» Authors

Author Profiles

ಮಹೇಶ್ ಮಲ್ನಾಡ್
ಸುದ್ದಿ ಸಂಪಾದಕ
ODMPL ಕನ್ನಡ ವಿಭಾಗದಲ್ಲಿ ಸುದ್ದಿ ಸಂಪಾದಕ. ಕನ್ನಡ ವೆಬ್ ಪ್ರಪಂಚದಲ್ಲಿ ವರದಿ, ಸುದ್ದಿ ಸಂಕಲನದಲ್ಲಿ 13 ವರ್ಷಗಳ ಅನುಭವ. ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ಕನ್ನಡ ಕವಿಗಳು, ತೇಜಸ್ವಿ ಕುರಿತ ವೆಬ್ ತಾಣ ವಿನ್ಯಾಸಗೊಳಿಸಿದ್ದೇನೆ. ಕನ್ನಡದಲ್ಲಿ ಹಕ್ಕಿಗಳ ಬಗ್ಗೆ ಹಕ್ಕಿಪುಕ್ಕ ಎಂಬ ತಾಣ ನಿರ್ಮಿಸಿದ ಖುಷಿಯಿದೆ.ದೈನಂದಿನ ಸುದ್ದಿ ಜೊತೆಗೆ ಕ್ರೀಡೆ, ಸಿನಿಮಾ, ಉದ್ಯಮ, ತಂತ್ರಜ್ಞಾನ ಕುರಿತ ವಿಶೇಷ ಸುದ್ದಿಗಳ ಹುಡುಕಾಟ, ಪ್ರಸ್ತುತಿ ಈ ಕ್ಷೇತ್ರದಲ್ಲಿ ಉಳಿಸಿದೆ.
ಸದಾಶಿವ ಎಸ್
ಉಪ ಸಂಪಾದಕ
ಏಲಕ್ಕಿ ತವರೂರು ಸಕಲೇಶಪುರ ನನ್ನೂರು. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ (ವಾಣಿಜ್ಯ), ಡಿಗ್ರಿ (ಬಿಎ), ಸ್ನಾತಕೋತ್ತರ (ಪತ್ರಿಕೋದ್ಯಮ) ಪದವಿ ಮುಗಿಸಿದ್ದೇನೆ. ಕ್ರೀಡೆಯಲ್ಲಿ ಹೆಚ್ಚಿನ ಪ್ರೀತಿಯಿದೆ. ಏಳುಸಾರಿ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ(ದೂರದ ಓಟ)ಗಳಲ್ಲಿ ಭಾಗವಹಿಸಿದ್ದೇನೆ; ಎರಡು ಕಂಚಿನ ಪದಕಗಳೂ ಸಿಕ್ಕಿವೆ. ಚಿತ್ರ ಗೀಚೋದು, ಕಥೆ-ಕವನ-ಲೇಖನ ಬರೆಯೋದು, ಸಿನಿಮಾ ವೀಕ್ಷಣೆ, ಸಂಗೀತ ಆಲಿಸೋದು, ಹುಂಬನಂತೆ ಎಲ್ಲೆಲ್ಲಿಗೋ ಸುತ್ತಾಡೋ ಹವ್ಯಾಸಗಳು ನನ್ನನ್ನು ಖುಷಿಯಲ್ಲಿಡುತ್ತಿವೆ.
ಅಮಿತ್ ಎಂ.ಎಸ್.
ಹಿರಿಯ ಉಪ ಸಂಪಾದಕ
ODMPL ಕನ್ನಡ ವೆಬ್‌ ತಾಣದಲ್ಲಿ ಹಿರಿಯ ಉಪಸಂಪಾದಕ. ಪ್ರಸ್ತುತ ಸಿನಿಮಾ ವಿಭಾಗದಲ್ಲಿ (ಫಿಲ್ಮಿಬೀಟ್) ಕಾರ್ಯನಿರ್ವಹಿಸುತ್ತಿದ್ದೇನೆ. ಸುಮಾರು ಹನ್ನೊಂದು ವರ್ಷಗಳಿಂದ ಪತ್ರಿಕೋದ್ಯಮ ವೃತ್ತಿಯಲ್ಲಿದ್ದೇನೆ. ಹುಟ್ಟಿ ಬೆಳೆದ ಊರು ಮಲೆನಾಡಿನ ತೀರ್ಥಹಳ್ಳಿ. ಪ್ರಾಥಮಿಕ ಶಿಕ್ಷಣ ನನ್ನ ಹುಟ್ಟೂರು, ಪದವಿ ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ. ಪತ್ರಿಕೋದ್ಯಮದ ಶಿಕ್ಷಣ ನೀಡಿದ್ದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ. ಮೊದಲು ಕೆಲಸ ನೀಡಿ ಪತ್ರಿಕೋದ್ಯಮ ವೃತ್ತಿ ಬದುಕನ್ನು ಆರಂಭಿಸಲು ನೆರವಾದದ್ದು ಸಂಯುಕ್ತ ಕರ್ನಾಟಕ. ಬಳಿಕ ಪ್ರಜಾವಾಣಿಯಲ್ಲಿ ಡೆಸ್ಕ್, ಸಿನಿಮಾ ವರದಿಗಾರಿಕೆ ಮತ್ತು ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಒಟ್ಟು ಸುಮಾರು ಎಂಟು ವರ್ಷ ಅನುಭವ. 2018ರಿಂದ ಆನ್‌ಲೈನ್ ಪತ್ರಿಕೋದ್ಯಮದಲ್ಲಿ ಕಲಿಕೆ ಮುಂದುವರಿದಿದೆ. ವೃತ್ತಿಗೆ ಪೂರಕವಾಗಿರುವ ಬರವಣಿಗೆ, ಸಿನಿಮಾ ವೀಕ್ಷಣೆ, ಓದು ಹವ್ಯಾಸವೂ ಹೌದು. ಕ್ರಿಕೆಟ್ ಮತ್ತೊಂದು ಆಸಕ್ತಿಯ ಕ್ಷೇತ್ರ. ಹೊಸ ಜಾಗಗಳಿಗೆ ಪ್ರವಾಸ, ಚಾರಣ ಅಚ್ಚುಮೆಚ್ಚಿನ ಸಂಗತಿಗಳು.
