Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವ ಚಾಂಪಿಯನ್ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಗೆದ್ದ ಶ್ರೀಕಾಂತ್

ಮೆಲ್ಬೊರ್ನ್, ಜೂನ್ 25: ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ವಿಶ್ವ ಚಾಂಪಿಯನ್ ಚೀನಾದ ಚೆಂಗ್ ಲಾಂಗ್ ರನ್ನು ಸೋಲಿಸಿದ ಭಾರತದ ಕಿಡಂಬಿ ಶ್ರೀಕಾಂತ್ ಅವರು ಆಸ್ಟ್ರೇಲಿಯನ್ ಓಪನ್ ಬಾಡ್ಮಿಂಟನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಚೆಂಗ್ ಲಾಂಗ್ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಬಾಡ್ಮಿಂಟನ್ ಪ್ರಶಸ್ತಿ ಗೆದ್ದ ಕಿಡಂಬಿ ಶ್ರೀಕಾಂತ್ ಅವರು ಸತತ ಎರಡನೇ ಸೂಪರ್ ಸರಣಿ ಬಾಡ್ಮಿಂಟನ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

Australia Open: Kidambi Srikanth beats world champion Chen Long to win title


ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರಿಸ್ ಬಾಡ್ಮಿಂಟನ್ ಪ್ರಶಸ್ತಿಗಾಗಿ ಭಾನುವಾರ(ಜೂನ್ 25) ದಂದು ನಡೆದ ಫೈನಲ್ ಪಂದ್ಯದಲ್ಲಿ ಕಿಡಂಬಿ ಅವರು 22-20, 21-16 ರ ಸೆಟ್ ಗಳಲ್ಲಿ ಪ್ರಶಸ್ತಿ ಗೆದ್ದರು.

ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರಿಸ್ ಫೈನಲ್ ಗೇರುವ ಮೂಲಕ ಸತತ ಮೂರನೇ ಸೂಪರ್ ಸೀರಿಸ್ ಫೈನಲ್ ತಲುಪಿದ ಸಾಧನೆ ಮಾಡಿದ್ದರು. ಈ ಪೈಕಿ ಸಿಂಗಪುರ ಸೂಪರ್ ಸರಣಿ ಫೈನಲ್ ನಲ್ಲಿ ಸೋಲು ಕಂಡರೆ, ಇಂಡೋನೇಷಿಯಾ ಹಾಗೂ ಆಸ್ಟ್ರೇಲಿಯನ್ ಓಪನ್ ನಲ್ಲಿ ಗೆಲುವು ದಾಖಲಿಸಿದ್ದಾರೆ.

ಫೈನಲ್ ಪಂದ್ಯದಲ್ಲಿ ಆರಂಭದಿಂದಲೂ ಪ್ರಾಬಲ್ಯ ಮೆರೆದ ಕಿಡಂಬಿ ಅವರು ಬಲಿಷ್ಠ ಆಟಗಾರನ ವಿರುದ್ಧ ಸಮರ್ಥವಾಗಿ ಆಡಿ ಗೆಲುವು ದಾಖಲಿಸಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+