Tap to Read ➤

ವಾರ್ನರ್ ಜೀವಮಾನ ನಿಷೇಧ ಹಿಂಪಡೆದ ಆಸ್ಟ್ರೇಲಿಯಾ!?

ಬಾಲ್ ಟ್ಯಾಂಪರಿಂಗ್ ಆರೋಪದ ಮೇಲೆ ನಾಯಕ ಸ್ಥಾನಕ್ಕೆ ಜೀವಮಾನದ ನಿಷೇಧವನ್ನು ಎದುರಿಸಿದ್ದರು ವಾರ್ನರ್‌.
Shivam
ಆಸ್ಟ್ರೇಲಿಯಾ (ಸಿಎ) ಡೇವಿಡ್ ವಾರ್ನರ್ ಅವರ ಜೀವಮಾನ ನಾಯಕತ್ವದ ನಿಷೇಧವನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಸಲಾಗುತ್ತಿದೆ.
2018ರಲ್ಲಿ ಕೇಪ್ ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಲಾಗಿತ್ತು.
ಈ ಆರೋಪದ ಹಿನ್ನೆಲೆಯಲ್ಲಿ ವಾರ್ನರ್‌ಗೆ ನಾಯಕತ್ವದ ನಿಷೇಧವನ್ನು ನೀಡಲಾಗಿತ್ತು.
ಜೊತೆಗೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಸ್ಟೀವನ್ ಸ್ಮಿತ್, ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರಿಗೂ ಶಿಕ್ಷೆ ನೀಡಲಾಗಿತ್ತು.
ಈಗ ಆಸ್ಟ್ರೇಲಿಯಾ ಕಿಕೆಟ್ ಮಂಡಳಿ ನಿಷೇಧವನ್ನು ಹಿಂಪಡೆಯಲು ಚಿಂತನೆ ನಡೆಸಿದೆ.
ಭವಿಷ್ಯದಲ್ಲಿ ವಾರ್ನರ್ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳಲು ದಾರಿ ಮಾಡಿಕೊಡಲಾಗುವುದು ಎಂದು ತಿಳಿಸಿದೆ.
ನಿರ್ಬಂಧಗಳನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ತಿದ್ದುಪಡಿ ಸಹ ಮಾಡಲಾಗುವುದು ಎಂದು ಮಂಡಳಿ ತಿಳಿಸಿದೆ.
ಆರೋನ್ ಫಿಂಚ್ ನಿವೃತ್ತಿ ನಂತರ ಖಾಲಿ ಇರುವ ನಾಯಕನ ಸ್ಥಾನಕ್ಕೆ ವಾರ್ನರ್ ಸಂಭಾವ್ಯ ಅಭ್ಯರ್ಥಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ.
Read more