ಏಷ್ಯನ್ ಗೇಮ್ಸ್ 2018: ಮಹಿಳಾ ಬ್ಯಾಡ್ಮಿಂಟನ್ ತಂಡಕ್ಕೆ ಸೋಲು

ಜಕಾರ್ತಾ, ಆಗಸ್ಟ್ 20: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರ ಬ್ಯಾಡ್ಮಿಂಟನ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಭಾರತ ತಂಡ ಸೋಲನುಭವಿಸುವುದರೊಂದಿಗೆ ಹೊರ ಬಿದ್ದಿದೆ. ಕಳೆದ ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ಮಹಿಳಾ ತಂಡ ಐತಿಹಾಸಿಕ ಕಂಚಿನ ಪದಕ ಜಯಿಸಿತ್ತು.
ಸೋಮವಾರ ನಡೆದ ಮಹಿಳಾ ತಂಡ ಸ್ಪರ್ಧೆ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಸೈನಾ ನೆಹ್ವಾಲ್ ಅವರು ಜಪಾನ್ ಆಟಗಾರ್ತಿ ನೋಜೊಮಿ ಒಕುಹರಾ ಅವರೆದುರು ಸೋತಿರು. ತಂಡದ ಸೋಲಿಗೆ ಇದು ಕಾರಣವಾಯ್ತು.
ಇದಕ್ಕೂ ಮುನ್ನ ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ನಂ. 1 ಆಟಗಾರ್ತಿ ಜಪಾನ್ ನ ಅಕಾನೆ ಯಮಗುಚಿ ಅವರೆದುರು ಭರ್ಜರಿ ಕಾದಾಟದಲ್ಲಿ ಗೆದ್ದಿದ್ದರು. ಸಿಂಧು ಅವರು ಇತ್ತೀಚೆಗೆ ಮುಕ್ತಾಯಗೊಂಡ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲೂ ಯಮಗುಚಿ ಅವರಿಗೆ ಸೋಲುಣಿಸಿದ್ದರು.
ಡಬಲ್ಸ್ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಎನ್ ಸಿಕ್ಕಿ ರೆಡ್ಡಿ ಮತ್ತು ಆರತಿ ಸುನಿಲ್ ಜೋಡಿಯೂ ಜಪಾನ್ ನ ಯೂಕಿ ಫುಕುಶಿಮಾ ಮತ್ತು ಸಯಕ ಹಿರೋಟಾ ಎದುರು 15-21, 6-21ರಿಂದ ಸೋಲನುಭವಿಸಿದ್ದೂ ತಂಡದ ಹಿನ್ನಡೆಗೆ ಕಾರಣವಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications