Tap to Read ➤

ಅಬುಧಾಬಿಯಲ್ಲಿ T10 ಆಡಲಿರುವ ಮಿ. ಐಪಿಎಲ್ ಖ್ಯಾತಿಯ ಸುರೇಶ್ ರೈನಾ!

ಮಿ.ಐಪಿಎಲ್ ಖ್ಯಾತಿಯ ಸುರೇಶ ರೈನಾ ಮುಂಬರುವ ದಿನಗಳಲ್ಲಿ ಅಬುಧಾಬಿಯಲ್ಲಿ ನಡೆಯಲಿರುವ T10 ಪಂದ್ಯಾವಳಿಗಳಲ್ಲಿ ಭಾಗವಹಿಸಲಿದ್ದಾರೆ.
Shivam
ಭಾರತದ ಮಾಜಿ ಕ್ರಿಕೆಟಿಗ ಸುರೇಶ ರೈನಾ ವಿದೇಶಿ ಟೂರ್ನಿಯಲ್ಲಿ ಮಿಂಚಲಿದ್ದಾರೆ.
ಯುಎಇ ಮೂಲದ ಲೀಗ್ ಅಬುಧಾಬಿ ಟಿ10ನಲ್ಲಿ ರೈನಾ ಕಾಣಿಸಿಕೊಳ್ಳಲಿದ್ದಾರೆ.
ಅಬುಧಾಬಿಯಲ್ಲಿ ನಡೆಯಲಿರುವ T10 (ADT10) ಸೀಸನ್ 6ರಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡ ಪ್ರತಿನಿಧಿಸಲಿದ್ದಾರೆ.
ಆಂಡ್ರೆ ರಸೆಲ್, ಟಾಸ್ಕಿನ್ ಅಹ್ಮದ್, ಜೋಶ್ ಲಿಟಲ್ ಮತ್ತು ಡೇವಿಡ್ ವೈಸ್ ಅವರೊಂದಿಗೆ ರೈನಾ ಆಡಲಿದ್ದಾರೆ.
ಭಾರತದಲ್ಲಿ ಎಲ್ಲ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೆ ರೈನಾ T10 ಲೀಗ್ ಆಡಲಿದ್ದಾರೆ.
ಭಾರತದ ಪರವಾಗಿ ರೈನಾ 18 ಟೆಸ್ಟ್‌,226 ಏಕದಿನ ಮತ್ತು 78 ಟಿ20 ಪಂದ್ಯಗಳನ್ನಾಡಿದ್ದಾರೆ.
ಸುರೇಶ್ ರೈನಾ 226 ಏಕದಿನ ಪಂದ್ಯಗಳಲ್ಲಿ 5615 ರನ್ ದಾಖಲಿಸಿದ್ದಾರೆ.
78 ಟಿ20 ಪಂದ್ಯಗಳಲ್ಲಿ 1,605 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
205 ಐಪಿಎಲ್ ಪಂದ್ಯಗಳನ್ನಾಡಿರುವ ರೈನಾ 39 ಅರ್ಧ ಶತಕಗಳು ಮತ್ತು ಒಂದು ಶತಕದೊಂದಿಗೆ 5,528 ರನ್ ಗಳಿಸಿದ್ದಾರೆ.
Read more