ಜೊಕೊವಿಕ್ ವಿವಾದ: ವಿಸಾ ರದ್ದು ಆದೇಶವನ್ನು ಎತ್ತಿಹಿಡಿದ ಕೋರ್ಟ್; ಆಸಿಸ್ ತೊರೆಯುವುದು ಅನಿವಾರ್ಯ

ವಿಶ್ವದ ನಂಬರ್ 1 ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿದೆ. ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿ ವಿಸಾ ರದ್ದುಗೊಳಿಸಿದ ಆದೇಶವನ್ನು ಫೆಡರಲ್ ಕೋರ್ಟ್ ಭಾನುವಾರ ಎತ್ತಿ ಹಿಡಿದಿದೆ. ಹೀಗಾಗಿ ಸರ್ಬಿಯಾ ಮೂಲದ ಆಟಗಾರನಿಗೆ ಹಿನ್ನಡೆಯಾಗಿದ್ದು ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಜೊಕೊವಿಕ್ ಕಳೆದುಕೊಂಡಿದ್ದಾರೆ. ಕೋರ್ಟ್ ನೀಡಿದ ಈ ಆದೇಶದಿಂದ ಜೊಕೊವಿಕ್ ಆಸ್ಟ್ರೇಲಿಯಾವನ್ನು ತೊರೆಯುವುದು ಅನಿವಾರ್ಯವಾಗಿದೆ.

ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ತಪ್ಪು ಮಾಹಿತಿ ನೀಡಿ ಆಸ್ಟ್ರೇಲಿಯಾಗೆ ಆಗಮಿಸಿದ್ದ ನೊವಾಕ್ ಜೊಕೊಇಕ್ ಅವರ ವಿಸಾವನ್ನು ಆಸ್ಟ್ರೇಲಿಯಾ ಸರ್ಜಾರ ಈ ಮೊದಲು ಒಮ್ಮೆ ರದ್ದು ಮಾಡಿತ್ತು. ಆದರೆ ಈ ಸಂದರ್ಭದಲ್ಲಿ ಕೋರ್ಟ್ ಮೊರೆ ಹೋದ ಜೊಕೊವಿಕ್ ಪರವಾಗಿ ತೀರ್ಪು ಬಂದಿತ್ತು. ಬಳಿಕ ಆಸ್ಟ್ರೇಲಿಯಾದ ಇಮಿಗ್ರೆಶನ್ ಮಿನಿಸ್ಟರ್ ಸಾರ್ವಜನಿಕ ಹಿತಾಸಕ್ತಿಯನ್ನು ಮುಂದಿಟ್ಟು ತಮಗಿರುವ ಅಧಿಕಾರವನ್ನು ಬಳಸಿ ವಿಸಾವನ್ನು ರದ್ದುಗೊಳಿಸಿದ್ದರು. ಹೀಗಾಗಿ ಮತ್ತೊಂದು ಬಾರಿ ಜೊಕೊವಿಕ್ ಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ಬಾರಿ ನೊವಾಕ್ ಜೊಕೊವಿಕ್‌ಗೆ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಹೀಗಾಗಿ ಈ ಬಾರಿ ಆಸ್ಟ್ರೇಲಿಯಾದಲ್ಲಿ ವಿಶ್ವ ದಾಖಲೆಯ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಕನಸು ಭಗ್ನವಾದಂತಾಗಿದೆ.

ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವುದಕ್ಕೆ ಈ ಅಂಶಗಳೇ ಕಾರಣ!ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವುದಕ್ಕೆ ಈ ಅಂಶಗಳೇ ಕಾರಣ!

ಜನವರಿ 17 ಸೊಮವಾರದಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ಓಪನ್‌ನಲ್ಲಿ ಭಾಗಿಯಾಗಲು ಆಸ್ಟ್ರೇಲಿಯಾಗೆ ಕಾಲಿಟ್ಟಿದ್ದರು ಜೊಕೊವಿಕ್. ಆದ್ರೆ ಆಸ್ಟ್ರೇಲಿಯಾಗೆ ಕಾಲಿಡುತ್ತಿದ್ದಂತೆ ಶಾಕ್ ಕಾದಿತ್ತು. ಕೋವಿಡ್-19 ಲಸಿಕೆಯನ್ನ ಪಡೆಯದ ಆಟಗಾರರಿಗೆ ಆಸ್ಟ್ರೇಲಿಯಾದಲ್ಲಿ ನಿರ್ಬಂಧವಿದ್ದು, ಸಂಪೂರ್ಣ ಲಸಿಕೆ ಪಡೆಯ ನೊವಾಕ್ ಜೊಕೊವಿಕ್‌ಗೆ ನಿರ್ಬಂಧ ಹೇರಲಾಗಿತ್ತು. ಸ್ವತಃ ಪ್ರಧಾನಿಯೇ ಘೋಷಿಸಿದಂತೆ ವೀಸಾ ರದ್ದು ಮಾಡುವ ತೀರ್ಮಾನವನ್ನು ಅಲ್ಲಿನ ಸರ್ಕಾರ ತೆಗೆದುಕೊಂಡಿತ್ತು.

