Tap to Read ➤

ವೆಸ್ಟ್ ಇಂಡೀಸ್ ನಾಯಕ ಸ್ಥಾನ ತೊರೆದ ಪೂರನ್!

T20I ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದ ವೆಸ್ಟ್‌ ಇಂಡೀಸ್ ತಂಡದ ನಾಯಕ ಸ್ಥಾನವನ್ನು ನಿಕೋಲಸ್ ಪೂರನ್ ತೊರೆದಿದ್ದಾರೆ.
Shivam
ಟಿ20 ವಿಶ್ವಕಪ್‌ನಲ್ಲಿ ಪೂರನ್‌ ನಾಯಕತ್ವದ ವೆಸ್ಟ್ ಇಂಡೀಸ್‌ ತಂಡ ಸೂಪರ್‌-12ರ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿತ್ತು.
ಈ ಹಿನ್ನಲೆಯಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಭಾರಿ ಮುಖಭಂಗ ಅನುಭವಿಸುವಂತಾಗಿತ್ತು.
ಇದೀಗ ನಿಕೋಲಸ್‌ ಪೂರನ್ ಸೀಮಿತ ಓವರ್‌ಗಳ ತಂಡದ ನಾಯಕತ್ವವನ್ನು ತೊರೆದಿದ್ದಾರೆ.
ಪೊಲಾರ್ಡ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಹಿನ್ನೆಲೆಯಲ್ಲಿ ಪೂರನ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ವೊಂದನ್ನು ಪೂರನ್ ಹಂಚಿಕೊಂಡಿದ್ದಾರೆ.
ಟಿ20 ವಿಶ್ವಕಪ್‌ ಟೂರ್ನಿಯ ವೈಫಲ್ಯಗಳಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಪೂರನ್ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ODI ಹಾಗೂ ಟಿ20iಗಳಲ್ಲಿ ನಾಯಕನಾಗಿ ರೊವ್ಮನ್ ಪೂವೆಲ್ ಆಯ್ಕೆಯಾಗುವ ಸಾಧ್ಯತೆಗಳಿವೆ.
More Stories