Tap to Read ➤

ಟಿ.20 ವಿಶ್ವಕಪ್‌: ಆರಂಭಕ್ಕೂ ಭಾರತಕ್ಕೆ ಆಘಾತ

ಏಷ್ಯಾಕಪ್ ಆರಂಭಕ್ಕೂ ಮುನ್ನ ಶುರುವಾದ ಟೀಮ್ ಇಂಡಿಯಾ ಆಟಗಾರರ ಗಾಯದ ಸಮಸ್ಯೆ ಮುಂದುವರೆದಿದ್ದು ಆಲ್‌ರೌಂಡರ್‌ ಜಡೇಜಾ ಮುಂಬರುವ ವಿಶ್ವಕಪ್‌ನಲ್ಲಿ ಪ್ರೇಕ್ಷಕರಾಗಿ ಭಾಗವಹಿಸಲಿದ್ದಾರೆ.
Shivam
ಜಡೇಜಾ ಹಾಂಗ್ ಕಾಂಗ್ ವಿರುದ್ದದ ಪಂದ್ಯದ ವೇಳೆ ಗಾಯಗೊಂಡಿದ್ದರು.
ಈ ಕಾರಣದಿಂದಾಗಿ ಸೂಪರ್ 4 ಹಂತದ ಪಂದ್ಯಗಳಲ್ಲಿ ತಂಡದಿಂದ ಹೊರಗುಳಿದಿದ್ದರು.
ಜಡೇಜಾ ಗಾಯಕ್ಕೆ ಕಾರಣವಾದ ಘಟನೆಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಿಡುಗಡೆಯಾಗಿರಲಿಲ್ಲ.
ಯುಎಇಯಿಂದ ಭಾರತಕ್ಕೆ ಮರಳಿದ ನಂತರ ಜಡೇಜಾ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ರವೀಂದ್ರ ಜಡೇಜಾ ಬರೆದುಕೊಂಡಿದ್ದಾರೆ.
ಆದರೆ ಗಾಯದಿಂದ ವಾಸಿಯಾಗಲು ಜಡೇಜಾ ಅಧಿಕ ಸಮಯದ ವಿಶ್ರಾಂತಿಯ ಪಡೆಯಬೇಕಾಗಿದೆ.
ಈ ಕಾರಣದಿಂದ ಜಡೇಜಾ ಇಲ್ಲದೆ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಮೂಲಗಳು ತಿಳಿಸಿವೆ
ಶೀಘ್ರದಲ್ಲೇ ಕಂಬ್ಯಾಕ್​ಗಾಗಿ ಸಿದ್ಧತೆಗಳನ್ನು ಆರಂಭಿಸುವುದಾಗಿ ತಿಳಿಸಿದ ಜಡೇಜಾ, ಪ್ರಾರ್ಥನೆಗಾಗಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ 35 ರನ್​ಗಳ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
more stories