ಆಸ್ಟ್ರೇಲಿಯಾ ಸರ್ಕಾರದ ವಿಸಾ ರದ್ದತಿಯ ಆದೇಶವನ್ನು ಪ್ರಶ್ನಿಸಿ ಜೊಕೊವಿಕ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಆಸ್ಟ್ರೇಲಿಯಾ ಸರ್ಕಾರ ಜೊಕೊವಿಕ್ ವಿಸಾವನ್ನು ರದ್ದುಗೊಳಿಸಿದ್ದು 'ಅಸಮಂಜಸ' ಎಂದಿದ್ದು ಸರ್ಕಾರದ ತೀರ್ಮಾನವನ್ನು ರದ್ದುಗೊಳಿಸಿತ್ತು.ಕೋವಿಡ್ -19 ಲಸಿಕೆಗೆ ವೈದ್ಯಕೀಯ ವಿನಾಯಿತಿಗಾಗಿ ಪುರಾವೆಗಳ ಹೊಂದಿರದ ಜೊಕೊವಿಕ್ ಮೆಲ್ಬೋರ್ನ್‌ನಲ್ಲಿರುವ ವಲಸೆ ಬಂಧನ ಸೌಲಭ್ಯದಲ್ಲಿ ಉಳಿದುಕೊಂಡಿದ್ದರು. ಕಳೆದ ಸೋಮವಾರ ಇದರ ವಿಚಾರಣೆ ನಡೆಸಿದ ನ್ಯಾಯಾಧೀಶ ಆಂಥೋನಿ ಕೆಲ್ಲಿ ಜೊಕೊವಿಕ್ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ. ಆದರೆ ಕೋರ್ಟ್ ತೀರ್ಪಿನ ಬಳಿಕ ಆಸ್ಟ್ರೇಲಿಯಾ ಸರ್ಕಾರ ಮತ್ತೊಮ್ಮೆ ವಿಸಾವನ್ನು ರದ್ದುಗೊಳಿಸಿ ಜೊಕೊವಿಕ್ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.

ಆತ ಇದ್ದಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿತ್ತು ಎಂದ ನೆಟ್ಟಿಗರುಆತ ಇದ್ದಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿತ್ತು ಎಂದ ನೆಟ್ಟಿಗರು

ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳ ಆಧಾರದಲ್ಲಿ ಜೊಕೊವಿಕ್ ಲಸಿಕೆಯನ್ನು ಪಡೆದುಕೊಂಡಿಲ್ಲ ಎಂದು ಸ್ಪಷ್ಟವಾಗಿದ್ದರೂ ಕಳೆದ ತಿಂಗಳಷ್ಟೇ ಕೊರೊನಾವೈರಸ್‌ಗೆ ತುತ್ತಾಗಿದ್ದರು ಎಂಬ ದಾಖಲೆಯನ್ನು ಜೊಕೊವಿಕ್ ಹೊಂದಿದ್ದರು. ಈ ಕಾರಣದಿಂದಾಗಿ ಲಸಿಕೆಯ ಅಗತ್ಯವಿಲ್ಲ ಎಂದು ಕೋರ್ಟ್‌ನಲ್ಲಿ ಜೊಕೊವಿಕ್ ವಾದಿಸಿದ್ದರು. ಟೆನಿಸ್‌ನಲ್ಲಿ 20 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಸರ್ಬಿಯಾ ಮೂಲದ ನೊವಾಕ್ ಜೊಕೊವಿಕ್ 9 ಬಾರಿ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು ಅತಿ ಹೆಚ್ಚು ಬಾರಿ ಈ ಪ್ರತಿಷ್ಠಿತ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ದಾಖಲೆ ಹೊಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, January 16, 2022, 15:53 [IST]
Other articles published on Jan 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X