Asian Games 2023: ಬ್ಯಾಡ್ಮಿಂಟನ್ ಡಬಲ್ಸ್ ಫೈನಲ್ ತಲುಪಿದ ಸಾತ್ವಿಕ್-ಚಿರಾಗ್ ಜೋಡಿ; 41 ವರ್ಷಗಳ ನಂತರ ಪದಕ
ಶುಕ್ರವಾರ, ಅಕ್ಟೋಬರ್ 6ರಂದು ನಡೆದ 2023ರ ಏಷ್ಯನ್ ಗೇಮ್ಸ್‌ನ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಸೆಮಿಫೈನಲ್‌ನಲ್ಲಿ ಮಲೇಷ್ಯಾ ಜೋಡಿ ವಿರುದ್ಧ ಗೆದ್ದುಬೀಗಿದ ಭಾರತದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಫೈನಲ್ ತಲುಪಿದ ಐತಿಹಾಸಿಕ ಸಾಧನೆ ಮಾಡಿದ್ದಾರೆ.
2023ರ ಏಷ್ಯನ್ ಗೇಮ್ಸ್‌ನ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಸ್ಟಾರ್ ಜೋಡಿಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರನ್ನು ಸೋಲಿಸುವ ಮೂಲಕ ಭಾರತದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
45 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿಯು ವಿಶ್ವ ಚಾಂಪಿಯನ್ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರನ್ನು 21-17, 21-12 ಅಂತರದ ನೇರ ಸೆಟ್‌ಗಳಿಂದ ಸೋಲಿಸಿ ಮಲೇಷ್ಯಾ ಜೋಡಿಯ ವಿರುದ್ಧ ಎರಡನೇ ಗೆಲುವು ದಾಖಲಿಸಿದರು.

ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಭಾರತೀಯ ಜೋಡಿಯು ದಕ್ಷಿಣ ಕೊರಿಯಾದ ಕಿಮ್ ವೊನ್-ಹೊ ಮತ್ತು ಚೋಯ್ ಸೊಲ್ಗ್ಯು ಅವರನ್ನು ಎದುರಿಸಲಿದ್ದಾರೆ.
ಇದರೊಂದಿಗೆ ವಿಶ್ವದ ಮೂರನೇ ಶ್ರೇಯಾಂಕದ ಜೋಡಿಯು ಏಷ್ಯನ್ ಗೇಮ್ಸ್‌ನಲ್ಲಿ ಭಾರತದ 41 ವರ್ಷಗಳ ಪುರುಷರ ಡಬಲ್ಸ್ ಪದಕದ ಬರವನ್ನು ಕೊನೆಗೊಳಿಸಿದೆ.
ಇನ್ನು 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪಡೆ 100-ಪದಕಗಳ ಗಡಿಯನ್ನು ತಲುಪುವುದು ಖಚಿತವಾಗಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 100 ಪದಕಗಳ ಗಡಿ ದಾಟುತ್ತಿರುವುದು ಇದೇ ಮೊದಲ ನಿದರ್ಶನವಾಗಿದೆ. ಈಗಾಗಲೇ 95 ಪದಕಗಳನ್ನು ಭಾರತ ಗೆದ್ದಿದೆ ಮತ್ತು ಆರು ಇತರ ಪದಕಗಳನ್ನು ಈಗಾಗಲೇ ಖಚಿತಪಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications