Tap to Read ➤

ಟಿ20 ವಿಶ್ವಕಪ್‌ನಲ್ಲಿ ವಿಶೇಷ ಮೈಲುಗಲ್ಲು ತಲುಪಿದ ವಿರಾಟ್ ಕೊಹ್ಲಿ !

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನೂತನ ಮೈಲುಗಲ್ಲು ತಲುಪಿದ್ದು, ಈ ಕುರಿತು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿರಿ.
Shivam
ವೃತ್ತಿ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ವಿರಾಟ್‌ ಕೊಹ್ಲಿ ಇದೀಗ ಟಿ20 ವಿಶ್ವಕಪ್‌ನಲ್ಲಿ ವಿಶೇಷ ಮೈಲುಗಲ್ಲು ತಲುಪಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 12 ರನ್‌ ಗಳಿಸಿದ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ1000 ರನ್‌ ಮೈಲುಗಲ್ಲು ಸ್ಥಾಪಿಸಿದ್ದಾರೆ.
ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ1kರನ್ ದಾಖಲಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆ ನಿರ್ಮಿಸಿದ್ದಾರೆ.
ಟಿ20 ವಿಶ್ವಕಪ್‌ನ 24 ಪಂದ್ಯಗಳಲ್ಲಿ 83.41ರ ಸರಾಸರಿಯಲ್ಲಿ ವಿರಾಟ್‌ ಕೊಹ್ಲಿ 1001 ರನ್‌ ಗಳಿಸಿದ್ದಾರೆ.
89ರನ್‌ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದ್ದು,12 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಈ ವರೆಗೂ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ 89 ಬೌಂಡರಿ ಮತ್ತು 26 ಸಿಕ್ಸರ್‌ ಸಿಡಿಸಿದ್ದಾರೆ.
ಈ ದಾಖಲೆಯ ರೇಸ್‌ನಲ್ಲಿ ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿದ್ದು,919ರನ್ ಬಾರಿಸಿದ್ದಾರೆ.
Click here