ಳೆಹಣ್ಣು ತಿನ್ನಿಸಿದ ಮಿಚೆಲ್ ಸ್ಟಾರ್ಕ್: ವೈರಲ್ ವಿಡಿಯೋ

ಕೋವಿಡ್ 19 ಭೀತಿಯ ಕಾರಣ ಟೋಕಿಯೋ ಒಲಿಂಪಿಕ್ಸ್ ಆಯೋಜನೆಯೇ ಪ್ರಶ್ನೆಯಾಗಿ ಉಳಿದಿದ್ದಾಗ ತಾನು ಒಲಿಂಪಿಕ್ಸ್‌ನಲ್ಲಿ ಆಡುತ್ತೇನೋ ಇಲ್ಲವೋ ಗೊತ್ತಿಲ್ಲ, ಆಡಬೇಕು ಅನ್ನಿಸಿದರೆ ಮಾತ್ರ ಆಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ನಾನು ಟೋಕಿಯೋಗೆ ವಿಮಾನ ಹತ್ತಲು ನಿರ್ಧರಿಸಿದ್ದೇನೆ ಎಂದು ಜೊಕೋವಿಕ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಜೊಕೋವಿಕ್, "ನನ್ನ ಪುಟಾಣಿ ಗೆಳೆಯ ಕೌಜಿರೌನನ್ನು ನಿರಾಶೆ ಮಾಡಲಾರೆ. ನಾನು ಟೋಕಿಯೋಗೆ ವಿಮಾನ ಬುಕ್ ಮಾಡಿದ್ದೇನೆ. ಹೆಮ್ಮೆಯಿಂದ ನನ್ನ ಸರ್ಬಿಯಾ ಒಲಿಂಪಿಕ್ಸ್ ತಂಡ ಸೇರಿಕೊಳ್ಳಲಿದ್ದೇನೆ," ಎಂದು ಬರೆದುಕೊಂಡಿದ್ದಾರೆ.

ರಿಷಭ್ ಪಂತ್ ಅಲ್ಲದೆ ಭಾರತೀಯ ತಂಡದಲ್ಲಿ ಇನ್ನೂ ಮೂವರಿಗೆ ಕೋವಿಡ್!ರಿಷಭ್ ಪಂತ್ ಅಲ್ಲದೆ ಭಾರತೀಯ ತಂಡದಲ್ಲಿ ಇನ್ನೂ ಮೂವರಿಗೆ ಕೋವಿಡ್!

ಈ ವರ್ಷ ನೊವಾಕ್ ಜೊಕೋವಿಕ್ ಅವರು ವಿಂಬಲ್ಡನ್, ಆಸ್ಟ್ರೇಲಿಯಾ ಓಪನ್ ಮತ್ತು ಫ್ರೆಂಚ್ ಓವನ್‌ನಲ್ಲಿ ಈಗಾಗಲೇ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಒಲಿಂಪಿಕ್ಸ್‌ನಲ್ಲೂ ಜೊಕೋವಿಕ್ ಚಿನ್ನದ ಪದಕದ ಗುರಿ ಇಟ್ಟುಕೊಂಡಿದ್ದಾರೆ.

Story first published: Saturday, July 17, 2021, 7:58 [IST]
Other articles published on Jul 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X