Tap to Read ➤

ICC ಪ್ಲೇಯರ್ ಆಫ್ ಮಂತ್ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ, ನಿದಾ ದಾರ್!

ಭಾರತದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಮಹಿಳಾ ಕ್ರಿಕೆಟರ್ ನಿದಾ ದಾರ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Shivam
ವಿರಾಟ್‌ ಕೊಹ್ಲಿ ಅವರನ್ನು ಅಕ್ಟೋಬರ್ 2022ರ ತಿಂಗಳ ಆಟಗಾರ ಪ್ರಶಸ್ತಿ ವಿಜೇತ ಎಂದು ಐಸಿಸಿ ಘೋಷಿಸಿದೆ.
ಜಿಂಬಾಬ್ವೆಯ ಸಿಕಂದರ್ ರಜಾ ಮತ್ತು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
ಟಿ20 ವಿಶ್ವಕಪ್ 2022ರಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಂಬಲಾಗದ  ಇನ್ನಿಂಗ್ಸ್ ಅನ್ನು ಆಡಿದ್ದಾರೆ.
ವಿರಾಟ್‌ ಕೊಹ್ಲಿ T20 ವಿಶ್ವಕಪ್‌ 5 ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕಗಳು ಸೇರಿದಂತೆ 246 ರನ್ ಗಳಿಸಿದ್ದಾರೆ
ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನದ ನಿದಾ ದಾರ್ ಅವರು ಸಹ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಾರ್ ಅವರು ಅಕ್ಟೋಬರ್ ತಿಂಗಳಲ್ಲಿ 145 ರನ್ ಗಳಿಸಿ ಎಂಟು ಪ್ರಮುಖ ವಿಕೆಟ್‌ಗಳನ್ನು ಕಬಳಿದ್ದರು.
Know more