All England Open: ಪಿವಿ ಸಿಂಧು, ಸಾತ್ವಿಕ್-ಚಿರಾಗ್‌ ಮುನ್ನಡೆ

ನವದೆಹಲಿ: ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್‌ಗಳಾದ ಪಿವಿ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯ್‌ರಾಜ್‌ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಆರಂಭಿಕ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಭಾರತ-ಇಂಗ್ಲೆಂಡ್: ವಿಲಿಯಮ್ಸನ್ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ

ಆದರೆ ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ ಕಿದಂಬಿ ಶ್ರೀಕಾಂತ್, ಪುರುಷರ ಸಿಂಗಲ್ಸ್ ವಿಭಾಗದ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ವಿಶ್ವ ಶ್ರೇಯಾಂಕ 57ರ ಐರ್ಲೆಂಡ್ ಆಟಗಾರ ನಾಟ್ ನ್ಗುಯೇನ್ ವಿರುದ್ಧ 11-21, 21-15, 12-21 ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ಪುರುಷರ ವಿಭಾಗದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಭಾರತದ ಪಾರುಪಳ್ಳಿ ಕಶ್ಯಪ್ ಕೂಡ ವಿಶ್ವ ನಂ.1 ಜಪಾನ್ ಆಟಗಾರ ಕೆಂಟೊ ಮೊಮೊಟ ವಿರುದ್ಧ 13-21, 20-22ರ ಅಂತರದಲ್ಲಿ ಪರಾಭವಗೊಂಡಿದ್ದಾರೆ.

ವೆಸ್ಟ್ ಇಂಡೀಸ್ ಲೆಜೆಂಡ್ಸ್ ಮಣಿಸಿದ ಇಂಡಿಯಾ ಲೆಜೆಂಡ್ಸ್‌ ಫೈನಲ್‌ಗೆ ಎಂಟ್ರಿ!

ನಾಲ್ಕನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ಆಡುವ 11 ಹೀಗಿರಲಿದೆ | Oneindia Kannada

ಪಿವಿ ಸಿಂಧು ಅವರು ಮಲೇಷ್ಯಾದ ಸೋನಿಯಾ ಚೀ ವಿರುದ್ಧ 21-11, 21-17ರ ಮುನ್ನಡೆ ಸಾಧಿಸಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಸಿಂಧು ಡೆನ್ಮಾರ್ಕ್‌ನ ಲೈನ್ ಕ್ರಿಸ್ಟೋಫರ್ಸನ್ ಅವರ ಸವಾಲು ಸ್ವೀಕರಿಸಲಿದ್ದಾರೆ. ಆರಂಭಿಕ ಸುತ್ತಿನಲ್ಲಿ ಗೆದ್ದಿರೋದು ಬಲು ಮುಖ್ಯ ಎಂದು ಸಿಂಧು ಹೇಳಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, March 17, 2021, 23:50 [IST]
Other articles published on Mar 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X