Shivakumar Muradimath Dec 15, 2023
T20i: ಸಿಕ್ಸರ್ ಬಾರಿಸಿ ವಿರಾಟ್ ಕೊಹ್ಲಿ ಹಿಂದಿಕ್ಕಿದ ಸೂರ್ಯಕುಮಾರ್
* ಸೂರ್ಯಕುಮಾರ್ ಯಾದವ್ ಟಿ20ಐನಲ್ಲಿ ನೂತನ ಮೈಲಿಗಲ್ಲು ತಲುಪಿದ್ದಾರೆ.
* ದಕ್ಷಿಣ ಆಫ್ರಿಕಾ ವಿರುದ್ದದ ಟಿ20ಐ ಪಂದ್ಯದಲ್ಲಿ 8 ಸಿಕ್ಸರ್ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.
* ಭಾರತದ ಪರ ಟಿ20ಐನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
* ಈ ಮೂಲಕ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿದು ಹಾಕಿದ್ದಾರೆ.
* ಈ ಹಿಂದೆ ವಿರಾಟ್ ಕೊಹ್ಲಿ 117 ಸಿಕ್ಸ್ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದರು.
* ಈಗ ಸೂರ್ಯಕುಮಾರ್ 122 ಸಿಕ್ಸ ಬಾರಿಸುವ ಮೂಲಕ ಕೊಹ್ಲಿ ದಾಖಲೆ ಹಿಂದಿಕ್ಕಿದ್ದಾರೆ.
* ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ 182 ಸಿಕ್ಸಬಾರಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
More Stories