Advertisement

ಕೊರೊನಾ ಲಸಿಕೆ ಹಾಕಿಸಿಕೊಂಡ ಸ್ಮೃತಿ ಮಂದಾನ


ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಮಂಗಳವಾರ (ಮೇ 11 ) ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ತಾವು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿರುವ ವಿಷಯವನ್ನು ಸ್ಮೃತಿ ಮಂದಾನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೊರೊನಾ ಲಸಿಕೆ ಪಡೆಯುತ್ತಿರುವ ಫೋಟೊವನ್ನು ಹಂಚಿಕೊಂಡಿರುವ ಸ್ಮೃತಿ ಮಂದಾನ 'ನಾನು ಕೊರೊನಾ ಲಸಿಕೆಯ ಮೊದಲನೇ ಡೋಸ್ ಪಡೆದುಕೊಂಡಿದ್ದೇನೆ, ದಯವಿಟ್ಟು ಎಲ್ಲರೂ ಸುರಕ್ಷಿತರಾಗಿರಿ ಮತ್ತು ಕೊರೊನಾ ಲಸಿಕೆ ಹಾಕಿಸಿಕೊಳ್ಳಿ' ಎಂದು ಬರೆದುಕೊಳ್ಳುವುದರ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ.

Advertisement
Advertisement

ಹೀಗೆ ಕೊರೊನಾ ಲಸಿಕೆ ಪಡೆಯುವುದರ ಮೂಲಕ ಸ್ಮೃತಿ ಮಂದಾನ ಪ್ರಸ್ತುತ ಅಂತಾರಾಷ್ಟ್ರೀಯ ಭಾರತ ಕ್ರಿಕೆಟ್ ಮಹಿಳಾ ತಂಡದಲ್ಲಿರುವ ಆಟಗಾರ್ತಿಯರ ಪೈಕಿ ಕೊರೊನಾ ಲಸಿಕೆ ಪಡೆದ ಮೊಟ್ಟಮೊದಲನೆ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಹೌದು ಭಾರತ ಮಹಿಳಾ ಕ್ರಿಕೆಟ್ ತಂಡದ ಯಾವೊಬ್ಬ ಆಟಗಾರ್ತಿಯೂ ಸಹ ಇದುವರೆಗೂ ಕೊರೊನಾ ಲಸಿಕೆ ಹಾಕಿಸಿಕೊಂಡಿರಲಿಲ್ಲ, ಈ ಮೂಲಕ ಸ್ಮೃತಿ ಮಂದಾನ ಕೊರೊನಾ ಲಸಿಕೆ ಪಡೆದ ಭಾರತ ಮಹಿಳಾ ಕ್ರಿಕೆಟ್ ತಂಡದ ಮೊದಲ ಆಟಗಾರ್ತಿ ಎನಿಸಿಕೊಳ್ಳುವುದರ ಮೂಲಕ ಇತರ ಆಟಗಾರ್ತಿಯರಿಗೂ ಮಾದರಿಯಾಗಿದ್ದಾರೆ.

ಇನ್ನು ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಪಡೆದುಕೊಳ್ಳಲು ಕರೆ ನೀಡಿದ್ದು ಇತ್ತೀಚೆಗಷ್ಟೆ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬೂಮ್ರಾ ಕೂಡ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದರು.

English Summary

Smriti Mandhana takes 1st jab of COVID-19 vaccine, urges everyone to get vaccinated. Read on
Read more...