ಮಂಜುನಾಥ ಸಿ
ಉಪ ಸಂಪಾದಕ
ಒನ್‌ಇಂಡಿಯಾ ಕನ್ನಡ ವೆಬ್‌ ತಾಣದಲ್ಲಿ ಉಪಸಂಪಾದಕ. ಚಲನಚಿತ್ರ ವೀಕ್ಷಣೆ, ಸಾಹಿತ್ಯ ಮತ್ತು ಕ್ರೀಡೆ ನನ್ನ ಮೆಚ್ಚಿನ ಹವ್ಯಾಸಗಳು.
ಬಾಲರಾಜ್ ತಂತ್ರಿ
ಮುಖ್ಯ ಆಡಳಿತ ಅಧಿಕಾರಿ
ಒನ್ ಇಂಡಿಯಾ ಸಂಸ್ಥೆಯ ಎಡ್ಮಿನ್ ಮುಖ್ಯಸ್ಥ. ಸ್ವಂತ ಊರು ಕರಾವಳಿ ಜಿಲ್ಲೆ ಉಡುಪಿ. ರಾಜಕೀಯ ಸಂಬಂಧ ಲೇಖನ ಬರೆಯುವುದೆಂದರೆ ತುಸು ಇಷ್ಟ ಜಾಸ್ತಿ. ಹಳೆಯ ಕನ್ನಡ ಹಾಡು ಕೇಳುವುದು, ಪ್ರವಾಸ ನನ್ನ ಹವ್ಯಾಸ ಮತ್ತು ಆಸಕ್ತಿ.
ಭರತ್ ಕುಮಾರ್
ಉಪ ಸಂಪಾದಕ/ವರದಿಗಾರ
ಪ್ರಸ್ತುತ ಒನ್ ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡದಲ್ಲಿ ಕಳೆದ ನಾಲ್ಕು ವರ್ಷದಿಂದ ಸಬ್‌ ಎಡಿಟರ್/ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ನಿವಾಸಿ. ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ (ಎಲೆಕ್ಟ್ರಾನಿಕ್ ಮಾಧ್ಯಮ) ಸ್ನಾತಕೋತ್ತರ ಪದವಿ ಪಡೆದಿದ್ದೇನೆ... 2014 ವರ್ಷದಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲೆಕ್ಟ್ರಾನಿಕ್ ಮೀಡಿಯಾ ಮತ್ತು ಆನ್‌ಲೈನ್‌ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ.
ಗುರು ಕುಂಟವಳ್ಳಿ
ಉಪ ಸಂಪಾದಕ
ಒನ್ಇಂಡಿಯಾ ಕನ್ನಡದಲ್ಲಿ ಉಪ ಸಂಪಾದಕ. ಹುಟ್ಟಿ ಬೆಳೆದದ್ದು ಮಲೆನಾಡಿನ ತೀರ್ಥಹಳ್ಳಿಯಲ್ಲಿ, ಶಿವಮೊಗ್ಗ ತವರು ಜಿಲ್ಲೆ, ಈಗ ಅನ್ನ ಕೊಡುವ ಊರು ನಮ್ಮ ಬೆಂಗಳೂರು. ತೇಜಸ್ವಿ ನೆಚ್ಚಿನ ಲೇಖಕರು. ಸಂಗೀತ ಕೇಳುವುದು, ಪ್ರವಾಸ ಮಾಡುವುದು ಇಷ್ಟ.
Senior Sub Editor
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more