Tap to Read ➤

T20 World Cup: ಫೈನಲ್‌ ಮ್ಯಾಚ್‌ ಕುರಿತು ಭವಿಷ್ಯ ನುಡಿದ ಕ್ರಿಸ್‌ ಗೇಲ್!

ವೆಸ್ಟ್‌ ಇಂಡೀಸ್ ದೈತ್ಯ ಬ್ಯಾಟರ್‌ ಕ್ರಿಸ್‌ ಗೇಲ್ 2022ರ ಟಿ20 ವಿಶ್ವಕಪ್‌ ಕುರಿತು ಭವಿಷ್ಯ ನುಡಿದಿದ್ದು, ಯಾವ ಯಾವ ತಂಡಗಳು ಫೈನಲ್ ಪ್ರವೇಶಿಸಲಿವೆ ಎಂದು ಹೇಳಿದ್ದಾರೆ.
Shivam
ICC T20 ವಿಶ್ವಕಪ್ ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿದೆ.
ಈ ಕುರಿತು ವೆಸ್ಟ್ ಇಂಡೀಸ್ ಮಾಜಿ ಬ್ಯಾಟರ್ ಕ್ರಿಸ್ ಗೇಲ್ ಫೈನಲ್ ತಲುಪಲಿರುವ ತಂಡಗಳ ಕುರಿತು ಭವಿಷ್ಯ ನುಡಿದಿದ್ದಾರೆ.
ಆಸ್ಟ್ರೇಲಿಯಕ್ಕೆ ತವರಿನ ಅನುಕೂಲವಿರುವುದರಿಂದ ಒಂದೆಡೆ ಫೈನಲ್ ತಲುಪುವ ಸಾಧ್ಯತೆಗೆಳು ಹೆಚ್ಚಿವೆ ಎಂದಿದ್ದಾರೆ.
ಮತ್ತೊಂದೆಡೆ ಭಾರತ, ಇಂಗ್ಲೆಂಡ್, ಪಾಕಿಸ್ತಾನ ನಡುವೆ ಭಾರಿ ಪೈಪೋಟಿ ನಡೆಯಲಿದೆ ಎಂದು ಹೇಳಿದ್ದಾರೆ.
ಈ ಸಂಘರ್ಷಗಳ ನಡುವೆ ಆಸ್ಟ್ರೇಲಿಯಾದೊಂದಿಗೆ ವೆಸ್ಟ್‌ ಇಂಡೀಸ್‌ ಫೈನಲ್‌ನಲ್ಲಿ ಸೆಣಸಾಡಲಿವೆ ಎಂದಿದ್ದಾರೆ.
ವೆಸ್ಟ್‌ಇಂಡೀಸ್‌ನಲ್ಲಿ ಅನುಭವಿ ಆಟಗಾರರನ್ನು ಕೈಬಿಟ್ಟಿರುವುದರಿಂದ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳಿವೆ ಎಂದು ಸಹ ಹೇಳಿದ್ದಾರೆ.
ತಂಡದಲ್ಲಿರುವ ಯುವ ಆಟಗಾರರು ಎದುರಾಳಿ ತಂಡಗಳಿಗೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದಿದ್ದಾರೆ.
ಗೇಲ್ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ.
Read more