ಭಾರತ vs ದಕ್ಷಿಣ ಆಫ್ರಿಕಾ: ಮಾರ್ಕ್ರಮ್ ಶತಕ, ರೋಹಿತ್ ಶರ್ಮಾ ಡಕ್‌ಔಟ್!

 

ವಿಜಯನಗರ, ಸೆಪ್ಟೆಂಬರ್ 28: ಆಂಧ್ರ ಪ್ರದೇಶದ ವಿಜಯನಗರಂನಲ್ಲಿನ ಡಾ. ಪಿವಿಜಿ ರಾಜು ಎಸಿಎ ಸ್ಫೋರ್ಟ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ (ಬೋರ್ಡ್ ಪ್ರೆಸಿಡೆಂಟ್ಸ್ XI) ನಡುವಿನ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಐಡೆನ್ ಮಾರ್ಕ್ರಮ್ ಶತಕ ಬಾರಿಸಿದ್ದಾರೆ. ಭಾರತ ಇನ್ನಿಂಗ್ಸ್‌ ಆರಂಭಿಸಿದ್ದು ರೋಹಿತ್ ಶರ್ಮಾ ಡಕ್ ಔಟ್ (2 ಎಸೆತಕ್ಕೆ 0) ಆಗಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾದಿಂದ ಆರಂಭಿಕ ಆಟಗಾರ ಮಾರ್ಕ್ರಮ್ 100 (ರಿಟೈರ್ಡ್ ಔಟ್), ಜುಬೈರ್ ಹಂಝ 22, ತೆಂಬ ಬವುಮಾ 87, ವರ್ನಾನ್ ಫಿಲಾಂಡರ್ 48 ರನ್‌ನೊಂದಿಗೆ 64 ಓವರ್‌ ವೇಳೆಗೆ 6 ವಿಕೆಟ್ ನಷ್ಟದಲ್ಲಿ 279 ರನ್‌ ಮಾಡಿತ್ತು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಭಾರತದ ಉಮೇಶ್ ಯಾದವ್ 1, ಇಶಾನ್ ಪೋರೆಲ್ 1, ಧರ್ಮೇಂದ್ರ ಸಿನ್ಹ ಜಡೇಜಾ 3 ವಿಕೆಟ್ ಪಡೆದಿದ್ದಾರೆ. ಸೆಪ್ಟೆಂಬರ್ 26ರಿಂದ ಆರಂಭಗೊಂಡಿರುವ ಈ 3 ದಿನಗಳ ಅಭ್ಯಾಸ ಪಂದ್ಯ ಸೆಪ್ಟೆಂಬರ್ 28ರಂದು ಕೊನೆಗೊಳ್ಳಲಿದೆ. ಈ ಪಂದ್ಯದಲ್ಲಿ ದೇಸಿ ತಂಡದ ನಾಯಕತ್ವ ರೋಹಿತ್ ಶರ್ಮಾ ಮೇಲಿದೆ.

ಅಕ್ಟೋಬರ್ 2ರಿಂದ ಇತ್ತಂಡಗಳ ಮೊದಲ ಟೆಸ್ಟ್ ಆರಂಭವಾಗಲಿದೆ. 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇದೇ ಮೈದಾನದಲ್ಲಿ ನಡೆಲಿದೆ. ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ 3 ಪಂದ್ಯಗಳ ಟಿ20 ಸರಣಿಯಲ್ಲಿ (1 ಪಂದ್ಯ ರದ್ದಾಗಿದ್ದರಿಂದ) 1-1ರ ಸಮಬಲ ಸಾಧಿಸಿತ್ತು.

ಬೋರ್ಡ್ ಪ್ರೆಸಿಡೆಂಟ್ಸ್ XI: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ (ಸಿ), ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಲ್, ಕರುಣ್ ನಾಯರ್, ಸಿದ್ಧೇಶ್ ಲಾಡ್, ಶ್ರೀಕರ್ ಭಾರತ್ (ವಿಕೆ), ಜಲಜ್ ಸಕ್ಸೇನಾ, ಧರ್ಮೇಂದ್ರಸಿಂಹ ಜಡೇಜಾ, ಶಾರ್ದೂಲ್ಲ್ ಠಾಕೂರ್, ಉಮೇಶ್ ಯಾದವ್, ಅವೇಶ್ ಖಾನ್, ಇಶಾನ್ ಪೋರೆಲ್.

ದಕ್ಷಿಣ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಮ್ (ಸಿ), ಡೀನ್ ಎಲ್ಗರ್, ಥ್ಯೂನಿಸ್ ಡಿ ಬ್ರೂಯಿನ್, ಫಾಫ್ ಡು ಪ್ಲೆಸಿಸ್, ಟೆಂಬಾ ಬಾವುಮಾ, ಕ್ವಿಂಟನ್ ಡಿ ಕಾಕ್ (ವಿಕೆ), ವೆರ್ನಾನ್ ಫಿಲಾಂಡರ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಕಾಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ, ಡೇನ್ ಪೀಡ್, ಹೆನ್ರಿಕ್ ಕ್ಲಾಸಾ , ಸೇನುರಾನ್ ಮುತ್ತುಸಾಮಿ.

READ SOURCE