Tap to Read ➤

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಸಾಧನೆಗಳು

46 ವರ್ಷದ ಆಂಡ್ರ್ಯೂ ಸೈಮಂಡ್ಸ್ ಕಾರು ಅಫಘಾತದಲ್ಲಿ ನಿಧನರಾಗಿದ್ದು, ವೃತ್ತಿ ಕ್ರಿಕೆಟ್‌ನಲ್ಲಿ ಅವರ ಸಾಧನೆಗಳ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ
Shivam Muradimath
ಕೆಲ ತಿಂಗಳುಗಳ ಹಿಂದೆಯಷ್ಟೇ ಆಸ್ಟ್ರೇಲಿಯಾದ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈಗ ಮತ್ತೊರ್ವ ಆಸ್ಟ್ರೇಲಿಯನ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಅವರ ಅಗಲುವಿಕೆಯಿಂದ ಕ್ರಿಕೆಟ್ ಜಗತ್ತಿನ ಇಬ್ಬರು ಲೆಜೆಂಡ್‌ಗಳನ್ನು ಕಳೆದುಕೊಂಡಂತಾಗಿದೆ.
ಸೈಮಂಡ್ಸ್ 1998 ರಿಂದ 2009 ರವರೆಗೆ ಆಸ್ಟ್ರೇಲಿಯನ್ ತಂಡದ ಭಾಗವಾಗಿದ್ದರು.
ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 26 ಟೆಸ್ಟ್, 198 ODI ಮತ್ತು 14 T20Iಗಳನ್ನು ಆಡಿದ್ದಾರೆ.
ಟೆಸ್ಟ್‌ನಲ್ಲಿ 1462 ರನ್, ಏಕದಿನದಲ್ಲಿ 5088 ರನ್ ಮತ್ತು ಟಿ20ಯಲ್ಲಿ 337 ರನ್ ಗಳಿಸಿದ್ದಾರೆ.
ಸೈಮಂಡ್ಸ್ ಪ್ರತಿನಿಧಿಸಿದ್ದ ಆಸ್ಟೇಲಿಯಾ ತಂಡ ನಾಲ್ಕು ವರ್ಷಗಳಲ್ಲಿ ಮೂರು ICC ಪ್ರಶಸ್ತಿಗಳನ್ನು ಗೆದ್ದಿದೆ.
39 ಐಪಿಎಲ್ ಪಂದ್ಯಗಳನ್ನಾಡಿದ ಅವರು, ಒಂದು ಶತಕ ಮತ್ತು ಐದು ಅರ್ಧ ಶತಕಗಳ ಸಹಾಯದಿಂದ 974 ರನ್ ಗಳಿಸಿದ್ದಾರೆ.
ಸೈಮಂಡ್ಸ್ ನಿಧನಕ್ಕೆ ಸಂತಾಪ ಸೂಚಿಸಿದ ಕ್ರಿಕೆಟ್‌ ಲೋಕದ ತಾರೆಯರು
More Updates