For Quick Alerts
ALLOW NOTIFICATIONS  
For Daily Alerts

ಆಲ್‌ ಇಂಗ್ಲೆಂಡ್ ಓಪನ್: ಪ್ರಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಭಾರತದ ಕಿಡಂಬಿ ಶ್ರೀಕಾಂತ್

All England Open 2023: Kidambi Srikanth enter pre-quarters after win against Toma Junior Popov

ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಮೊದಲ ಸವಾಲನ್ನು ಯಶಸ್ವಿಯಾಗಿ ಗೆದ್ದುಕೊಂಡಿದ್ದಾರೆ. ಆರಂಭಿಕ ಹಿನ್ನಡೆಯ ಬಳಿಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಶ್ರೀಕಾಂತ್ ಟೊಮಾ ಜೂನಿಯರ್ ಪೊಪೊವ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪ್ರಿ ಕಾರ್ಟರ್ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಈ ಪಂದ್ಯದಲ್ಲಿ ಶ್ರೀಕಾಂತ್ ಮೊದಲ ಗೇಮ್‌ನಲ್ಲಿ 19-21 ಅಂತರದಿಂದ ಸೋಲು ಕಂಡರು. ಆದರೆ ದಾದ ಬಳಿಕ ಅದ್ಭುತವಾಗಿ ಕ್‌ಬ್ಯಾಕ್ ಮಾಡಿದ ಕಿಡಂಬಿ ಶ್ರೀಕಾಂತ್ 21-14 ಮತ್ತು 21-5 ಅಂಕಗಳ ಅಂತರದಿಂದ ಅಮೋಘವಾಗಿ ಗೆದ್ದು ಪಂದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಅಂತಿಮ 16ರ ಘಟ್ಟಕ್ಕೆ ಅರ್ಹವಾಗಿ ಪ್ರವೇಶ ಪಡೆದುಕೊಂಡಿದ್ದಾರೆ ಭಾರತದ ಸ್ಟಾರ್ ಆಟಗಾರ.

ಈ ಗೆಲುವಿನೊಂದಿಗೆ ಕಿಡಂಬಿ ಶ್ರೀಕಾಂತ್ ಬಿಡಬ್ಲ್ಯುಎಫ್ ಟೂರ್ನಿಯಲ್ಲಿ ಪೊಪೊವ್ ವಿರುದ್ಧ 2-1 ಅಂತರದ ಮುನ್ನಡೆ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಈ ಇಬ್ಬರು 2021ರಲ್ಲಿ ಬಿಡಬ್ಲ್ಯುಎಫ್‌ನ ವರ್ಲ್ಡ್ ಟೂರ್ ಫೈನಲ್‌ನಲ್ಲಿ ಭೇಟಿಯಾಗಿದ್ದರು. ಅಲ್ಲಿ ಶ್ರೀಕಾಂತ್ 21-14, 21-16ರಲ್ಲಿ ಗೆಲುವು ಸಾಧಿಸಿದ್ದರು. ಇನ್ನು ಅದೇ ವರ್ಷದ ಆರಂಭದಲ್ಲಿ ಆರ್ಲಿಯನ್ಸ್ ಮಾಸ್ಟರ್ಸ್‌ನಲ್ಲಿ ಪೊಪೊವ್ ಹಾಗೂ ಶ್ರೀಕಾಂತ್ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು ಆ ಸಂದರ್ಭದಲ್ಲಿ ಪೊಪೊವ್ ಗೆಲುವು ಕಂಡಿದ್ದರು.

ಇನ್ನು ಇದಕ್ಕೂ ಮುನ್ನ ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಆಲ್ ಇಂಗ್ಲೆಂಡ್ ಓಪನ್‌ನ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಚೀನಾದ ಜಾಂಗ್ ಯಿ ಮಾನ್ ವಿರುದ್ಧ ನಡೆದ ಪಂದ್ಯದಲ್ಲಿ ಸಿಂಧು 39 ನಿಮಿಷಗಳ ಕಾಲ ಹೋರಾಟದಲ್ಲಿ ನೇರ ಸೆಟ್‌ಗಳ ಅಂತರದ ಸೋಲು ಕಂಡಿದ್ದಾರೆ. ಈ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 17-21, 11-21 ಅಂತರದಿಂದ ಜಾಂಗ್ ಯಿ ಮಾನ್‌ಗೆ ಶರಣಾದರು ಸಿಂಧು.

