All England Open: ಮಾಜಿ ನಂಬರ್ 1 ಜೋಡಿಯನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಹೆಜ್ಜೆಯಿಟ್ಟ ಗಾಯತ್ರಿ- ತ್ರೀಸಾ

ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಯುವ ಡಬಲ್ಸ್ ಜೋಡಿ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ಭರ್ಜರಿ ಪ್ರದರ್ಶನ ನೀಡಿದ್ದು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಸತತ ಎರಡನೇ ವರ್ಷ ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಡಬಲ್ಸ್ ಕ್ವಾರ್ಟರ್-ಫೈನಲ್ ಪ್ರವೇಶಿಸಿದ್ದಾರೆ.
20ರ ಹರೆಯದ ಗಾಯತ್ರಿ ಮತ್ತು 19 ವರ್ಷದ ಟ್ರೀಸಾ ಅವರು ಗುರುವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಮಾಜಿ ವಿಶ್ವ ನಂ. 1 ಮತ್ತು ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಗಳಾದ ಯೂಕಿ ಫುಕುಶಿಮಾ ಮತ್ತು ಸಯಾಕಾ ಹಿರೋಟಾ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿ ಆಘಾತ ನೀಡಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ಅವರು ಜಪಾನ್‌ನ ಫುಕುಶಿಮಾ ಮತ್ತು ಹಿರೋಟಾ ಜೋಡಿಯನ್ನು ಐವತ್ತು ನಿಮಿಷಗಳ ಕಾಲ ನಡೆದ ಸೆಣೆಸಾಟದಲ್ಲಿ ಸೋಲಿಸಿದ್ದಾರೆ. 21-14, 24-22 ಅಂತರದ ಗೆಲುವು ಸಾಧಿಸಿ ಭಾರತೀಯ ಆಟಗಾರ್ತಿಯರು ಮಿಂಚಿದ್ದಾರೆ.
ಭಾರತದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಮೊದಲ ಸವಾಲನ್ನು ಯಶಸ್ವಿಯಾಗಿ ಗೆದ್ದುಕೊಂಡಿದ್ದಾರೆ. ಆರಂಭಿಕ ಹಿನ್ನಡೆಯ ಬಳಿಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಶ್ರೀಕಾಂತ್ ಟೊಮಾ ಜೂನಿಯರ್ ಪೊಪೊವ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪ್ರಿ ಕಾರ್ಟರ್ ಸುತ್ತಿಗೆ ಪ್ರವೇಶ ಪಡೆದಿದ್ದಾರೆ
ಇನ್ನು ಇದಕ್ಕೂ ಮುನ್ನ ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಆಲ್ ಇಂಗ್ಲೆಂಡ್ ಓಪನ್‌ನ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಚೀನಾದ ಜಾಂಗ್ ಯಿ ಮಾನ್ ವಿರುದ್ಧ ನಡೆದ ಪಂದ್ಯದಲ್ಲಿ ಸಿಂಧು 39 ನಿಮಿಷಗಳ ಕಾಲ ಹೋರಾಟದಲ್ಲಿ ನೇರ ಸೆಟ್‌ಗಳ ಅಂತರದ ಸೋಲು ಕಂಡಿದ್ದಾರೆ. ಈ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 17-21, 11-21 ಅಂತರದಿಂದ ಜಾಂಗ್ ಯಿ ಮಾನ್‌ಗೆ ಶರಣಾದರು ಸಿಂಧು.
ಮತ್ತೊಂದೆಡೆ ಭಾರತದ ಮತ್ತಿಬ್ಬರು ಸ್ಟಾರ್ ಆಟಗಾರರಾದ ಲಕ್ಷ್ಯ ಸೇನ್ ಹಾಗೂ ಹೆಚ್‌ಎಸ್ ಪ್ರಣಯ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಮೊದಲ ಸುತ್ತಿನಲ್ಲಿ ನೇರ ಸೆಟ್‌ಗಳ ಗೆಲುವು ಸಾಧಿಸಿದ ಈ ಇಬ್ಬರು ಆಟಗಾರರು ಎರಡನೇ ಸುತ್ತಿಗೆ ಹೆಜ್ಜೆಯಿಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications