ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನ ಆರಂಭ ಪಡೆದ ಭಾರತದ ಲಕ್ಷ್ಯ ಸೇನ್

ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಆಟಗಾರರು ಶುಭಾರಂಭ ಮಾಡಿದ್ದಾರೆ. ಲಕ್ಷ್ಯ ಸೇನ್ ಮತ್ತು ಹೆಚ್‌ಎಸ್ ಪ್ರಣಯ್ ತಮ್ಮ ಮೊದಲ ಸುತ್ತಿನಲ್ಲಿ ಗೆಲುವು ಸಧಿಸುವ ಮೂಲಕ ಗೆಲುವಿನ ಆರಂಭ ಪಡೆದುಕೊಂಡಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಟೂರ್ನಮೆಂಟ್‌ನಲ್ಲಿ ಲಕ್ಷ್ಯ ಸೇನ್ ತೈವಾನ್‌ನ ಚೌ ಟಿಯೆನ್ ಚೆನ್ ವಿರುದ್ಧ ಗೆದ್ದರೆ ಪ್ರಣಯ್ ತ್ಸು ವೀ ವಾಂಗ್ ಅವರನ್ನು ನೇರ ಗೇಮ್‌ಗಳಲ್ಲಿ ಮಣಿಸಿದ್ದಾರೆ.
ಆದರೆ ಗೆಲುವನ್ನು ಸಾಧಿಸಲು ಈ ಇಬ್ಬರೂ ಶಟ್ಲರ್‌ಗಳು ಕೂಡ ತೀವ್ರ ಹೋರಾಟ ನಡೆಸಬೇಕಾಯಿತು. ಕಳೆದ ವರ್ಷದ ಫೈನಲಿಸ್ಟ್ ಆಗಿದ್ದ ಲಕ್ಷ್ಯ ಸೇನ್ ಅವರು ಚೌ ವಿರುದ್ಧ 48 ನಿಮಿಷಗಳ ಕಾಲ ಕಾದಾಟ ನಡೆಸಿ21-18, 21-19 ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ವಿಶ್ವ ನಂ.9 ಪ್ರಣಯ್ 49 ನಿಮಿಷಗಳ ಹೋರಾಟದಲ್ಲಿ ವಾಂಗ್ ವಿರುದ್ಧ 21-19, 22-20 ಅಂತರದಿಂದ ಗೆದ್ದುಕೊಂಡಿದ್ದಾರೆ.
ಸೇನ್ ತನ್ನ ಮೊದಲ ಗೇಮ್‌ನಲ್ಲಿ 15-9 ಮುನ್ನಡೆ ಸಾಧಿಸಿದ ನಂತರ ಪ್ರಾಬಲ್ಯ ಮೆರೆದರು, ಆದರೆ ನಂತರ ಚೆನ್ ಉತ್ತಮ ಪ್ರದರ್ಶನ ನೀಡಿ ಕಮ್‌ಬ್ಯಾಖ್ ಮಾಡಿದರು ಈ ಮೂಲಕ 17-17 ಅಂಕಗಳಿಂದ ಸಮಬಲ ಸಾಧಿಸಿದರು. ಆದರೆ ಸೇನ್ ನಿರ್ಣಾಯಕ ಹಂತದಲ್ಲಿ ಮತ್ತೆ ತಿರುಗಿ ಬಿದ್ದರು. ಹೀಗಾಗಿ ಮೊದಲ ಸೆಟ್ ವಶಕ್ಕೆ ಪಡೆದರು. ಎರಡನೇ ಸೆಟ್ ಕೂಡ ಇಷ್ಟೇ ಪೈಪೊಟಿಯ ಕಾದಾಟವಾಗಿ ಮಾರ್ಪಟ್ಟಿತ್ತು. ಆದರೆ ಸೇನ್ ಮತ್ತೆ ತಮ್ಮ ಚಾಣಾಕ್ಷತನ ಮೆರೆದು ನೇರ ಸೆಟ್‌ಗಳ ಅಂತರದಿಂದ ಪಂದ್ಯವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಮತ್ತೊಂದೆಡೆ ಪ್ರಣಯ್ ತಮ್ಮ ಪಂದ್ಯದ ಮೊದಲ ಗೇಮ್‌ನಲ್ಲಿ 11-4 ಮುನ್ನಡೆ ಸಾಧಿಸುವ ಮೂಲಕ ಭರ್ಜರಿ ಮುನ್ನಡೆ ಸಾಧಿಸಿದರು. ಆದರೆ ವಾಂಗ್ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ 19-19ರಲ್ಲಿ ಅಂತರಕ್ಕೆ ತಂದುನಿಲ್ಲಿಸುವ ಮೂಲಕ ಭಾರೀ ಒತ್ತಡವನ್ನುಂಟು ಮಾಡಿದರು. ಆದರೆ ಅಂತಿಮವಾಗಿ ಎರಡು ಪ್ರಬಲ ಸ್ಮ್ಯಾಶ್‌ಗಳ ಮೂಲಕ ಎರಡು ಅಂಕಗಳನ್ನು ಪಡೆದು ಮೊದಲ ಸೆಟ್ ವಶಪಡಿಸಿಕೊಂಡರು. ಎರಡನೇ ಸುತ್ತಿನಲ್ಲಿಯೂ ಇದೇ ರೀತಿಯ ಪೈಪೋಟಿ ಮುಂದುವರಿದಿತ್ತು. ಅಂತಿಮವಾಗಿ ಪ್ರಣಯ್ ಗೆಲುವಿನ ನಗೆ ಬೀರಿದ್ದಾರೆ.
ಮಾರ್ಚ್ 16 ರಂದು ರೌಂಡ್ ಆಫ್ 16 ಪಂದ್ಯ ನಡೆಯಲಿದ್ದು ಈ ಹಂತದಲ್ಲಿ ಪ್ರಣಯ್‌ಗೆ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ಎದುರಾಳಿಯಾಗಿ ಸವಾಲೊಡ್ಡಲಿದ್ದಾರೆ. ಇತ್ತ ಲಕ್ಷ್ಯ ಸೇನ್ ಅದೇ ದಿನ ಡೆನ್ಮಾರ್ಕ್‌ನ ಆಂಡರ್ಸ್ ಆಂಟೊನ್ಸೆನ್ ಅವರನ್ನು ಎದುರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications