Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games 2023: ಭಾರತಕ್ಕೆ ದೊಡ್ಡ ಹಿನ್ನಡೆ; 'ಚಿನ್ನ'ದಂತ ಫೈನಲ್ ಪಂದ್ಯವನ್ನು ತಪ್ಪಿಸಿಕೊಂಡ ಎಚ್ಎಸ್ ಪ್ರಣಯ್!

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪದಕ ಬೇಟೆ ಮುಂದುವರೆಸಿದ್ದಾರೆ. ಆದಾಗ್ಯೂ, ಕೆಲವೊಂದು ನಿರೀಕ್ಷಿತ ಸ್ಪರ್ಧಿಗಳು ಪದಕಗಳಿಲ್ಲದೆ ವಾಪಸ್ಸಾಗಿದ್ದಾರೆ.

ಇದೇ ವೇಳೆ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕಕ್ಕಾಗಿ ತಮ್ಮ ಐತಿಹಾಸಿಕ ಫೈನಲ್ ಪಂದ್ಯಕ್ಕೆ ಮುನ್ನ ದೊಡ್ಡ ಹಿನ್ನಡೆ ಅನುಭವಿಸಿದೆ.

Asian Games 2023: Big Setback For India; HS Prannoy Missed The Badminton Final Match

ಏಕೆಂದರೆ ಇನ್-ಫಾರ್ಮ್ ಶಟ್ಲರ್ ಎಚ್‌ಎಸ್ ಪ್ರಣಯ್ ಅವರು ಭಾನುವಾರ ಗಾಯಗೊಂಡ ಬಳಿಕ ಚಿನ್ನದ ಪದಕಕ್ಕಾಗಿ ನಡೆಯುವ ಫೈನಲ್‌ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಒಲಿಂಪಿಕ್ಸ್.ಕಾಮ್ ಪ್ರಕಾರ, ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್ ಮಂಜುನಾಥನ್ ಅವರು ಎಚ್‌ಎಸ್ ಪ್ರಣಯ್ ಬದಲಾಗಿ ಫೈನಲ್ ಪಂದ್ಯ ಆಡಲಿದ್ದಾರೆ. ಭಾರತ ಮತ್ತು ಚೀನಾ ಪುರುಷರ ತಂಡದ ಬ್ಯಾಡ್ಮಿಂಟನ್ ಚಿನ್ನದ ಪದಕದ ಪಂದ್ಯವು ಭಾನುವಾರ ಮಧ್ಯಾಹ್ನ 2:30ಕ್ಕೆ ನಡೆಯಲಿದೆ.

ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಶನಿವಾರ ನಡೆದ ರೋಚಕ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಟೀಮ್ ಈವೆಂಟ್‌ಗಳ ಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

ಈ ಏಷ್ಯನ್ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಪದಕ ಖಚಿತವಾಗಿದ್ದು, ಇದೀಗ ಚೀನಾವನ್ನು ಎದುರಿಸುವ ಮೂಲಕ ಚಿನ್ನಕ್ಕೆ ಗುರಿ ಇಟ್ಟಿದೆ.

ಶನಿವಾರ ಎಚ್ಎಸ್ ಪ್ರಣಯ್ ಅವರು ದಕ್ಷಿಣ ಕೊರಿಯಾದ ಹ್ಯೊಕ್ಜಿನ್ ಜಿಯೋನ್ ವಿರುದ್ಧ ಉತ್ತಮ ಆಟವಾಡಿದರು. ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ತಮ್ಮ ವಿಧಾನದಲ್ಲಿ ಸಾಕಷ್ಟು ಅತ್ಯುತ್ತಮವಾಗಿದ್ದರು ಮತ್ತು ಅವರು ಹಿಯೋಕ್‌ಜಿನ್ ಜಿಯೋನ್ ವಿರುದ್ಧ 18-21, 21-16, 21-19 ಅಂತರದಿಂದ ಉತ್ತಮ ಪುನರಾಗಮನ ಮಾಡಿದರು.

ಭಾರತೀಯ ಬ್ಯಾಡ್ಮಿಂಟನ್ ತಂಡದ ಪಂದ್ಯಗಳು:
1) ಲಕ್ಷ್ಯ ಸೇನ್ vs ಶಿ ಯು ಕಿ
2) ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ vs ಲಿಯಾಂಗ್ ವೈಕೆಂಗ್-ವಾಂಗ್ ಚಾಂಗ್
3) ಕಿದಂಬಿ ಶ್ರೀಕಾಂತ್ vs ಲಿ ಶಿಫೆಂಗ್
4) ಧ್ರುವ ಕಪಿಲಾ-ಸಾಯಿ ಪ್ರತೀಕ್ vs ಲಿಯು ಯುಚೆನ್-ಔ ಕ್ಸುವಾನಿ
5) ಮಿಥುನ್ ಮಂಜುನಾಥನ್ vs ವೆಂಗ್ ಹಾಂಗ್ಯಾಂಗ್

Story first published: Sunday, October 1, 2023, 14:52 [IST]
Other articles published on Oct 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+