Tap to Read ➤

ಹಾಕಿ ಮಾಂತ್ರಿಕ' ಧ್ಯಾನ್ ಚಂದ್ ಕುರಿತ ಆಸಕ್ತಿದಾಯಕ ಸಂಗತಿಗಳು

ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಕುರಿತು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
Shivam
ಧ್ಯಾನ್ ಚಂದ್ ಅವರ ಮೂಲ ಹೆಸರು ಧ್ಯಾನ್ ಸಿಂಗ್. ಚಂದ್ರನ ಬೆಳಕಿನಲ್ಲಿ ರಾತ್ರಿ ಹಾಕಿ ಅಭ್ಯಾಸ ಮಾಡುತ್ತಿದ್ದ ಕಾರಣ ಅವರಿಗೆ 'ಚಾಂದ್' ಎಂಬ ಅಡ್ಡಹೆಸರನ್ನು ನೀಡಿದರು.
ಧ್ಯಾನ್ ಚಂದ್ ಅವರು ಚಿಕ್ಕವರಿದ್ದಾಗ ಕುಸ್ತಿಯನ್ನು ಪ್ರೀತಿಸುತ್ತಿದ್ದರು 16 ನೇ ವಯಸ್ಸಿನಲ್ಲಿ ಭಾರತೀಯ ಸೇನೆ ಸೇರಿಕೊಂಡಿದ್ದರು.
1928 ರ ಆಂಸ್ಟರ್‌ಡ್ಯಾಮ್ ಒಲಿಂಪಿಕ್ಸ್‌ನಲ್ಲಿ ಅವರು 14 ಗೋಲುಗಳನ್ನು ಗಳಿಸಿದರು.
1936 ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾರತದ ಗೆಲುವಿನ ನಂತರ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಅವರು ಧ್ಯಾನ್‌ ಅವರಿಗೆ ಜರ್ಮನ್ ಪೌರತ್ವ ಮತ್ತು ಜರ್ಮನ್ ಮಿಲಿಟರಿ ಸೇರುವಂತೆ ಪ್ರಸ್ತಾಪಿಸಿದ್ದರು.
ಧ್ಯಾನ್ ಚಂದ್ ಅವರ ಕಿರಿಯ ಸಹೋದರ ರೂಪ್ ಸಿಂಗ್ ಕೂಡ ಹಾಕಿ ಆಟಗಾರರಾಗಿದ್ದರು. ಇಬ್ಬರನ್ನು 'ಹಾಕಿ ಅವಳಿಗಳು' ಎಂದು ಕರೆಯುತ್ತಿದ್ದರು.
1932 ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತವು ಎದುರಾಳಿಗಳ ವಿರುದ್ಧ ಗಳಿಸಿದ 35 ಗೋಲುಗಳಲ್ಲಿ ಇವರಿಬ್ಬರು 25 ಗೋಲುಗಳನ್ನು ಗಳಿಸಿದರು
ಚಾಂದ್‌ ಅವರ ಹಾಕಿ ಸ್ಟಿಕ್ನಲ್ಲಿ ಮ್ಯಾಗ್ನೆಟ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೆದರ್ಲ್ಯಾಂಡ್ಸ್ ಹಾಕಿ ಅಧಿಕಾರಿಗಳು ಅದನ್ನು ಮುರಿದು ಪರೀಕ್ಷಿಸಿದ್ದರು.
ಡಿಸೆಂಬರ್ 3, 1980 ರಂದು  ಚಾಂದ್ ಅವರ ನೆನಪಿಗಾಗಿ ಸರ್ಕಾರವು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.
More stories