Tap to Read ➤

IND vs ENG: 23 ವರ್ಷದ ಬಳಿಕ ಭಾರತಕ್ಕೆ ODI ಸರಣಿ ವಶ!

ಮಹಿಳೆಯರ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಸ್ಪೋಟಕ ಬ್ಯಾಟಿಂಗ್‌ ಮೂಲಕ ಇಂಗ್ಲೆಂಡ್ ವಿರುದ್ದದ ಸರಣಿಯನ್ನು ವಶಪಡಿಸಿಕೊಂಡಿದೆ.
Shivam
1999ರ ನಂತರದಲ್ಲಿ ಮೊದಲ ಬಾರಿ ಆಂಗ್ಲರ ನಾಡಿನಲ್ಲಿ ಭಾರತ ಮಹಿಳಾ ತಂಡ ಏಕದಿನ ಸರಣಿಯನ್ನು ಮುಡಿಗೇರಿಸಿಕೊಂಡಿದೆ. .
ಇಂಗ್ಲೆಂಡ್‌ನ ಕ್ಯಾಂಟರ್‌ಬ್ಯುರಿಯ ಸೇಂಟ್‌ ಲಾರೆನ್ಸ್‌ ಕ್ರೀಡಾಂಗಣದಲ್ಲಿ ಎರಡನೇ ಏಕದಿನ ಪಂದ್ಯ ನಡೆದಿತ್ತು.
ಇಂಗ್ಲೆಂಡ್‌ ನಾಯಕಿ ಎಮಿ ಜೋನ್ಸ್‌ ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್‌ ಕಳೆದುಕೊಂಡು 333 ರನ್‌ ಗಳಿಸಿತ್ತು.
ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 111ಎಸೆತಗಳಲ್ಲಿ ಅಮೋಘ143ರನ್ ಗಳಿಸಿದ್ದರು.
ಹರ್ಲಿನ್‌ ಡಿಯೋಲ್ 72ಎಸೆತಗಳಲ್ಲಿ 58ರನ್ ಗಳಿಸಿದ್ದರು.
ಇಂಗ್ಲೆಂಡ್‌ 245ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲು ಅನುಭವಿಸುವಂತಾಯಿತು.
ಭಾರತದ ರೇಣುಕಾ ಸಿಂಗ್‌ ನಾಲ್ಕು ವಿಕೆಟ್‌ ಪಡೆದು ಗೆಲುವಿಗೆ ಕಾರಣವಾದರು.
more stories