Tap to Read ➤

ಪಾಕ್‌ನ ವಿಜ್ಞಾನ ಪಠ್ಯದಲ್ಲಿ ಬಾಬಾರ್ ಕವರ್‌ ಡ್ರೈವ್‌!

ಏಷ್ಯಾಕಪ್‌ನಲ್ಲಿ ಫೈನಲ್‌ನಲ್ಲಿ ಸೋಲು ಅನುಭವಿಸಿದ ಪಾಕಿಸ್ತಾನ ತಂಡದ ನಾಯಕ ಬಾಬಾ ಆಜಮ್‌ ಅವರ ಕವರ್ ಡ್ರೈವ್ ಕುರಿತು ಪಾಕಿಸ್ತಾನದ ಪಠ್ಯದಲ್ಲಿ ಮುದ್ರಿಸಲಾಗಿದೆ.
Shivam
ಬಾಬರ್ ಅಜಮ್ ಅವರ ಕವರ್‌ ಡ್ರೈವ್‌ ಕುರಿತು ಪಾಕ್‌ ತನ್ನ ವಿಜ್ಞಾನ ಪಠ್ಯದಲ್ಲಿ ಮುದ್ರಿಸಿದೆ.
ವಿಜ್ಞಾನ ಪಠ್ಯ ಪುಸ್ತಕದಲ್ಲಿ ಚಲನ ಶಕ್ತಿಯ ವಿವರಣೆಗಾಗಿ ಕವರ್ ಡ್ರೈವ್ ಉದಾಹರಣೆಗಾಗಿ ಬಳಸಿದೆ.
ಈ ಕುರಿತು ಪೋಸ್ಟ್‌ವೊಂದನ್ನು ಟ್ವಿಟ್‌ ಮಾಡಲಾಗಿದೆ.
ಫೆಡರಲ್ ಬೋರ್ಡ್ ಆಫ್ ಎಜುಕೇಶನ್‌ನ 9ನೇ ತರಗತಿಯ ಪಠ್ಯದಲ್ಲಿ ಮುದ್ರಿಸಲಾಗಿದೆ.
ಶಾಲಾ ಮಕ್ಕಳಿಗೆ ಸರಳವಾಗಿ ಭೌತಶಾಸ್ತ್ರ ಅರ್ಥವಾಗಲು ಈ ಪ್ರಯೋಗ ಕೈಗೊಂಡಿದೆ.
ಪಠ್ಯದಲ್ಲಿ, ಬಾಬರ್ ಅಜಮ್ ತನ್ನ ಬ್ಯಾಟ್‌ನಿಂದ ಚೆಂಡಿಗೆ 150 ಜೆ ಚಲನ ಶಕ್ತಿಯನ್ನು ನೀಡುವ ಮೂಲಕ ಕವರ್ ಡ್ರೈವ್ ಅನ್ನು ಹೊಡೆದಿದ್ದಾರೆ.
(ಎ) ಚೆಂಡಿನ ದ್ರವ್ಯರಾಶಿ 120 ಗ್ರಾಂ ಆಗಿದ್ದರೆ ಚೆಂಡು ಯಾವ ವೇಗದಲ್ಲಿ ಬೌಂಡರಿಗೆ ಹೋಗುತ್ತದೆ?
(ಬಿ) ಈ ವೇಗದಲ್ಲಿ ಚಲಿಸುವಂತೆ ಮಾಡಲು 450 ಗ್ರಾಂ ದ್ರವ್ಯರಾಶಿಯ ಫುಟ್‌ಬಾಲ್‌ಗೆ ಆಟಗಾರ ಎಷ್ಟು ಚಲನ ಶಕ್ತಿಯನ್ನು ನೀಡಬೇಕು ಎಂದು ಪ್ರಶ್ನಿಸಲಾಗಿದೆ.
ಚಲನ ಶಕ್ತಿಯ ಸೂತ್ರ ಬಳಸುವ ಮೂಲಕ ಉತ್ತರವನ್ನು ಕಂಡುಹಿಡಿಯುವುದಾಗಿ ಸಹ ಮುದ್ರಿಸಲಾಗಿದೆ.
ಪುರುಷರ ಕ್ರಿಕೆಟ್‌ನಲ್ಲಿ 155.9 ಗ್ರಾಂ ನಿಂದ 163 ಗ್ರಾಂ ತೂಕದ ಚೆಂಡನ್ನು ಬಳಕೆ ಮಾಡಲಾಗುವುದು ಎಂಬುದು ಸಹ ಪಾಕ್‌ಗೆ ತಿಳಿದಿಲ್ಲವೇ ಎಂದು ನೆಟ್ಟಿಗರು ಹಾಸ್ಯ ಮಾಡಿದ್ದಾರೆ.
more stories