Tap to Read ➤

ಏಷ್ಯಾ ಕಪ್ 2022 : ಫೈನಲ್‌ಗೆ ಯಾವ ತಂಡಗಳು ಅರ್ಹತೆ ಪಡೆಯಬಹುದು?

ಸೂಪರ್‌ 4ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿರುವ ಭಾರತ ತಂಡಕ್ಕೆ ಫೈನಲ್‌ ಪ್ರವೇಶಿಸುವ ಸಾಧ್ಯತೆಗಳಿವೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
Shivam
ಏಷ್ಯಾ ಕಪ್ 2022
ಸೂಪರ್‌ 4ನಲ್ಲಿರುವ ನಾಲ್ಕುತಂಡಗಳ ಪೈಕಿ ಯಾವ ತಂಡಗಳು ಫೈನಲ್ ಪ್ರವೇಶಿಸಲಿವೆ ಎಂಬುದು ರೋಚಕತೆ ಉಂಟುಮಾಡಿದೆ.
ಶ್ರೀಲಂಕಾ ಮತ್ತು ಪಾಕಿಸ್ತಾನ ಸೂಪರ್‌ 4ನ ಮೊದಲ ಪಂದ್ಯಗಳಲ್ಲಿ ಜಯದಾಖಲಿಸಿ ತಲಾ 2 ಅಂಕಗಳನ್ನು ಪಡೆದಿವೆ.
ಭಾರತ ಮತ್ತು ಅಪ್ಘಾನಿಸ್ತಾನ ತಂಡಗಳು ಸೋಲು ಅನುಭವಿಸಿ ಅಂಕ ಪಟ್ಟಿಯಲ್ಲಿ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.
ಸೂಪರ್ 4ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಸೋಲು ಭಾರತವನ್ನು ಮೂರನೇ ಸ್ಥಾನಕ್ಕೆ ತಲುಪುವಂತೆ ಮಾಡಿದೆ.
ಏಷ್ಯಾ ಕಪ್ 2022
ಭಾರತ ತಂಡ ಫೈನಲ್ ಪ್ರವೇಶಿಸಲು ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡದ ವಿರುದ್ದ ಉತ್ತಮ ಅಂಕಗಳ ಗೆಲುವು ಸಾಧಿಸಬೇಕು.
ಪಾಕಿಸ್ತಾನ ಫೈನಲ್‌ಗೆ ಅರ್ಹತೆ ಗಳಿಸಬೇಕಾದರೆ ಶ್ರೀಲಂಕಾ ಅಥವಾ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕನಿಷ್ಠ ಒಂದು ಗೆಲುವು ಸಾಧಿಸಬೇಕು.
ಶ್ರೀಲಂಕಾ ಫೈನಲ್ ಕನಸು ನನಸಾಗಬೇಕಾದರೇ ಭಾರತ ಅಥವಾ ಪಾಕಿಸ್ತಾನದ ವಿರುದ್ಧದ ಒಂದು ಪಂದ್ಯವನ್ನು ಗೆಲ್ಲಬೇಕು.
ಅಫ್ಘಾನಿಸ್ತಾನವು ಫೈನಲ್‌ಗೆ ಅರ್ಹತೆ ಪಡೆಯಬೇಕಾದರೆ ಮುಂಬರುವ ಎರಡು ಪಂದ್ಯಗಳಲ್ಲಿ ಜಯದಾಖಲಿಸಬೇಕು.
ಏಷ್ಯಾ ಕಪ್ 2022
More stories