ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್: ಸಿಂಧು ಚಿನ್ನದ ಕನಸು ಭಗ್ನ

ಜಕಾರ್ತಾ, ಆಗಸ್ಟ್ 28: ಭಾರತಕ್ಕೆ ಚಿನ್ನದ ಪದಕದ ಭರವಸೆ ಮೂಡಿಸಿದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರ ಚಿನ್ನದ ಕನಸು ಭಗ್ನಗೊಂಡಿದೆ.
ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಪಿ.ವಿ. ಸಿಂಧು ಚೈನೀಸ್ ತೈಪೆಯ ತಾಯ್ ತ್ಸು ಯಿಂಗ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಸೆಮಿಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸಿಂಧು, ವಿಶ್ವದ ನಂಬರ್ ಒನ್ ಶ್ರೇಯಾಂಕಿತೆ ತ್ಸು ಯಿಂಗ್ ಅವರಿಗೆ ಯಾವುದೇ ಪೈಪೋಟಿ ನೀಡಲು ಸಾಧ್ಯವಾಗದೆ ಸಂಪೂರ್ಣ ಶರಣಾದರು.
13-21, 16-21 ನೇರ ಸೆಟ್‌ಗಳಿಂದ ಸಿಂಧು ಅವರನ್ನು ಯಿಂಗ್ ಮಣಿಸಿದರು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಯಿಂಗ್ ಅವರ ಚುರುಕಿನ ಆಟವನ್ನು ಎದುರಿಸುವಲ್ಲಿ ಸಿಂಧು ವಿಫಲರಾದರು. ಮೊದಲ ಸೆಟ್‌ನಲ್ಲಿ ಯಿಂಗ್ ಸುಲಭವಾಗಿ ಗೆದ್ದುಕೊಂಡರು.
ಎರಡನೆಯ ಸೆಟ್‌ನ ಆರಂಭದಲ್ಲಿ ಮರುಹೋರಾಟದ ಭರವಸೆ ನೀಡಿದರೂ, ಬಳಲಿದಂತೆ ಕಂಡ ಸಿಂಧು, ಸೋಲೊಪ್ಪಿಕೊಂಡರು.
ಸಿಂಧು ಸೆಮಿಫೈನಲ್ಸ್‌ನಲ್ಲಿ ವಿಶ್ವದ ನಂಬರ್ 2 ಶ್ರೇಯಾಂಕಿತೆ ಜಪಾನ್‌ನ ಅನೆಕಾ ಯಮಗುಚಿ ವಿರುದ್ಧ ಗೆಲುವು ಸಾಧಿಸಿದ ಫೈನಲ್‌ಗೆ ಪ್ರವೇಶಿಸಿದ್ದರು.
ತ್ಸು ಯಿಂಗ್ ಸೆಮಿಫೈನಲ್ಸ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಅವರನ್ನು ಕೂಡ ನೇರ ಸೆಟ್‌ಗಳಲ್ಲಿ ಸುಲಭವಾಗಿ ಸೋಲಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications