For Quick Alerts
ALLOW NOTIFICATIONS  
For Daily Alerts

ಆಲ್‌ ಇಂಗ್ಲೆಂಡ್ ಓಪನ್: ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ಪಿವಿ ಸಿಂಧು

All England Open: PV Sindhu loses to Zhang Yi Man in the first round of the 2023

ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಆಲ್ ಇಂಗ್ಲೆಂಡ್ ಓಪನ್‌ನ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದಾರೆ. ಚೀನಾದ ಜಾಂಗ್ ಯಿ ಮಾನ್ ವಿರುದ್ಧ ನಡೆದ ಪಂದ್ಯದಲ್ಲಿ ಸಿಂಧು ಸೋತು ನಿರ್ಗಮಿಸಿದ್ದಾರೆ. 39 ನಿಮಿಷಗಳ ಕಾಲ ನಡೆದ ಈ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 17-21, 11-21 ನೇರ ಸೆಟ್‌ಗಳ ಅಂತರದಿಂದ ಜಾಂಗ್ ಯಿ ಮಾನ್‌ಗೆ ಶರಣಾಗಿದ್ದಾರೆ.

ಮತ್ತೊಂದೆಡೆ ಭಾರತದ ಮತ್ತಿಬ್ಬರು ಸ್ಟಾರ್ ಆಟಗಾರರಾದ ಲಕ್ಷ್ಯ ಸೇನ್ ಹಾಗೂ ಹೆಚ್‌ಎಸ್ ಪ್ರಣಯ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಮೊದಲ ಸುತ್ತಿನಲ್ಲಿ ನೇರ ಸೆಟ್‌ಗಳ ಗೆಲುವು ಸಾಧಿಸಿದ ಈ ಇಬ್ಬರು ಆಟಗಾರರು ಎರಡನೇ ಸುತ್ತಿಗೆ ಹೆಜ್ಜೆಯಿಟ್ಟಿದ್ದಾರೆ.

ಲಕ್ಷ್ಯ ಸೇನ್ ತನ್ನ ಮೊದಲ ಗೇಮ್‌ನಲ್ಲಿ 15-9 ಮುನ್ನಡೆ ಸಾಧಿಸಿದ ಪ್ರಾಬಲ್ಯ ಮೆರೆದರು. ಆದರೆ ನಂತರ ಚೆನ್ ಉತ್ತಮ ಪ್ರದರ್ಶನ ನೀಡಿ ಕಮ್‌ಬ್ಯಾಕ್ ಮಾಡಿದರು. ಈ ಮೂಲಕ 17-17 ಅಂಕಗಳಿಂದ ಸಮಬಲ ಸಾಧಿಸಿದರು. ಆದರೆ ಸೇನ್ ನಿರ್ಣಾಯಕ ಹಂತದಲ್ಲಿ ಮತ್ತೆ ತಿರುಗಿ ಬಿದ್ದು ಮೊದಲ ಸೆಟ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಎರಡನೇ ಸೆಟ್ ಕೂಡ ಇಷ್ಟೇ ಪೈಪೊಟಿಯ ಕಾದಾಟವಾಗಿ ಮಾರ್ಪಟ್ಟಿತ್ತು. ಆದರೆ ಸೇನ್ ಮತ್ತೆ ತಮ್ಮ ಚಾಣಾಕ್ಷತನ ಮೆರೆದು ನೇರ ಸೆಟ್‌ಗಳ ಅಂತರದಿಂದ ಪಂದ್ಯವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.

ಮತ್ತೊಂದೆಡೆ ಪ್ರಣಯ್ ತಮ್ಮ ಪಂದ್ಯದ ಮೊದಲ ಗೇಮ್‌ನಲ್ಲಿ 11-4 ಮುನ್ನಡೆ ಸಾಧಿಸುವ ಮೂಲಕ ಭರ್ಜರಿ ಮುನ್ನಡೆ ಸಾಧಿಸಿದರು. ಆದರೆ ವಾಂಗ್ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ 19-19ರಲ್ಲಿ ಅಂತರಕ್ಕೆ ತಂದುನಿಲ್ಲಿಸುವ ಮೂಲಕ ಭಾರೀ ಒತ್ತಡವನ್ನುಂಟು ಮಾಡಿದರು. ಆದರೆ ಅಂತಿಮವಾಗಿ ಎರಡು ಪ್ರಬಲ ಸ್ಮ್ಯಾಶ್‌ಗಳ ಮೂಲಕ ಎರಡು ಅಂಕಗಳನ್ನು ಪಡೆದು ಮೊದಲ ಸೆಟ್ ವಶಪಡಿಸಿಕೊಂಡರು. ಎರಡನೇ ಸುತ್ತಿನಲ್ಲಿಯೂ ಇದೇ ರೀತಿಯ ಪೈಪೋಟಿ ಮುಂದುವರಿದಿತ್ತು. ಅಂತಿಮವಾಗಿ ಪ್ರಣಯ್ ಗೆಲುವಿನ ನಗೆ ಬೀರಿದ್ದಾರೆ.

ಮಾರ್ಚ್ 16 ರಂದು ರೌಂಡ್ ಆಫ್ 16 ಪಂದ್ಯ ನಡೆಯಲಿದ್ದು ಈ ಹಂತದಲ್ಲಿ ಪ್ರಣಯ್‌ಗೆ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಂಗ್ ಎದುರಾಳಿಯಾಗಿ ಸವಾಲೊಡ್ಡಲಿದ್ದಾರೆ. ಇತ್ತ ಲಕ್ಷ್ಯ ಸೇನ್‌ ಅದೇ ದಿನ ಡೆನ್ಮಾರ್ಕ್‌ನ ಆಂಡರ್ಸ್ ಆಂಟೊನ್ಸೆನ್ ಅವರನ್ನು ಎದುರಿಸಲಿದ್ದಾರೆ.

Story first published: Thursday, March 16, 2023, 5:30 [IST]
Other articles published on Mar 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+