For Quick Alerts
ALLOW NOTIFICATIONS  
For Daily Alerts

All England 2023: 16ರ ಘಟ್ಟದಲ್ಲಿ ಸೋತು ಹೊರಬಿದ್ದ ಭಾರತದ ಹೆಚ್‌ಎಸ್ ಪ್ರಣಯ್, ಕಿಡಂಬಿ ಶ್ರೀಕಾಂತ್

All England 2023: HS Prannoy and Kidambi Srikanth ended campaign after lost in Round of 16

ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಭಾರತದ ಇಬ್ಬರು ಸ್ಟಾರ್ ಶಟ್ಲರ್‌ಗಳಾದ ಹೆಚ್‌ಎಸ್ ಪ್ರಣಯ್ ಹಾಗೂ ಕಿಡಂಬಿ ಶ್ರೀಕಾಂತ್ ಸಿಂಗಲ್ಸ್ ವಿಭಾಗದಲ್ಲಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ. ಅಂತಿಮ 16ರ ಘಟ್ಟದಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಎದುರಾಳಿಗಳಿಗೆ ಶರಣಾದ ಬಳಿಕ ಈ ಇಬ್ಬರು ಆಟಗಾರರು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಹೆಚ್‌ಎಸ್ ಪ್ರಣಯ್‌ಗೆ ಈ ಹಂತದಲ್ಲಿ ಆಂಟನಿ ಸಿನಿಸುಕಾ ಗಿಂಟಿಂಗ್ ಎದುರಾಳಿಯಾಗಿ ಸವಾಲೊಡ್ಡಿದ್ದರು. ಈ ಪಂದ್ಯದಲ್ಲಿ 20-22, 21-15, 17-21 ಅಂತರದಲ್ಲಿ ಭಾರತದ ಶಟ್ಲರ್ ಸೋಲು ಕಂಡಿದ್ದಾರೆ. 30ರ ಹರೆಯದ ಪ್ರಣಯ್ ಮೊದಲ ಗೇಮ್‌ ಕಳೆದುಕೊಂಡ ಬಳಿಕ ಎರಡನೇ ಸೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದುಕೊಂಡರು. ಕೊನೆಯ ಗೇಮ್‌ನಲ್ಲಿಯೂ ಪ್ರಣಯ್ ಅವರಿಂದ ಉತ್ತಮ ಪೈಪೋಟಿ ಬಂತಾದರೂ ಅಂತಿಮವಾಗಿ ಎದುರಾಳಿಗೆ ಶರಣಾಗಬೇಕಾಯಿತು.

ಈ ಪಂದ್ಯವನ್ನು ಗೆದ್ದ ಇಂಡೋನೇಷ್ಯಾದ ಆಟಗಾರ ಗಿಂಟಿಂಗ್ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದು ಮಾರ್ಚ್ 16 ರಂದು ಡೆನ್ಮಾರ್ಕ್‌ನ ಆಂಡರ್ಸ್ ಆಂಟನ್‌ಸೆನ್ ಅವರನ್ನು ಎದುರಿಸಲಿದ್ದಾರೆ. ಆಂಟನ್‌ಸೆನ್ ಕಳೆದ ವರ್ಷದ ರನ್ನರ್ ಅಪ್ ಆಗಿದ್ದು ಭಾರತದ ಲಕ್ಷ್ಯ ಸೇನ್ ಅವರನ್ನು 21-13, 21-15 ಅಂಕದಿಂದ ರೌಂಡ್ ಆಫ್ 16 ಪಂದ್ಯದಲ್ಲಿ ಸೋಲಿಸಿದ್ದಾರೆ.

ಇನ್ನು ಕಿಡಂಬಿ ಶ್ರೀಕಾಂತ್‌ಗೆ ಜಪಾನ್‌ನ ಆಟಗಾರ ಕೊಡೈ ನರೋಕಾ ಅವರನ್ನು ಎದುರಿಸಿ ಸೋಲು ಕಂಡಿದ್ದದಾರೆ. ವಿಶ್ವದ ನಂ.6ನೇ ಶ್ರೇಯಾಂಕದ ಆಟಗಾರ ಕೊಡೈ ನರೋಕಾ ವಿರುದ್ಧ 17-21, 15-21 ರಿಂದ ಸೋಲು ಕಂಡಿದ್ದಾರೆ ಕಿಡಂಬಿ ಶ್ರೀಕಾಂತ್.

ಕಣದಲ್ಲಿ ಮುಂದುವರಿದ ಇಬ್ಬರು ಆಟಗಾರ್ತಿಯರು: ಪ್ರಮುಖ ಆಟಗಾರರೆಲ್ಲಾ ಸೋತು ನಿರ್ಗಮಿಸಿರುವ ಕಾರಣ ಈಗ ಇಬ್ಬರು ಆಟಗಾರ್ತಿಯರು ಮಾತ್ರವೇ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಮುಂದುವರಿದಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದಿದ್ದು ಭರವಸೆ ಮೂಡಿಸಿದ್ದಾರೆ. ಭಾರತದ ಈ ಯುವ ಡಬಲ್ಸ ಜೋಡಿ ವಿಶ್ವದ ಮಾಜಿ ನಂ.1 ಜೋಡಿಯಾದ ಯೂಕಿ ಫುಕುಶಿಮಾ ಮತ್ತು ಸಯಾಕಾ ಹಿರೋಟಾ ಅವರನ್ನು 21-14, 24-22 ರಿಂದ ಮಣಿಸಿದರು.

ವಿಶ್ವ ನಂ.17 ಜೋಡಿಯಾಗಿರುವ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಚೀನಾದ ಲಿ ವೆನ್ ಮೇ ಮತ್ತು ಲಿಯು ಕ್ಸುವಾನ್ ಕ್ಸುವಾನ್ ಅವರೊಂದಿಗೆ ಮುಂದಿನ ಸೆಣೆಸಾಟ ನಡೆಸಲಿದ್ದಾರೆ. ಆರಂಭದಲ್ಲಿ ಭಾರತದ ಜೋಡಿ ನಂ.7 ಶ್ರೇಯಾಂಕದ ಜೋಡಿಯಾದ ಜೊಂಗ್‌ಕೋಲ್ಫಾನ್ ಕಿಟಿಹರಕುಲ್ ಮತ್ತು ರವಿಂಡಾ ಪ್ರಜೋಂಗೈ ವಿರುದ್ಧ ಗೆದ್ದು ಹೊರದಬ್ಬಿತ್ತು.

Story first published: Friday, March 17, 2023, 12:08 [IST]
Other articles published on Mar 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+