ಮತ್ತೊಂದೆಡೆ ಭಾರತದ ಮತ್ತಿಬ್ಬರು ಸ್ಟಾರ್ ಆಟಗಾರರಾದ ಲಕ್ಷ್ಯ ಸೇನ್ ಹಾಗೂ ಹೆಚ್‌ಎಸ್ ಪ್ರಣಯ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಮೊದಲ ಸುತ್ತಿನಲ್ಲಿ ನೇರ ಸೆಟ್‌ಗಳ ಗೆಲುವು ಸಾಧಿಸಿದ ಈ ಇಬ್ಬರು ಆಟಗಾರರು ಎರಡನೇ ಸುತ್ತಿಗೆ ಹೆಜ್ಜೆಯಿಟ್ಟಿದ್ದಾರೆ.

ಲಕ್ಷ್ಯ ಸೇನ್ ತನ್ನ ಮೊದಲ ಗೇಮ್‌ನಲ್ಲಿ 15-9 ಮುನ್ನಡೆ ಸಾಧಿಸಿದ ಪ್ರಾಬಲ್ಯ ಮೆರೆದರು. ಆದರೆ ನಂತರ ಚೆನ್ ಉತ್ತಮ ಪ್ರದರ್ಶನ ನೀಡಿ ಕಮ್‌ಬ್ಯಾಕ್ ಮಾಡಿದರು. ಈ ಮೂಲಕ 17-17 ಅಂಕಗಳಿಂದ ಸಮಬಲ ಸಾಧಿಸಿದರು. ಆದರೆ ಸೇನ್ ನಿರ್ಣಾಯಕ ಹಂತದಲ್ಲಿ ಮತ್ತೆ ತಿರುಗಿ ಬಿದ್ದು ಮೊದಲ ಸೆಟ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಎರಡನೇ ಸೆಟ್ ಕೂಡ ಇಷ್ಟೇ ಪೈಪೊಟಿಯ ಕಾದಾಟವಾಗಿ ಮಾರ್ಪಟ್ಟಿತ್ತು. ಆದರೆ ಸೇನ್ ಮತ್ತೆ ತಮ್ಮ ಚಾಣಾಕ್ಷತನ ಮೆರೆದು ನೇರ ಸೆಟ್‌ಗಳ ಅಂತರದಿಂದ ಪಂದ್ಯವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಮತ್ತೊಂದೆಡೆ ಪ್ರಣಯ್ ತಮ್ಮ ಪಂದ್ಯದ ಮೊದಲ ಗೇಮ್‌ನಲ್ಲಿ 11-4 ಮುನ್ನಡೆ ಸಾಧಿಸುವ ಮೂಲಕ ಭರ್ಜರಿ ಮುನ್ನಡೆ ಸಾಧಿಸಿದರು. ಆದರೆ ವಾಂಗ್ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ 19-19ರಲ್ಲಿ ಅಂತರಕ್ಕೆ ತಂದುನಿಲ್ಲಿಸುವ ಮೂಲಕ ಭಾರೀ ಒತ್ತಡವನ್ನುಂಟು ಮಾಡಿದರು. ಆದರೆ ಅಂತಿಮವಾಗಿ ಎರಡು ಪ್ರಬಲ ಸ್ಮ್ಯಾಶ್‌ಗಳ ಮೂಲಕ ಎರಡು ಅಂಕಗಳನ್ನು ಪಡೆದು ಮೊದಲ ಸೆಟ್ ವಶಪಡಿಸಿಕೊಂಡರು. ಎರಡನೇ ಸುತ್ತಿನಲ್ಲಿಯೂ ಇದೇ ರೀತಿಯ ಪೈಪೋಟಿ ಮುಂದುವರಿದಿತ್ತು. ಅಂತಿಮವಾಗಿ ಪ್ರಣಯ್ ಗೆಲುವಿನ ನಗೆ ಬೀರಿದ್ದಾರೆ.

Story first published: Thursday, March 16, 2023, 9:36 [IST]
Other articles published on Mar 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+