ಆಲ್ ಇಂಗ್ಲೆಂಡ್ ಓಪನ್ 2021: ಪಿವಿ ಸಿಂಧು ಸೆಮಿಫೈನಲ್‌ಗೆ ಲಗ್ಗೆ

ಬರ್ಮಿಂಗ್‌ಹ್ಯಾಮ್: ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ಬಲಿಷ್ಠೆ ಅಕಾನೆ ಯಮಗುಚಿ ಅವರನ್ನು ಮಣಿಸಿರುವ ಸಿಂಧು ಪ್ರಶಸ್ತಿಯಾಸೆ ಮೂಡಿಸಿದ್ದಾರೆ.
ಶುಕ್ರವಾರ (ಮಾರ್ಚ್ 19) ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಅವರು ಅಕಾನೆ ಯಮಗುಚಿ ಅವರನ್ನು 16-21, 21-16, 21-19ರ ಅಂತರದಿಂದ ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡರು.
ಆರಂಭಿಕ ಸೆಟ್‌ನಲ್ಲಿ ಸಿಂಧು ಹಿನ್ನಡೆ ಅನುಭವಿಸಿದರಾದರೂ ಮುಂದಿನ ಸೆಟ್‌ಗಳಲ್ಲಿ ಎದುರಾಳಿಗೆ ತಾನು ವಿಶ್ವ ಚಾಂಪಿಯನ್ ಆಟಗಾರ್ತಿ ಅನ್ನೋದನ್ನು ತಿಳಿಸಿಕೊಟ್ಟರು. ಅಕಾನೆ ಕೂಡ ಅಷ್ಟೇ ಭರ್ಜರಿ ಪೈಪೋಟಿ ನೀಡಿದ್ದು ಕಂಡುಬಂತು. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಇದು ಎರಡನೇ ಬಾರಿಗೆ ಸಿಂಧು ಸೆಮಿಫೈನಲ್‌ಗೆ ಪ್ರವೇಶಿಸುತ್ತಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಅವರು ಥೈಲ್ಯಾಂಡ್‌ನ ಪೋರ್ನ್‌ಪಾವಿ ಚೋಚುವಾಂಗ್ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ನ್‌ಪಾವಿ ಅವರು ಯುಎಸ್‌ಎಯ ಬೀವೆನ್ ಜಾಂಗ್ ಅವರನ್ನು 21-16, 21-19ರ ಅಂತರದಿಂದ ಸೋಲಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications