Tap to Read ➤

Asia Cup 2022: ನೇರಪ್ರಸಾರ ವೀಕ್ಷಿಸುವುದು ಹೇಗೆ ?

ಆ.27ರಿಂದ ಪಾರಂಭವಾಗಲಿರುವ ಏಷ್ಯಾಕಪ್‌ ಟೂರ್ನಿಯನ್ನು ಯಾವ ಚಾನೆಲ್‌ನಲ್ಲಿ ಮತ್ತು ಹೇಗೆ ನೇರ ಪ್ರಸಾರ ನೋಡುವುದು ಎಂಬುದರ ಮಾಹಿತಿ ಇಲ್ಲಿದೆ.
Shivam
ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ಆಗಸ್ಟ್ 27ರಿಂದ ಪ್ರಾರಂಭವಾಗಲಿದೆ.
ಪಂದ್ಯಾವಳಿ ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ಜರುಗಲಿವೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ.
ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಹಾಗೂ ಹಾಂಗ್‌ಕಾಂಗ್ ತಂಡಗಳು ಕಣಕ್ಕಿಳಿಯಲಿವೆ.
ಏಷ್ಯಾಕಪ್ ಟೂರ್ನಿಯ ಎಲ್ಲಾ ಪಂದ್ಯಗಳ ನೇರ ಪ್ರಸಾರ ಭಾರತದಲ್ಲಿ ಸ್ಟಾರ್ ಸ್ಪೋರ್ಟ್ ನೆಟ್‌ವರ್ಕ್ ಚಾನೆಲ್‌ನಲ್ಲಿ ಲಭ್ಯವಿರಲಿದೆ.
ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ (ಇಂಗ್ಲಿಷ್), ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಎಚ್‌ಡಿ (ಹಿಂದಿ) ಈ ಚಾನೆಲ್‌ಗಳಲ್ಲಿ ನೇರಪ್ರಸಾರ ಲಭ್ಯವಿದೆ.
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ ಅಪ್ಲಿಕೇಶನ್‌ನಲ್ಲಿ ಸಹ ಪಂದ್ಯಗಳ ನೇರಪ್ರಸಾರ ಲಭ್ಯವಿರಲಿದೆ.
more updates