ಆಸ್ಟ್ರೇಲಿಯಾ ಓಪನ್: ಮಂಜುನಾಥ್‌ಗೆ ಅಚ್ಚರಿ ಗೆಲುವು: ಸಿಂಧು, ಶ್ರೀಕಾಂತ್, ಪ್ರಣಯ್ 2ನೇ ಸುತ್ತಿಗೆ ಲಗ್ಗೆ
ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಆರಂಭವಾಗಿದ್ದು ಮೊದಲ ಸುತ್ತಿನಲ್ಲಿ ಭಾರತ ಮಿಶ್ರ ಅನುಭವ ಪಡೆದುಕೊಂಡಿದೆ. ಕುತೂಹಲಕಾರಿ ಸಂಗತಿಯೆಂದರೆ ಭಾರತದ ಶಟ್ಲರ್ ೫೦ನೇ ಶ್ರೇಯಾಂಕದ ಮಿಥುನ್ ಮಂಜುನಾಥ್ ವಿಶ್ವದ 7ನೇ ಶ್ರೇಯಾಂಕದ ಸಿಂಗಾಪುರದ ಕೀನ್ ಯೂ ಲೋಹ್ ಅವರನ್ನು ಆರಂಭಿಕ ಸುತ್ತಿನಲ್ಲಿ ಮಣಿಸಿದ್ದಾರೆ. ಇನ್ನು ಪಿವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ನೇರ ಗೇಮ್‌ಗಳಿಂದ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
41 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 50ನೇ ಶ್ರೇಯಾಂಕದ ಮಂಜುನಾಥ್ 21-19 21-19 ಅಂಕಗಳ ನೇರ ಸೆಟ್‌ಗಳಿಂದ ಲೋಹ್ ಅವರನ್ನು ಮಣಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಮಂಜುನಾಥ್ ಲಿ ಜಿ ಜಿಯಾ ಅಥವಾ ಜಾಂಗ್ ಜುನ್ ಹಾವೋ ಅವರನ್ನು ಎದುರಿಸಲಿದ್ದಾರೆ.

ಮತ್ತೊಂದೆಡೆ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದವರೇ ಆದ ಕಿರಣ್ ಜಾರ್ಜ್ ವಿರುದ್ಧ ಗಾಯದ ಕಾರಣ ಬಿಟ್ಟುಕೊಟ್ಟರು. ಸೇನ್ ಅವರು ಆಟದಿಂದ ನಿರ್ಗಮಿಸಲು ನಿರ್ಧರಿಸಿದಾಗ ಆರಂಭಿಕ ಗೇಮ್ಸ್‌ನಲ್ಲಿ 0-5 ರಿಂದ ಹಿಂದುಳಿದಿದ್ದರು.
ಇನ್ನು ಈ ಋತುವಿನಲ್ಲಿ ಅತ್ಯಂತ ನೀರಸ ಪ್ರದರ್ಶನ ನೀಡಿರುವ ಭಾರತದ ಸ್ಟಾರ್ ಆಟಗಾರ್ತಿ ಪಿಪಿ ಸಿಂಧು ಈ ಋತುವಿನ ಏಳು ಬೇರೆ ಬೇರೆ ಪ್ರವಾಸಗಳಲ್ಲಿ ಮೊದಲ ಸುತ್ತಿನಲ್ಲಿಯೇ ಸೋತು ನಿರ್ಗಮಿಸಿದ್ದರು. ಆದರೆ ಆಸ್ಟ್ರೇಲಿಯಾ ಓಪನ್‌ನ ಮೊದಲ ಸುತ್ತಿನಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಸಿಂಧು ಅವರಿಗೆ ಮೊದಲ ಸುತ್ತಿನಲ್ಲಿ ಭಾರತದವರೇ ಆದ ಅಶ್ಮಿತಾ ಚಲಿಹಾ ಎದುರಾಳಿಯಾಗಿದ್ದು 36 ನಿಮಿಷಗಳ ಕಾಲ ನಡೆದ ಸೆಣೆಸಾಟದಲ್ಲಿ 21-18 21-13 ರಿಂದ ಗೆಲುವು ಸಾಧಿಸಿದ್ದಾರೆ.
ಇನ್ನು ಪುರುಷರ ಸಿಂಗಲ್ಸ್ ಆರಂಭಿಕ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.19ನೇ ಶ್ರೇಯಾಂಕದ ಆಟಗಾರ ಶ್ರೀಕಾಂತ್ ಅವರು ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು 21-18 21-7 ರಿಂದ ಮಣಿಸಿದ್ದಾರೆ. ಆದರೆ ಆರನೇ ಶ್ರೇಯಾಂಕದ ಎಚ್‌ಎಸ್ ಪ್ರಣಯ್ ಹಾಂಕಾಂಗ್‌ನ ಚೆಯುಕ್ ಯಿಯು ಲೀ ಅವರನ್ನು 21-18 16-21 21-15 ಅಂತರದಿಂದ ಸೋಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications